ಮತ್ತೇ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾದ ಶಾಸಕ ನಡಹಳ್ಳಿ…!!! ಹಾಲುಮತದ ಮೂಲ ಗುರುಪೀಠದ ಸರೂರ ಗ್ರಾಮದಿಂದ ಉಚಿತ ನೋಟ್ ಬುಕ್ ವಿತರಣಾ ಕಾರ್ಯಮಕ್ಕೆ ಚಾಲನೆ…!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

ಜಾಹಿರಾತು

ಮುದ್ದೇಬಿಹಾಳ:

CHETAN KENDULI

ಶಿಕ್ಷಣ ಜ್ಞಾನವನ್ನು ಯಾವುದೇ ತೊಂದರೆ ಇಲ್ಲದೇ ಪ್ರತಿಯೊಬ್ಬ ಬಡ ವಿದ್ಯಾರ್ಥಿಯೂ ಹೊಂದಬೇಕು ಎಂಬ ಕನಸಿನೊಂದಿಗೆ ಯಾವುದೇ ರಾಜಕೀಯ ಅಧಿಕಾರದಾಸೆ ಇಲ್ಲದೇ ತುಮಕೂರಿನ ಸಿದ್ದಗಂಗಾ ಶ್ರೀಗಳ ಆಶ್ರಮದ ವಾಡಿಕೆಯಂತೆ ಸಮಾಜ ಸೇವೆ ನಿಂತು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆಯನ್ನು ಪ್ರಾರಂಭಿಸಿದ್ದ ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಮತ್ತೇ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತ್ತೇ ಮುದ್ದೇಬಿಹಾಳ ತಾಲೂಕಿನ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ.


ಹೌದು, ಈಗಾಗಲೇ ರಾಜ್ಯ ಸರಕಾರದಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಿಲಾಗುತ್ತಿದ್ದು ಎ.ಎಸ್.ಪಾಟೀಲ ನಡಹಳ್ಳಿ ಅವರು ಮಂಗಳವಾರ ಮುದ್ದೇಬಿಹಾಳ ತಾಲೂಕಿನ ಹಾಲುಮತದ ಮೂಲ ಗುರುಪೀಠದ ಸರೂರ ಗ್ರಾಮದಿಂದ ಪ್ರಾರಂಭಿಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದು ಹಾಲುಮತದ ಮೂಲ ಗುರುಪೀಠದ ಆರ್ಶಿವಾದವನ್ನು ಪಡೆದುಕೊಂಡಿದ್ದಾರೆ.

ಈ ಸಂರ್ಭಧಲ್ಲಿ ಮಾತನಾಡಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಕೇವಲ ಶಿಕ್ಷಕರ ಜವಾಬ್ದಾರಿಯೇ ಇರುವುದಿಲ್ಲ. ಇವರೊಂದಿಗೆ ಪೋಷಕರ ಜವಾಬ್ದಾರಿಯೂ ಅಷ್ಟೇ ಇರುತ್ತದೆ ಎನ್ನುವುದು ಮೊದಲು ತಿಳಿದುಕೊಳ್ಳಬೇಕು. ಇತರೆ ಕಾರಣದಿಂದ ತಾತ್ಕಾಲಿಕವಾಗಿ ನಾನು ಮೊದಲು ನೀಡುತ್ತಿದ್ದ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು ಮತ್ತೇ ಪ್ರಾರಂಭಿಸಿದ್ದೇನೆ. ಕೇವಲ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಪಿಯುಸಿ ಸೇರಿದಂತೆ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೂ ವಿವಿಧ ಸೇವೆ ಒದಗಿಸಬೇಕು ಎಂಬ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದು ಶೀಘ್ರದಲ್ಲಿಯೇ ಅದನ್ನು ಅನುಷ್ಠಾನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.



ಉದ್ಯಮಿ ಭರತ ಪಾಟೀಲ ನಡಹಳ್ಳಿ ಮಾತನಾಡಿ, ಸಮಾಜ ಸೇವೆಯೆಂದರೆ ಸಾಕಷ್ಟು ದಾರಿಗಳಿವೆ. ಅಂತಹ ದಾರಿಯಲ್ಲಿ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ಕೆ ನಮ್ಮ ತಂದೆಯವರು ಮತ್ತೇ ಪ್ರಾರಂಭಿಸಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಒಂದು ನೋಟ್ ಬುಕ್ ಓರ್ವ ವಿದ್ಯಾರ್ಥಿಯ ಜೀವನವನ್ನೆ ಬದಲಾವಣೆ ಮಾಡುವ ಶಕ್ತಿ ಇರುತ್ತದೆ. ಇಂತಹ ನೋಟ್ ಬುಕ್ ಗಳು ಯಾವುದೇ ಕಾರಣಕ್ಕೂ ದುರುಪಯೋಗ ಮಾಡದಂತೆ ನೋಡಿಕೊಳ್ಳಬೇಕು. ನಿಮ್ಮ ಹತ್ತಿರ ನೋಟ್ ಬುಕ್ಸ ಇದ್ದರೂ ನಿಮಗೆ ಉಚಿತವಾಗಿ ನೀಡುತ್ತಿರುವ ನೋಟ್ ಬುಕ್ ಸಿಕ್ಕರೆ ಅವುಗಳನ್ನು ಬೇರೊಬ್ಬ ಬಡ ವಿದ್ಯಾರ್ಥಿಗಳಿಗೆ ನೀಡಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ(ಕವಡಿಮಟ್ಟಿ), ಬಿಜೆಪಿ ಬಸವರಾಜ ಗುಳಬಾಳ, ಬಿಇಓ ವಿರೇಶ ಜೇವರ್ಗಿ ಸೇರಿದಂತೆ ಇನ್ನಿತರಿದ್ದರು.

Be the first to comment

Leave a Reply

Your email address will not be published.


*