ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಜನ ಸಾಮಾನ್ಯರಂತೆ ಫ್ರೇಂಟ್‌ಲೈನ್ ವಾರಿಯರ್‍ಸ್‌ಗಳಾದ ಆರೋಗ್ಯ ಇಲಾಖೆ, ಪೊಲೀಸ ಇಲಾಖೆ ಹಾಗೂ ಮಾದ್ಯಮ ಮಿತ್ರರೂ ತಮ್ಮ ಸಂಸಾರವೆಮಧೂ ಹೇಳಿ ಮನೆಯಲ್ಲಿ ಕುಲಿತುಕೊಂಡಿದ್ದರೆ ಜನರ ಪರಿಸ್ಥಿತಿ ಎನಾಗುತ್ತಿತ್ತು ಎನ್ನುವುದನ್ನು ನಾವೆಲ್ಲರೂ ಅರಿತುಕೊಳ್ಳುವುದು ಅಗತ್ಯವಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಜೀವನವನ್ನೂ ಲೆಕ್ಕಿಸದೇ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ವಾರಿಯರ್‍ಸ್‌ಗೆ ಮೊದಲು ಧನ್ಯತೆಯನ್ನು ಅಪರ್ಪಿಸಬೇಕು ಎಂದು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಫ್ರೇಂಟ್‌ಲೈನ್ ವಾರಿಯರ್‍ಸ್‌ಗಳಾದ ಆರೋಗ್ಯ, ಪೊಲೀಸ್ ಹಾಗೂ ಮಾದ್ಯಮದವರಿಗೆ ಎನ್‌ಎಸ್‌ಯುಐ, ತಾಲೂಕಾ ಯುವ ಕಾಂಗ್ರೆಸ್ ಹಾಗೂ ಎಸ್‌ಎಂಡಿ ಸಂಸ್ಥೆಯಡಿಯಲ್ಲಿ ಫೇಸ್‌ಶೀಲ್ಡ್, ಮಾಸ್ಕ್ ಹಾಗೂ ಸಾನಿಟೈಸರ್‌ಗಳನ್ನು ಉಚಿತವಾಗಿ ವಿತರಣೆ ಮಾಡಿ ಅವರು ಮಾತನಾಡಿದರು.
ಕೊರೊನಾ ಮೊದಲೇ ಅಲೆ ಬಂದ ಕ್ಷಣದಿಂದ ಇಂದಿನ ಎರಡನೇ ಅಲೆಯಲ್ಲಿಯೂ ವಾರಿಯರ್‍ಸ್‌ಗಳಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳಿಗೆ ಉಚಿತವಾಗಿ ಮಾಸ್ಕ್, ಫೇಸ್‌ಶೀಲ್ಡ್ ಹಾಗೂ ಸಾನಿಟೈಸರ್‌ಗಳನ್ನು ನೀಡಬೇಕು ಎಂಬ ದಿಸೆಯಲ್ಲಿ ನಮ್ಮ ಒಕ್ಕೂಟದಿಂದ ಈ ಸೇವೆ ಮಾಡಲಾಗಿದೆ ಎಂದು ಅವರು ಹೇಳಿದರು.
ಯುವ ಮುಖಂಡ ಕಾಮರಾಜ ಬಿರಾದಾರ ಮಾತನಾಡಿ, ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ಹಾಗೂ ಪತ್ರಕರ್ತರನ್ನು ಕೊರೊನಾ ಫ್ರೇಂಟ್‌ಲೈನ್ ವಾರಿಯರ್‍ಸ್ ಎಂದು ರಾಜ್ಯ ಸರಕಾರದ ಘೋಷಣೆ ಮಾಡಿದ್ದು ಸ್ವಾಗತಾರ್ಹವಾಗಿದೆ. ಆದರೆ ರಾಜ್ಯ ಸರಕಾರ ಮಾಡಿದ ಘೋಷಣೆಯೊಂದಿಗೆ ಈಗಾಗಲೇ ಕೊರೊನಾ ಅಲೆಯಲ್ಲಿ ನಿಧನರಾದ ಕುಟುಂಬಸ್ಥರಿಗೆ ಸೂಕ್ತ ಪರಿಹಾರದ ಜೊತೆಗೆ ವಾರಿಯರ್‍ಸ್‌ಗೆ ಹೆಚ್ಚಿನ ಭದ್ರತೆಯ ಬಗ್ಗೆ ಆಲೋಚನೆ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಶಿರೋಳ, ಎಸ್.ಡಿ.ಎಂ. ಗ್ರೂಪ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯೆ ರಿಯಾಜ್ ಢವಳಗಿ ಮಾತನಾಡಿದರು.
ಇದೇ ವೇಳೆಯಲ್ಲಿ ತಾಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಆಲೂರ ಗ್ರಾಪಂ ಉಪಾಧ್ಯಕ್ಷೆ ಶೋಭಾ ಶೇಳ್ಳಗಿ ಅವರು ಆರೋಗ್ಯ ಸಿಬ್ಬಂದಿಗಳಿಗೆ, ಪೊಲೀಸರ ಸಿಬ್ಬಂದಿಗಳಿಗೆ ಹಾಗೂ ಪತ್ರಕರ್ತರಿಗೆ ಮಾಸ್ಕ್, ಫೇಸ್‌ಶೀಲ್ಡ್ ಹಾಗೂ ಸಾನಿಟೈಸರ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೂಸುಫ ನಾಯ್ಕೋಡಿ, ನಗರದ ಘಟಕದ ಎನ್.ಎಸ್.ಯು.ಐ ಅಧ್ಯಕ ಅಬೂಬ್ಕರ ಹಡಗಲಿ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಗ್ರಾಪಂ ಸದಸ್ಯ ಪ್ರಶಾಂತ ತಾರನಾಳ, ದಾವಲ್ ಗೊಳಸಂಗಿ, ಮೊಸೀನ ಘಾಟಿ, ಹುಸೇನ ಮುಲ್ಲಾ, ಅಲ್ತಾಫ ಮಕಾನದಾರ, ದಿಕ್ಷೀತ್ ದೇಸಾಯಿ, ಮಾನಪ್ಪ ನಾಯಕ, ಬಾಫ ಢವಳಗಿ, ಅಸ್ಪಾಕ ನಾಡಗೌಡ, ನಿಸಾರ ಮಮದಾಪೂರ, ಯೂಸುಫ್ ವಾಲಿಕಾರ, ಟಿಪ್ಪು ಮ್ಯಾಗೇರಿ, ಸುಹೇಬ ಪಟೇಲ, ಸರತಾಜ್ ಬಾಗೇವಾಡಿ, ಮಹಿಬೂಬ ಮೊಕಾಶಿ, ಸಂಗು ಚಲವಾದಿ, ಶಿವುಕುಮಾರ ಹಿರೇಮಠ, ಯಾಸೀನ ಬಾಗವಾನ ಇದ್ದರು.
Be the first to comment