ರಾಜ್ಯ ಸುದ್ದಿಗಳು
ಬೆಂಗಳೂರು (19-05-202): ರಾಜ್ಯ ಸರ್ಕಾರ ಕೊರೋನಾ ಲಾಕ್ ಡೌನ್ ಪ್ಯಾಕೇಜ್ ನ್ನು ಘೋಷಣೆ ಮಾಡಿದೆ.ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ಸಹಾಯ ಧನ ನೀಡಲಾಗುತ್ತದೆ. ಹಣ್ಣು-ತರಕಾರಿ ಬೆಳಗಾರರಿಗೆ 1 ಹೆಕ್ಟೇರ್ ಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ನೀಡಲಾಗುತ್ತದೆ. ಆಟೋ ಟ್ಯಾಕ್ಸಿ ಚಾಲಕರಿಗೆ ಪ್ರತಿಯೊಬ್ಬರಿಗೂ 3 ಸಾವಿರ ರೂ. ವಿಶೇಷ ಪ್ಯಾಕೇಜ್ ನಲ್ಲಿ ಘೋಷಿಸಲಾಗಿದೆ.
ಕಟ್ಟಡ ಕಾರ್ಮಿಕರಿಗೆ ತಲಾ 3,000 ಅಸಂಘಟಿತ ಕಾರ್ಮಿಕರಾದಂತ ಕ್ಷೌರಿಕರು, ಕುಂಬಾರಿಗಳು, ಕಮ್ಮಾರ 3.5 ಲಕ್ಷ ಜನರಿಗೆ 2 ಸಾವಿರ ನೀಡಲಾಗುತ್ತದೆ.
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ 2 ಸಾವಿರ ರೂ. 2.20 ಲಕ್ಷ ಜನರಿಗೆ ನೀಡಲಾಗುತ್ತದೆ. ಕಲಾವಿದರು, ಕಲಾತಂಡಗಳಿಗೆ ತಲಾ 3 ಸಾವಿರ ನೀಡಲಾಗುತ್ತದೆ. ರೈತರು ಮತ್ತು ಸ್ವಸಾಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರದಿಂದ 1-5-2020 ರಿಂದ ಮರು ಪಾವತಿಸಬೇಕಾದಂತ ಸಾಲದ ಮೊತ್ತವನ್ನು 31-07-2021 ರವರೆಗೆ ವಿಸ್ತರಣೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಮೇ, ಜೂನ್ ತಿಂಗಳಲ್ಲಿ ಉಚಿತವಾಗಿ ಪಡಿತರ ಧಾನ್ಯ. ಇದಕ್ಕಾಗಿ 180 ಕೋಟಿ ಕರ್ಚು ಮಾಡಲಾಗುತ್ತದೆ ಎಂದರು.
ಪಡಿತರ ಚೀಟಿಗಾಗಿ ಅರ್ಚಿ ಸಲ್ಲಿಸಿದವರಿಗೆ, ಪಡಿತರ ಚೀಟಿ ನೀಡದಿದ್ದರೂ, ಬಿಪಿಎಲ್ ಕಾರ್ಡ್ ದಾರರಿಗೆ ಮೇ, ಜೂನ್ ತಿಂಗಳ ಉಚಿತ ಪಡಿತರ, ಎಪಿಎಲ್ ಕಾರ್ಡ್ ದಾರರಿಗೆ ಕೆಜಿಗೆ 15 ರೂಪಾಯಿಯಂತೆ ನೀಡಲಾಗುತ್ತದೆ.
ಬಿಬಿಎಂಪಿ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯ್ತಿಗಳಿಗೆ 50 ಸಾವಿರ ರೂ.ಮೀಸಲು. 2500 ವೈದ್ಯರನ್ನು ಕೋವಿಡ್ ಚಿಕಿತ್ಸೆಗಾಗಿ ಮೂರು ದಿನದೊಳಗೆ ನೇಮಕ ಮಾಡಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಲೈನ್ ಮೆನ್ ಗಳು, ಗ್ಯಾಸ್ ಸಿಲಿಂಡರ್ ತಲುಪಿಸೋರನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ, ಲಸಿಕೆ ನೀಡಲಾಗುತ್ತದೆ ಎಂದರು.
Be the first to comment