ಜಿಲ್ಲಾ ಸುದ್ದಿಗಳು
ಕೋಟ
ಸಹಕಾರಿ ವ್ಯವಸಾಯಕ ಸಂಘ ಕೋಟ ಇದರ ವತಿಯಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಲೋಕಾರ್ಪಣೆ ಹಾಗೂ ಕೃಷಿ ಮಳಿಗೆ ಮತ್ತು ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ಬಿಡುಗಡೆ ಸಮಾರಂಭ ಕಾರ್ಯಕ್ರಮವು ದಿನಾಂಕ 10 ರಂದು ಗುಂಡ್ಮಿ ಶಾಖಾ ವಠಾರದಲ್ಲಿ ನಡೆಯಿತ್ತು. ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು.ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಉದ್ಯೋಗಿಯಾದ ಸುರೇಶ್ ಕಾರ್ಕಡ ಇವರು ರೈತ ಗೀತೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಘದ ನಿರ್ದೇಶಕರಾದ ಮಂಜುನಾಥ ಗಿಳಿಯಾರು ಪ್ರಾಸ್ತವಿಕ ನುಡಿಯನ್ನಾಡಿ ಎಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರೈತ ಸಂಜೀವಿನಿ ಕ್ರೆಡಿಟ್ ಕಾರ್ಡನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎನ್ ಎಂ. ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿ. ಅವರು ಮಾತನಾಡಿ ದೇಶದಲ್ಲಿ ಪ್ರಥಮವಾಗಿ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರವನ್ನು ಒಂದು ಸಹಕಾರಿ ಕ್ಷೇತ್ರಕ್ಕೆ ಕೊಟ್ಟಂತಹ ಸನ್ಮಾನ್ಯ ಮಾಜಿ ಕೇಂದ್ರ ಹಸಿ ಗೊಬ್ಬರ ಖಾತೆ ಸಚಿವರಾದ ಸದಾನಂದ ಗೌಡರು. ಅವರು ಕೇಂದ್ರದಲ್ಲಿ ಸಚಿವರಾಗಿದ್ದರಿಂದ ಒಂದು ಪ್ರಧಾನ ಮಂತ್ರಿಯ ಜನ ಔಷಧಿ ಕೇಂದ್ರದ ವಿತರಣೆಯ ಒಂದು ಜವಾಬ್ದಾರಿಯನ್ನು ನಮ್ಮ ಮಹಾಮಂಡಲಕ್ಕೆ ಕೊಟ್ಟರು. ರಾಜ್ಯದಲ್ಲಿ ಪ್ರಪ್ರಥಮವಾಗಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಸಹಕಾರಿ ಸಂಸ್ಥೆಯಲ್ಲಿ ಸ್ಥಾಪನೆ ಮಾಡಿದ್ದಿದ್ದರೆ ಅದು ಕೋಟ ಸಹಕಾರಿ ವ್ಯವಸಾಯ ಸಂಘದಲ್ಲಿ ಎಂದು ಹೇಳಿದರು. ಕೃಷಿ ಮಳಿಗೆ ವಿಚಾರವಾಗಿ ಹೇಳುವುದಾದರೆ ರೈತರಿಗೆ ಬೇಕಾದಂತ ಎಲ್ಲ ವಸ್ತುಗಳು ಒಂದೇ ಕಡೆ ಸಿಗುವಾಗೆ ಇದನ್ನು ಯಾರೂ ಮಾಡದ ಕೆಲಸವನ್ನು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಯೇ ಪ್ರಥಮವಾಗಿ ಕೋಟ ಸಿ ಎ ಬ್ಯಾಂಕ್ ನವರು ಮಾಡಿದ್ದಾರೆ.ಅದಕ್ಕೆ ಅವರಿಗೆ ಅಭಿನಂದನೆಗಳು ಎಂದರು. ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ನ್ನು ನೀಡಿ ಜನರ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ನಮ್ಮ ಕೋಟ ಸಿ. ಎ ಬ್ಯಾಂಕ್ ನವರು ಮಾಡಿದ್ದಾರೆ ಎಂದು ಹೇಳಿದರು.
ಅಲ್ಲದೆ ಜನ ಔಷಧಿಯನ್ನು ಕಡಿಮೆ ವೆಚ್ಚದಲ್ಲಿ ಹುಬ್ಬಳ್ಳಿಯಿಂದ ಪೂರೈಕೆ ಮಾಡಲು ವ್ಯವಸ್ಥೆ ಮಾಡುತ್ತೇನೆ ಎಂದು ಡಾ. ರಾಜೇಂದ್ರ ಕುಮಾರ್ ಭರವಸೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ತಿಮ್ಮ ಪೂಜಾರಿ ಅವರು ಮಾತನಾಡಿ ಕೋಟ ಸಹಕಾರಿ ವ್ಯವಸಾಯಕ ಬ್ಯಾಂಕು ಕೇವಲ ಠೇವಣಿ ಪಡೆದು ಸಾಲ ಕೊಡುವುದಕ್ಕೆ ಸೀಮಿತವಾಗಿರದೆ ನಮ್ಮ 11 ಗ್ರಾಮದ ವ್ಯಾಪ್ತಿಯ ಕಟ್ಟಕಡೆಯ ಸದಸ್ಯರಿಗೂ ಕೂಲಿ ಮಾಡುವ ಸದಸ್ಯರಿಗೂ ಸ್ಪಂದಿಸ ತಕ್ಕಂತ ಕಾರ್ಯಕ್ರಮ ಕೊಡಬೇಕೆಂದು ಒಂದು ಯೋಜನೆ ಹಾಗೂ ನಮ್ಮ ಆಡಳಿತ ಮಂಡಳಿಯವರ ಚಿಂತನೆಯಾಗಿದೆ.
ಎಲ್ಲವನ್ನು ಒಂದೇ ಸಲ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಲ್ಲವನ್ನು ಹಂತಹಂತವಾಗಿ ಮಾಡುತ್ತ ಬರುತ್ತೇವೆ. ಆ ನಿಟ್ಟಿನಲ್ಲಿ ಪ್ರಾರಂಭದಲ್ಲಿ ಮಹಿಳೆಯರಿಗಾಗಿ ಯೋಜನೆಯನ್ನು ಮಾಡುತ್ತಿದ್ದೇವೆ. ಸಮೃದ್ಧಿ ಸ್ವಸಾಯ ಸಂಘವನ್ನು ರಚಿಸುವ ಮೂಲಕ ಸಹಕಾರವನ್ನು ನೀಡುತ್ತ ಬಂದಿದ್ದವೆ. ಸಾಲ ಪಡೆದ ಸದಸ್ಯನು ತೀರಿಹೋದಾಗ ಮನೆಯವರು ಜಿಜ್ಞಾಸೆಗೆ ಒಳಗಾದವರಿಗೆ ಒಂದು ನಿಧಿಯನ್ನು ಸೃಷ್ಟಿಸಿ ಶೇಕಡ 25% ನಿಧಿಯಿಂದ ನೀಡಿ ಉಳಿದ ಶೇಕಡ 75% ಆ ಮನೆಯವರು ಭರಿಸುವಾಗೆ ಮಾಡಿದ್ದೇವೆ ಎಂದು ಅಧ್ಯಕ್ಷ ತಿಮ್ಮ ಪೂಜಾರಿ ಹೇಳಿದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗಡೆ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ, ಉಪ್ಪೂರು ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ಶೆಟ್ಟಿ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಬಿ. ಶೋಭಾ, ಸಾಸ್ತಾನ ಸಿ ಎ ಬ್ಯಾಂಕ್ ಅಧ್ಯಕ್ಷ ಶ್ರೀಧರ್, ಎಸ್ ಸಿ ಡಿ ಸಿ ಸಿ ಬ್ಯಾಂಕ್ ಮೇಲ್ವಿಚಾರಕರಾದ ರಾಜಾರಾಮ್ ಶೆಟ್ಟಿ, ಸಂಘದ ನಿರ್ದೇಶಕರಾದ ನಾಗರಾಜ ಹಂದೆ, ವಸಂತ್ ಕುಮಾರ್ ಶೆಟ್ಟಿ, ರವೀಂದ್ರ ಕಾಮತ್, ರಾಜೇಶ ಉಪಾಧ್ಯ, ರಂಜಿತ್ ಕುಮಾರ್, ಮಹೇಶ್ ಶೆಟ್ಟಿ, ಶ್ರೀಮತಿ ಪ್ರೇಮ ಎಸ್. ಕುಮಾರಿ ರಶ್ಮಿತಾ, ಶ್ರೀಮತಿ ಗುಲಾಬಿ ಡಿ ಬಂಗೇರ ಹಾಗೂ ಸಂಘದ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.ಸಂಜು ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು.
Be the first to comment