ಜಿಲ್ಲಾ ಸುದ್ದಿಗಳು
ಕುಮಟಾ
ತಾಲೂಕಿನ ಹೊಳೆಗದ್ದೆಯ ಟೋಲ್ ಪ್ಲಾಜಾವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜೆಡಿಎಸ್ ಕಾರ್ಯಕರ್ತರು ಸಹಾಯಕ ಆಯುಕ್ತರ ಮುಖೇನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಟೋಲ್ ಪ್ಲಾಜಾ ಆರಂಭವಾಗಿ 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಶಾಸಕರು ತಮ್ಮ ಸ್ಥಾನದ ಘನತೆಯನ್ನು ಅರಿತು ಸಾರ್ವಜನಿಕರ ಹಿತದೃಷ್ಟಿಯಿಂದ ಟೋಲ್ ಪ್ಲಾಜಾವನ್ನು ಸ್ಥಗಿತಗೊಳಿಸುವುದು ಇವರೆಲ್ಲರ ಕರ್ತವ್ಯವಾಗಿತ್ತು. ಆದರೆ ಇವರೆಲ್ಲ ಖಾಸಗಿ ಕಂಪನಿಯ ಪರ ಮೃದು ಧೋರಣೆ ಅನುಸರಿಸುತ್ತಿರುವುದರಿಂದ ಜನಸಾಮಾನ್ಯರಿಗೆ ಅನ್ಯಾಯ ವೆಸಗಿದಂತಾಗಿದೆ. ಇದನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಹಾಗಾಗಿ ಟೋಲ್ ಪ್ಲಾಜಾವನ್ನು ಕಾಮಗಾರಿ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜೆ.ಡಿ.ಎಸ್ ಮುಖಂಡ ಸೂರಜ್ ನಾಯ್ಕ ಸೊನಿ ಮಾತಾನಾಡಿ ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರನ್ನು ಚತುಷ್ಪಥಗೊಳಿಸುವ ಕಾಮಗಾರಿಯನ್ನು ಐ ಆರ್ ಬಿ ಕೈಗೊಳ್ಳುತ್ತಿದೆ. ಎನ್‍ಎಚ್‍ಎಐ ನಿಯಮದಂತೆ ಕಾಮಗಾರಿ ಪೂರ್ಣಗೊಳ್ಳುವ 6 ತಿಂಗಳ ಮೊದಲೇ ಟೋಲ್ ಪ್ಲಾಜಾ ಆರಂಭಿಸಲು ಅವಕಾಶವಿರುವ ಹಿನ್ನಲೆಯಲ್ಲಿ ಹೊಳೆಗದ್ದೆಯಲ್ಲಿ ಟೋಲ್ ಪ್ಲಾಜಾವನ್ನು 2020ರ ಫೆಬ್ರವರಿ 9ರಂದು ಆರಂಭಿಸುವ ಮೂಲಕ ಟೋಲ್ ಶುಲ್ಕ ಆಕರಣೆ ನಿರಾತಂಕವಾಗಿ ಸಾಗಿದೆ. ಆದರೆ ಟೋಲ್ ಆರಂಭವಾಗಿ 18 ತಿಂಗಳುಗಳು ಗತಿಸಿದರೂ ಇನ್ನು ಚತುಷ್ಪಥ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರಸಿದ್ಧ ಪ್ರವಾಸಿತಾಣವಿರುವ ಉತ್ತರಕನ್ನಡ ಜಿಲ್ಲೆಗೆ ಪ್ರತಿನಿತ್ಯ ಲಕ್ಷಾಂತರ ಪ್ರವಾಸಿಗರು ಈ ಹೆದ್ದಾರಿಯಲ್ಲಿಯೇ ಪ್ರಯಾಣಿಸುತ್ತಾರೆ. ಟೋಲ್ ಶುಲ್ಕ ಪಾವತಿಸಿದ ಬಳಿಕ ಹೆದ್ದಾರಿ ಉತ್ತನವಾಗಿದೆ ಎಂದು ಭಾವಿಸಿ ಅಸಮರ್ಪಕ ಹೆದ್ದಾರಿಯ ಅರಿವಿಲ್ಲದೇ ಚಲಿಸುವುದರಿಂದ ಹೆದ್ದಾರಿಯಲ್ಲಿ ಪದೇ ಪದೆ ಅಪಘಾತ ಉಂಟಾಗಲು ಕಾರಣವಾಗಿದೆ. ಹಾಗಾಗಿ ಅವೈಜ್ಞಾನಿಕ ಮತ್ತು ಅಸಮರ್ಪಕ ಚತುಷ್ಪಥ ಕಾಮಗಾರಿಯ ವಿರುದ್ಧ ಜೆಡಿಎಸ್ ಪಕ್ಷ ಜನಸಾಮಾನ್ಯರ ಹಿತದೃಷ್ಟಿಯಿಂದ ಹೋರಾಟ ನಡೆಸುತ್ತ ಬಂದಿದೆ. ಎಂದರು
ಮನವಿ ಸಲ್ಲಿಕೆಯಲ್ಲಿ ಜೆಡಿಎಸ್ ಕುಮಟಾ ಘಟಕದ ತಾಲೂಕಾಧ್ಯಕ್ಷ ಸಿ. ಜಿ. ಹೆಗಡೆ, ಪ್ರಮುಖರಾದ ಜಿ.ಕೆ ಪಟಗಾರ, ಶ್ರೀಪಾದ ಭಟ್, ಶಿವರಾಮ ಮಡಿವಾಳ, ಎಂ ಟಿ ನಾಯ್ಕ ಕಾಗಲ್, ಸಂತೋಷ ನಾಯ್ಕ, ಸತೀಶ ಚಂದಾವರ್, ಬಿ ರೆಹಮ್ಮತುಲ್ಲಾ , ಅಬ್ದುಲ ರೆಹಮಾನ, ಡಿ ಎಚ್ ಪಟಗಾರ, ಬಲೀಂದ್ರ ಗೌಡ, ಕೃಷ್ಣ ಗೌಡ, ಮಂಜುನಾಥ ಗೌಡ, ಆನಂದು ನಾಯ್ಕ, ಮಹೇಶ ನಾಯ್ಕ ಇತರರು ಇದ್ದರು.
Be the first to comment