ಜಿಲ್ಲಾ ಸುದ್ದಿಗಳು
ಮಸ್ಕಿ
- ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಲಿಂಗಸುಗೂರು) ಉಪ ಮಾರುಕಟ್ಟೆ ಮಸ್ಕಿ ಕಛೇರಿ ಸಿಬ್ಬಂದಿಗಳ ಸಾಲು ಸಾಲು ಸಮಸ್ಯೆಯನ್ನು ಕೆಳೋರೆ ದಿಕ್ಕಿಲ್ಲದಂತಾಗಿದೆ. ಮಲ್ಲ ರಡ್ಡೆಪ್ಪ ಎಪಿಎಂಸಿ ಅಧ್ಯಕ್ಷರು ಲಿಂಗಸುಗೂರು ಇವರ ನೇತತ್ವದಲ್ಲಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಮಸ್ಕಿ ಕಛೇರಿ ಗೆ 6 ಸಿಬ್ಬಂದಿಗಳನ್ನು ಕಮಿಷನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿರುತ್ತದೆ. 6 ಸಿಬ್ಬಂದಿಗಳನ್ನು ನೇಮಕ ಮಾಡಿ 2 ವರ್ಷಕ್ಕೂ ಅಧಿಕ ದಿನಗಳೇ ಗತಿಸಿವೆ. ಇನ್ನೂ ಯಾವುದೇ ರೀತಿಯ ಕಮಿಷನ್ ಹಣವಾಗಲಿ, ಮಾಸಿಕ ವೇತನವಾಗಲಿ ನೀಡಿರುವುದಿಲ್ಲ ಎಂದು ಉಪ ಮಾರುಕಟ್ಟೆ ಮಸ್ಕಿ ಸಿಬ್ಬಂದಿಯ ನೋವಿನ ಅಳಲಾಗಿದೆ ಇವರ ನೋವಿಗೆ ಸ್ಪಂದಿಸುವವರು ಯಾರು ? ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಕಛೇರಿಯ ಆವರಣದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದ ನೀರೇ ಆಸರೆಯಾಗಿತ್ತು. ಕುಡಿಯುವ ನೀರಿನ ಘಟಕದ ಮೋಟಾರ್ ಕೆಟ್ಟುಹೋಗಿ 2 ರಿಂದ 3 ವರ್ಷಗಳೇ ಕಳೆದಿವೆ ಇನ್ನೂ ರಿಪೇರಿ ಮಾಡುವ ಸಾಹಸಕ್ಕೆ ಕೈಹಾಕದ ಅಧಿಕಾರಿ ವರ್ಗ. ದಿನನಿತ್ಯವೂ ಯಾವುದೋ ವಿಚಾರವಾಗಿ ಕಛೇರಿಗೆ ಬರುವ ಸಾರ್ವಜನಿಕರು ಹಾಗೂ ಸಿಬ್ಬಂದಿ ವರ್ಗದವರು ನೀರನ್ನು ಮನೆಯಿಂದಲೇ ತರಬೇಕು ಇಲ್ಲವೇ ಹತ್ತಿರದ ಹೋಟೆಲ್ ಗಳಲ್ಲಿ ಹಣ ಪಾವತಿಸಿ ಕುಡಿಯುವ ಪರಿಸ್ಥಿತಿ ಬಂದೊದಗಿದೆ. ಇನ್ನೂ ಕಛೇರಿಯ ವ್ಯವಸ್ಥೆ ಬಗ್ಗೆ ಕೆಳಲೇಬೇಡಿ! ಕಟ್ಟಡದ ಮೇಲ್ಛಾವಣಿಯು ಡಿಸೆಂಬರ್ 27 2021 ರಂದು ನಡೆದ ಪುರಸಭೆ ಚುನಾವಣೆಗೂ ಮುಂಚೆ ಅಂದರೆ 15 ದಿನಗಳ ಹಿಂದೆಯೇ ಕಛೇರಿಯ ಮೇಲ್ಛಾವಣಿಯೂ ಕುಸಿದಿದ್ದು, ಇಂದೋ..ನಾಳೆಯೋ.. ಕುಸಿಯುವ ಹಂತದಲ್ಲಿರುವ ಮೇಲ್ಛಾವಣಿಯನ್ನೇ ನೋಡುತ್ತಾ ದಿನ ನಿತ್ಯವೂ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಕಾವಲುಗಾರರು ಜೀವ ಭಯದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಮಿತಿಗೆ ಸಂಭಂದಿಸಿದ ಎರಡು ಗೋದಾಮುಗಳು ಬಳಕೆ ಮಾಡದೆ ಮೂಲೆ ಸೇರಿವೆ. ಕೆಲವು ರೈತರು ಆ ಗೋದಾಮು ಗಳಲ್ಲಿ ತಾವು ಬೆಳೆದ ಬೆಳೆಗಳಾದ ಭತ್ತ, ತೊಗರಿ ಇನ್ನಿತರೇ ಧಾನ್ಯಗಳನ್ನು ಕೆಲವೊಂದಿಷ್ಟು ದಿನಗಳವರೆಗೆ ಸಂಗ್ರಹ ಮಾಡಲು ಅನುಕೂಲ ಮಾಡಿಕೊಡುತ್ತಿಲ್ಲ ಎಂಬುದು ತುಂಬಾ ಶೋಚನೀಯ ಸಂಗತಿಯಾಗಿದೆ. ಇಂತಹ ಸಾಲು ಸಾಲು ಅವ್ಯವಸ್ಥೇ ಹಾಗೂ ಸಿಬ್ಬಂದಿಗಳ ಸಂಬಳ
ಬಾಕ್ಸ್2019-20 ಕೋವಿಡ್-19 ಅಲೆಯು ಬಂದಾಗಿನಿಂದ ಇಲ್ಲಿಯವರೆಗೆ ಸಂಬಳವೇ ನೀಡಿರುವುದಿಲ್ಲ.ಕಛೇರಿಯಲ್ಲಿ ಕುಡಿಯುವ ನೀರು, ಶೌಚಾಲಾಯದ, ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲಲ್ಲೇ ಕಾರ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ನೊಂದ ಸಿಬ್ಬಂದಿಯ ಅಳಲಾಗಿದೆ. ಹೆಸರೇಳಲು ಇಚ್ಛಿಸದ ಸಿಬ್ಬಂದಿಬಾಕ್ಸ್ಉಪ ಮಾರುಕಟ್ಟೆ ಮಸ್ಕಿ ಕಛೇರಿಯಲ್ಲಿ ಕುಡಿಯುವ ನೀರು, ವಿದ್ಯುತ್ ಬಲ್ಬ್, ಶೌಚಾಲಯದ ವ್ಯವಸ್ಥೆ ಇಲ್ಲದೆ ದಿನ ನಿತ್ಯವೂ ನರಕ ಯಾತನೆ ಅನುಭವಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಮತ್ತು ಸಾರ್ವಜನಿಕರಿಗೆ ನ್ಯಾಯ ಒದಗಿಸಿ, ಸಂಭದಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ನಿವಾಸ ಅಮರೇಶ ನಾಯಕ ಮಸ್ಕಿ,
Be the first to comment