ರಾಜ್ಯ ಸುದ್ದಿಗಳು
ಯಾದಗಿರಿ:
ಲಾಕಡೌನ್ ನಿಮಿತ್ಯವಾಗಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಸಾಗಾಟ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು ಇದರ ಬಗ್ಗೆ ಮೇ.27 ರಂದು “ಅಂಬಿಗ್ ನ್ಯೂಸ್” ತಂಡ ಸಾಕ್ಷಾಧಾರಿತವಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಅಲ್ಲದೇ ಸಾರ್ವಜನಿಕರ ಹೇಳಿಕೆಗಳ ಮೆರೆಗೆ ಅಕ್ರಮ ಚಟುವಟಿಕೆಗಳಲ್ಲಿ ಪೊಲೀಸರೂ ಶಾಮಿಲಾಗಿದ್ದಾರೆ ಎಂದು ಹೇಳಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸಿಪಿಐ ದೌಲತ್ ಕುರಿ ಹಾಗೂ ಪಿಎಸ್ಐ ಸಿದ್ದೇಶ್ವರ ನೇತೃತ್ವದ ತಂಡ ಬೀಗಿ ಕಾರ್ಯಾಚರಣೆಯಲ್ಲಿ ತೊಡಗಿ ರಾತ್ರೋರಾತ್ರಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನಗಳನ್ನು ಹಾಗೂ 589 ಲೀಟರ್ ಮದ್ಯ ವಶಕ್ಕೆ ತೆಗೆದುಕೊಂಡು 13 ಜನ ಆರೋಪಿಗಳನ್ನು ಅಂದರ್ ಮಾಡಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಯಾದಗಿರಿ ಜಿಲ್ಲೆಯ ಗಡಿಭಾಗದ ಜಿಲ್ಲೆಯಾದ ವಿಜಯಪೂರದಿಂದ ಅಕ್ರಮವಾಗಿ ಮದ್ಯ ಸಾಗಾಣಿಕೆ ನಡೆದಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸತ್ಯಮೂರ್ತಿ ಅವರ ಮಾರ್ಗದರ್ಶನದಲ್ಲಿ ಶನಿವಾರ ರಾತ್ರಿ ನಾರಾಯಣಪುರ ಪಿಎಸೈ ಮತ್ತು ತಂಡವು ಮೇಲಿನಗಡ್ಡಿ ಗ್ರಾಮದ ಹತ್ತಿರ ಅಕ್ರಮವಾಗಿ ಮದ್ಯವನ್ನು ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ೪ ಕಾರುಗಳು ಮತ್ತು ೧೩ ಜನ ಆರೋಪಿಗಳನ್ನು ವಶಕ್ಕೆ ಪಡೆದು ಒಟ್ಟು ೨೩೯೨೫೭ ರೂ ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ, ಅಕ್ರಮ ಮದ್ಯವನ್ನು ರಾಯಚೂರ ಜಿಲ್ಲೆಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ, ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾರಾಯಣಪೂರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಾಕಷ್ಟು ಅಕ್ರಮಗಳಲ್ಲಿ ಪೊಲೀಸರೂ ಭಾಗಿಯಾಗಿದ್ದಾರೆ ಎನ್ನುವ ಸಾರ್ವಜನಿಕರ ಆರೋಪಕ್ಕೆ ಸಿಪಿಐ ದೌಲತ ಕುರಿ ಹಾಗೂ ಪಿಎಸ್ಐ ಸಿದ್ದೇಶ್ವರ ಅವರ ತಂಡ ಅಕ್ರಮ ಚಟುವಟಿಕೆಗಳಿಗೆ ಪೊಲೀಸ ಯಾವುದೇ ರೀತಿಯ ಸಹಕಾರವಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ. ಅವರಿಗೆ ನಮ್ಮ ಅಂಬಿಗ್ ನ್ಯೂಸ್ ತಂಡದಿಂದಲೂ ಧನ್ಯವಾದಗಳು. ಇದೇ ರೀತಿಯಲ್ಲಿ ನಾರಾಯಣಪೂರ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಇನ್ನೂ ಅನೇಕ ಅಕ್ರಮಗಳನ್ನು ತಡೆಗಟ್ಟಿ ಅದರ ಹಿಂದಿರುವವರಿಗೆ ಕಾನೂನು ರೀತಿಯಾಗಿ ಶಿಕ್ಷಗೆ ಒಳಪಡಿಸಲಿ ಎನ್ನುವುದು ಜನರ ಮನವಿಯಾಗಿದೆ.
Be the first to comment