ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸುವುದು ಪೂರ್ವಜರು ಮಾಡಿಕೊಂಡು ಬಂದಂತಹ ಸಂಪ್ರದಾಯವಾಗಿದೆ. ಅದರಂತೆ ಈಗಾಗಲೇ ಲೋಕವನ್ನೆ ತತ್ತರಿಸುವಂತೆ ಮಾಡಿರುವ ಕೊರೊನಾ ಹೆಮ್ಮಾರಿಯಿಂದ ಜನರ ಮುಕ್ತರಾಗಿ ಜೀವನ ನಡೆಸುವಂತಾಗಲಿ ಎಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ(ಮಡಿಕೇಶ್ವರ) ಹೇಳಿದರು.
ಪಟ್ಟಣದ ಕುಂಬಾರ ಓಣಿಯಲ್ಲಿನ ಗ್ರಾಮದೇವತೆ ದೇವಸ್ಥಾನದಕ್ಕೆ ಬಿಜೆಪಿ ಮುಖಂಡರೊಂದಿಗೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಮಸ್ಯೆಯು ಬಗೆಹರಿಸಲು ದೇವರ ಕೃಪೆ ಎಷ್ಟು ಮುಖ್ಯವೊ ಪ್ರತಿಯೊಬ್ಬ ಮನುಷ್ಯನ ಜಾಗೃಕತೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಆದ್ದರಿಂದ ಕೊರೊನಾ ಹೆಮ್ಮಾರಿಯಿಂದ ತಪ್ಪಿಸಿಕೊಳ್ಳಲು ವೈದ್ಯರ ಸಲಹೆ ಸೂಚನೆಗಳನ್ನೂ ಯಾರೂ ಬರೆಯಬಾರದು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಪಾಟೀಲ ಕೂಚಬಾಳ ಮಾತನಾಡಿ, ಕೊರೊನಾ ಹೆಮ್ಮಾರಿಯಿಂದ ಸಾಕಷ್ಟು ಬಡ ಜನರು ತೊಂದರೆಗೊಳಗಾಗಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಎಲ್ಲರೂ ಒಂದಾಗಿ ಅವಶ್ಯಕವಿರುವವರಿಗೆ ಸಹಾಯಕ್ಕೆ ಮುಂದಾಗಬೇಕು. ಈಗಾಗಲೇ ಬಡವರಿಗೆ ಉಚಿತ ಆಹಾರ ಪೊಟ್ಟನ ನೀಡುವ ಮೂಲಕ ಪ್ರಭುಗೌಡ ದೇಸಾಯಿ ಅಭಿಮಾನಿಗಳ ಮಹತ್ತರ ಕಾರ್ಯ ಮಾಡುತ್ತಿದ್ದು ಇದರ ಜೊತೆಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೊರೊನಾ ಹೋಗಲಾಡಿಸಲು ಪ್ರಾಥನೆ ಮಾಡುತ್ತಿರುವುದು ಶ್ಲಾಘನೀಯಕಾರ್ಯವಾಗಿದೆ ಎಂದು ಹೇಳಿದರು.
ಬಿಜೆಪಿ ತಾಲೂಕಾಧ್ಯಕ್ಷ ಪರಶುರಾಮ ಪವಾರ, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್‌ಟಿ ಮೊರ್ಚಾ ಜಿಲ್ಲಾ ಉಪಾಧ್ಯಕ್ಷ ದೇವೆಂದ್ರ ವಾಲಿಕಾರ, ಮುಖಂಡರಾದ ವಿಕ್ರಮ ಓಸ್ವಾಲ್, ಎಂ.ಡಿ.ಕುಂಬಾರ, ಮುರಳೀಳಧರ ಬುಡ್ಡೊಡಗಿ, ರುದ್ರಗೌಡ ಅಂಗಡಗೇರಿ, ಸುರೇಶಗೌಡ ಪಾಟೀಲ, ಬಿ.ಎಚ್.ಹಾಲಣ್ಣವರ(ದೊರೆ), ಮಹಾಂತೇಶ ಹಡಪದ ಇದ್ದರು.
Be the first to comment