ಜಿಲ್ಲಾ ಸುದ್ದಿಗಳು
ಭಟ್ಕಳ
ಕೇಂದ್ರ ಸರಕಾರದ ಮೂರು ರೈತ ವಿರೋಧಿ ಕಾಯ್ದೆಗಳು ರದ್ದಾಗಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯ ಖಾತ್ರಿ ಕಾನೂನು ಜಾರಿಗೆ ಬರಬೇಕು, ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳು ವಾಪಾಸಾಗಬೇಕು, ಸಾರ್ವತ್ರಿಕ ವಲಯಗಳ ಖಾಸಗೀಕರಣ ನಿಲ್ಲಲು ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.ಸೆ.೨೭ರಂದು ರಾಷ್ಟ್ರವ್ಯಾಪಿ ಭಾರತ್ ಬಂದ್ ಕರೆ ನೀಡಿದ್ದನ್ನು ಬೆಂಬಲಿಸಿ ಸಲ್ಲಿಸಿದ ಮನವಿಯಲ್ಲಿ ಈ ಕಾಯ್ದೆಗಳು ಜಾರಿಯಾದರೆ, ಸಾಗುವಳಿ ಭೂಮಿ-ಕೃಷಿ ಬೆಳೆಗಳ ಆಯ್ಕೆ-ಬೆಳೆದ ಬೆಳೆಗೆ ಬೆಲೆ ಕೇಳುವ ಸ್ವಾತಂತ್ರ‍್ಯ ಸೇರಿದಂತೆ ರೈತಾಪಿ ವರ್ಗದ ಸ್ವಾವಲಂಬನೆಯೆ ಸರ್ವನಾಶವಾಗಿ ಹೋಗಲಿದೆ. ಕಾಪೆರ್Çರೇಟ್ ಕಂಪನಿಯ ಕಾಲಾಳುಗಳಾಗಿ, ಖೈದಿ ಕೆಲಸಗಾರರಾಗಿ ರೈತರು ದಾಸ್ಯದ ಹೊಸ ನೊಗ ಹೊರಬೇಕಾಗುತ್ತದೆ. ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ-ಎಪಿಎಂಸಿಗಳ ಮೂಲಕ ಬೆಂಬಲ ಬೆಲೆಯ ಖಾತ್ರಿ ಕೊಡಬೇಕೆಂದು ಕಳೆದ ೧೦ ತಿಂಗಳುಗಳಿAದ ದೆಹಲಿಯ ಸುತ್ತಾ ಮುತ್ತಾ ರೈತರು ಮಹಾ ಸಂಘರ್ಷ ಸಾರಿದ್ದಾರೆ. ೫೦೦ಕ್ಕೂ ಹೆಚ್ಚು ಸಂಘಟನೆಗಳ ಕೂಡು ಪಡೆಯಾದ ಸಂಯುಕ್ತ ಕಿಸಾನ ಮೋರ್ಚಾ ದಿನಕ್ಕಿಷ್ಟು ವಿಸ್ತಾರಗೊಳ್ಳುತ್ತಾ ಭಾರತ ಬಂದ್‌ಗೆ ಕರೆ ನೀಡಿದೆ. ಈ ಹೋರಾಟವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಬೇಕಾದ ಹೊಣೆಗಾರಿಕೆಯಲ್ಲಿ ಈ ದೇಶದ ಕಾರ್ಮಿಕರು, ದಲಿತ-ದಮನಿತರು, ವಿದ್ಯಾರ್ಥಿ-ಯುವಜನರು ವಿಶೇಷವಾಗಿ ಮಹಿಳೆಯರು ಅತಿ ಹೆಚ್ಚಿನ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.
ಮನವಿಯಲ್ಲಿ ಕೇಂದ್ರ ಸರಕಾರದ ಮೂರು ರೈತ ವಿರೋಧಿ ಕಾಯ್ದೆಗಳು ರದ್ದಾಗಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯ ಖಾತ್ರಿ ಕಾನೂನು ಜಾರಿಗೆ ಬರಬೇಕು, ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳು ವಾಪಾಸಾಗಬೇಕು, ಸಾರ್ವತ್ರಿಕ ವಲಯಗಳ ಖಾಸಗೀಕರಣ ನಿಲ್ಲಬೇಕು ಎಂದೂ ಆಗ್ರಹಿಸಲಾಗಿದೆ.ಮನವಿಯನ್ನು ಸಲ್ಲಿಸುವ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಜಿಲ್ಲಾಧ್ಯಕ್ಷ ಡಾ. ನಸೀಮ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ಶೌಖತ್ ಖತೀಬ್, ಯುನುಸ್ ರುಕ್ನುದ್ಧೀನ್, ಜಬ್ಬಾರ್ ಅಸಾದಿ, ಅಸ್ಲಂ ಶೇಖ, ಐ.ಡಿ. ಖಾನ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಚೇರಿಯ ವಿಜಯಲಕ್ಷ್ಮೀ ಮಣಿ ಮನಿವಿಯನ್ನು ಸ್ವೀಕರಿಸಿದರು.
Be the first to comment