ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕರೋರ್ವರನ್ನು ರಕ್ಷಿಸಿದ ಕಾನ್ಸ್‌ಟೇಬಲ್ – ಕಾರವಾರದ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

 

ಕಾರವಾರ

CHETAN KENDULI

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೊಂಕಣ ರೈಲ್ವೆ ನಿಲ್ದಾಣದಲ್ಲಿ, ಚಲಿಸುತ್ತಿರುವ ರೈಲನ್ನು ಏರಲು ಹೋದ ಪ್ರಯಾಣಿಕರೊಬ್ಬರು ಆಯ ತಪ್ಪಿ ಬಿದ್ದಿದ್ದು, ಕರ್ತವ್ಯ ನಿರತ ಕಾನ್ಸ್‌ಟೇಬಲ್ ರಕ್ಷಿಸಿದ್ದಾರೆ.ಜನವರಿ 5 ರಂದು ಈ ಘಟನೆ ನಡೆದಿದ್ದು, ಕಾನ್ಸ್‌ಟೇಬಲ್ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾಯಂಕಾಲ 6.07 ಗಂಟೆಗೆ ಬೆಂಗಳೂರು ತೆರಳುವ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲು ಹೊರಟಿತ್ತು. ಚಲನೆಯಲ್ಲಿದ್ದ ರೈಲನ್ನು 59 ವರ್ಷದ ಪುರುಷ ಪ್ರಯಾಣಿಕರು ಏರಲು ಮುಂದಾಗಿದ್ದಾರೆ, ಈ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದರು.

ಬಿದ್ದ ಪ್ರಯಾಣಿಕರು ರೈಲಿನ ಗಾಲಿಗೆ ಸಿಲುಕುವ ಸಾಧ್ಯತೆ ಇದ್ದುದನ್ನು ಗಮನಿಸಿ ತಕ್ಷಣಕ್ಕೆ ಧಾವಿಸಿ ಬಂದ ಕಾನ್ಸ್‌ಟೇಬಲ್ ನರೇಂದ್ರ ನಾಯ್ಕ, ಪ್ರಯಾಣಿಕರ ಕೈ ಹಿಡಿದು ಪಕ್ಕಕ್ಕೆ ಸರಿಸಿದರು.ಕೂದಲೆಳೆ ಅಂತರದಲ್ಲಿ ದೊಡ್ಡ ಅಪಘಾತವೊಂದು ತಪ್ಪಿದ್ದು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪ್ರಥಮ ಚಿಕಿತ್ಸೆ ನೀಡಿ ಬೇರೆ ರೈಲಿನಲ್ಲಿ ಅವರನ್ನು ಕಳುಹಿಸಿಕೊಡಲಾಗಿದೆ.

Be the first to comment

Leave a Reply

Your email address will not be published.


*