ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಶ್ರೀಮಂತ ಗ್ರಾಮ ಪಂಚಾಯಿತಿ ಅಣ್ಣೇಶ್ವರ ಗ್ರಾಪಂಗೆ ಬರುವ ಪಿಡಿಒ ಹುದ್ದೆಗೆ ಗುದ್ದಾಟ ಶುರುವಾಗಿದೆ.ಈಗಾಗಲೇ ಈ ಹಿಂದೆ ಪಿಡಿಒ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಪಿಡಿಒ ವೆಂಕಟೇಶ್ ಇನಾಂದಾರ್ ಅವರಿಗೆ ಸರಕಾರ ಪಿಡಿಒ ಆಗಿ ಆದೇಶ ಮಾಡಿದ ನಂತರ ಪಿಡಿಒ ಕುಮಾರ್ ಕೋರ್ಟ್ ಮೆಟ್ಟಿಲು ಹೇರಿ, ಮತ್ತೇ ವೆಂಕಟೇಶ್ ಇನಾಂದಾರ್ ಅವರಿಗೆ ಪಿಡಿಒ ಆಗಿ ಮುಂದುವರೆಯುವಂತೆ ನಿರ್ದೇಶನ ನೀಡಿದ ನಂತರದ ದಿನಗಳ ಬೆಳವಣಿಕೆಯಲ್ಲಿ ಕುಮಾರ್ ಅವರನ್ನು ಪಿಡಿಒ ಆಗಿ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಪಂವೊಂದಕ್ಕೆ ವರ್ಗಾವಣೆಗೊಂಡರು. ತದ ನಂತರ ಕೋರ್ಟ್‌ನಲ್ಲಿ ಕುಮಾರ್ ಅವರಿಗೆ ಕರ್ತವ್ಯ ನಿರ್ವಹಿಸುವಂತೆ ಆದೇಶ ಬಂದ ನಂತರ ಸರಕಾರ ಗಮನಕ್ಕೆ ಕಳುಹಿಸಿಕೊಡಲಾಗಿದೆ.
ಪಿಡಿಒ ವೆಂಕಟೇಶ್ ಇನಾಂದರ್ ಇತ್ತಿಚೆಗೆ ನಡೆದ ಬೆಳವಣಿಗೆಯಲ್ಲಿ ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಅಣ್ಣೇಶ್ವರ ಗ್ರಾಪಂನ ವಿಶೇಷ ತನಿಖೆಯನ್ನು ನಡೆಸುತ್ತಿದ್ದು, ಅದರ ವರದಿಯನ್ನು ಸರಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಸುಮಾರು 2010-12ನೇ ಸಾಲಿನಿಂದ ಇಲ್ಲಿಯ ತನಕ ಪಂಚಾಯಿತಿಯಲ್ಲಿ ಪಿಡಿಒ ಮತ್ತು ಅಧ್ಯಕ್ಷರ ಮೇಲೆ ಹಲವಾರು ರೀತಿ ದೂರುಗಳು ಬಂದ ಹಿನ್ನಲೆಯಲ್ಲಿ ದಾಖಲೆಗಳು ಸಹ ಜಿಪಂ ಕಚೇರಿಗೆ ಸಲ್ಲಿಕೆಯಾಗಿದ್ದು, ಇದರ ಆಧಾರದಡಿಯಲ್ಲಿ ಈಗಾಗಲೇ ಸರಕಾರ ತನಿಖೆಗೆ 5 ಜನರನ್ನು ಒಳಗೊಂಡ ತಂಡ ರಚನೆಯಾಗಿದೆ. ತಂಡದಿಂದ ಪರಿಶೀಲನೆ ನಡೆಸಿ ವರದಿಯನ್ನು ತರೆಸಿಕೊಂಡಿದ್ದು, ಪಂಚಾಯಿತಿಯಲ್ಲಿ ಆಗಿರುವ ನಷ್ಟ ಮತ್ತು ಅವ್ಯವಹಾರಗಳ, ಅನಾಮದೇಯ ಖಾತೆಗಳ ಬಗ್ಗೆ ಸಮಗ್ರ ಮಾಹಿತಿಪಡೆಯಲಾಗಿದೆ. ಇದರ ಪ್ರತಿಗಳನ್ನು ಸರಕಾರದ ಹಂತದಲ್ಲಿ ಕಳುಹಿಸಿಕೊಡಲಾಗಿದೆ ಈ ಬಗ್ಗೆ ಇನ್ನೆರಡು ದಿನಗಳಲ್ಲಿ ತನಿಖಾ ಪ್ರಕರಣ ಹೊರಬೀಳಲಿದೆ.
ಇಡೀ ಪ್ರಕರಣವನ್ನು ಎಸಿಬಿ, ಸಿಸಿಬಿಗೆ ವಹಿಸಿಕೊಡಲು ಶಿಫಾರಸ್ಸು ಮಾಡಲಾಗಿದೆ. ನಷ್ಟ, ಅವ್ಯವಹಾರ ಮತ್ತು ಇತರೆ ಅಕ್ರಮಗಳ ಬಗ್ಗೆ ತನಿಖೆ ಆಧಾರದ ಮೇಲೆ ಭಾಗಿಯಾಗಿರುವ ನೌಕರರು,ಅಧಿಕಾರಿವರ್ಗ,ಜನಪ್ರತಿನಿಧಿಗಳಾಗಲೀ ಕಂಡುಬಂದಲ್ಲಿ ಅತ್ಯಂತ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪಿಡಿಒಗಳಾದ ಕುಮಾರ್ ಮತ್ತು ವೆಂಕಟೇಶ್ ಇನಾಂದಾರ್ ಇಬ್ಬರ ವಿರುದ್ಧವೂ ದೂರುಗಳು ದಾಖಲಾಗಿದೆ. ತನಿಖೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲಿಯ ತನಕ ಗ್ರಾಪಂ ನೊಡಲ್ ಅಧಿಕಾರಿಯಾಗಿ ನಾರಾಯಣಸ್ವಾಮಿ ಅವರನ್ನು ನಿಯೋಜನೆಗೊಳಿಸಲಾಗಿದೆ ಎಂದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಯಾವುದೇ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದರೆ, ಕೂಡಲೇ ಅವರನ್ನು ಅಮಾನತ್ತುಗೊಳಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಪಂಚಾಯಿತಿಯಲ್ಲಿ ಕನಿಷ್ಠಪಕ್ಷ ಒಂದು ವರ್ಷ ಪಿಡಿಒ ಸೇವೆ ಸಲ್ಲಿಸಿದರೆ ಪಂಚಾಯಿತಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇಡೀ ರಾಜ್ಯದಲ್ಲಿ ಶ್ರೀಮಂತ ಪಂಚಾಯಿತಿಯಾಗಿರುವ ಅಣ್ಣೇಶ್ವರ ಗ್ರಾಪಂಗೆ ಬರುವಂತಹ ಪಿಡಿಒಗಳು 6-3 ತಿಂಗಳಿಗೆ ಒಬ್ಬರಂತೆ ವರ್ಗಾವಣೆಯಾಗುತ್ತಿದ್ದರೆ, ಅಭಿವೃದ್ಧಿಕಾಣಲು ಸಾಧ್ಯವೇ ಎಂದು ಜಿಪಂ ಸಿಇಒ ಅವರನ್ನು ಪ್ರಶ್ನಿಸಿದರು. ಆದರೆ, ಈತರಹದಲ್ಲಿ ಅವ್ಯವಹಾರ ಮಾಡುವಂತಹ ಜನಪ್ರತಿನಿಧಿಗಳೊಂದಿಗೆ ಅಕ್ರಮಗಳಿಗೆ ಸಹಕರಿಸುವ ಪಿಡಿಒಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಗುಡುಗಿದರು.
Be the first to comment