ರಾಜ್ಯ ಸುದ್ದಿಗಳು
ಮಸ್ಕಿ
ಶ್ರೀನಗರದ ಹಿಮದ ಗುಡ್ಡದಲ್ಲಿ ಹುಟ್ಟೂರು ಮಸ್ಕಿಯ ಹೆಸರು ಬರೆದು ಯೋಧ ತಮಗಿರುವ ಹುಟ್ಟೂರಿನ ಮೇಲಿನ ಪ್ರೀತಿ ಮತ್ತು ಕನ್ನಡ ಭಾಷಾಭಿಮಾನವನ್ನು ವ್ಯಕ್ತಪಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಮಸ್ಕಿಯಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಮಸ್ಕಿಯ ನಿವಾಸಿಯಾದ ಮನೋಜ್ ಕುಮಾರ್ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಡ ಶಾಲೆ ಯ ವಿದ್ಯಾರ್ಥಿಯಾಗಿದ್ದರು. ಪ್ರಸ್ತುತ ಶ್ರೀ ನಗರ ಹಿಮದ ಹಾದಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಮದ ಮೇಲೆ ತಮ್ಮ ಸ್ವಂತ ಊರಾದ ಮಸ್ಕಿ ಎಂದು ಬರೆಯುವ ಮೂಲಕ ಮಸ್ಕಿಯ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
Be the first to comment