ಅ.1ಕ್ಕೆ ಎಸಳೆ ಮಾರಿಕಾಂಬಾ ವನದಲ್ಲಿ ಸಹಸ್ರ ವೃಕ್ಷಾರೋಪಣ…!

ವರದಿ: ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು

CHETAN KENDULI

ಶಿರಸಿ:

ಇಲ್ಲಿಯ ಯೂತ್ ಫಾರ್ ಸೇವಾ ಸಂಸ್ಥೆಯ ಅಡಿಯಲ್ಲಿ ಶ್ರೀ ಮಾರಿಕಾಂಬಾ ದೇವಾಲಯ ಮತ್ತು ಬಾಬದಾರ ಮುಖ್ಯಸ್ಥರು, ಅರಣ್ಯ ಇಲಾಖೆ, ಎಸಳೆ ಗ್ರಾಮಸ್ಥರ ಸಹಯೋಗದಲ್ಲಿ  ಶ್ರೀ ಮಾರಿಕಾಂಬಾ ವನದಲ್ಲಿ ಅ.1 ರವಿವಾರ  ಬೆಳಿಗ್ಗೆ 9.30 ಕ್ಕೆ ವಿವಿಧ ಜಾತಿಯ ಒಂದು ಸಾವಿರ ಗಿಡ ನೆಡುವ ‘ಸಹಸ್ರ ವೃಕ್ಷಾರೋಪಣ’ ಕಾರ್ಯಕ್ರಮ ನಡೆಯಲಿದೆ.

ಶಿರಸಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದತ್ತಾತ್ರಯ ಎಂ. ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ, ಯೂತ್ ಫಾರ್ ಸೇವಾದ ಪ್ರಾಜೆಕ್ಟ್ ಮೆನೇಜರ್ ಸಂತೋಷ ಶಾನಭಾಗ, ಶಿರಸಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ಶ್ರೀ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ರವೀಂದ್ರ ನಾಯ್ಕ, ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಮಹಾದೇವ ದೇವಾಡಿಗ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ಸರಕಾರಿ ನರ್ಸರಿಗಳ ಉಸ್ತುವಾರಿಗಳಾದ ಜಾನ್ಮನೆ ವಲಯದ ದತ್ತಾತ್ರಯ ನಾಯ್ಕ, ಕ್ಯಾದಗಿ ನರ್ಸರಿಯ ದ್ಯಾವಾ ನಾಯ್ಕ, ಕಳವೆ ನರ್ಸರಿಯ ನಾರಾಯಣ ಗೌಡ ಹಾಗೂ ಹುಬ್ಬಳ್ಳಿಯ ಪರಿಸರ ಕಾರ್ಯಕರ್ತ ಮೇಘರಾಜ ಕೆರೂರ ಅವರುಗಳಿಗೆ ಸನ್ಮಾನಿಸಲಾಗುವದು.

ಯೂತ್ ಫಾರ್ ಸೇವಾ ಸಂಚಾಲನಾ ಸಮಿತಿಯ ಡಾ. ಆರ್. ವಾಸುದೇವ, ಡಾ. ಶ್ರೀಕಾಂತ ಗುನಗಾ, ಡಾ. ಗಣೇಶ ಹೆಗಡೆ, ವಕೀಲ ಕರುಣಾಕರ ಹೆಗಡೆಕಟ್ಟಾ, ನಾಟಿ ವೈದ್ಯೆ ಶೋಭಾ ಹೆಗಡೆ ತಾರಗೋಡು, ಡಾ.ಸತೀಶ ನಾಯ್ಕ ಉಪಸ್ಥಿರಿರುತ್ತಾರೆ.

Be the first to comment

Leave a Reply

Your email address will not be published.


*