ಜಿಲ್ಲಾ ಸುದ್ದಿಗಳು
ಮಂಗಳೂರು:
ಕೋಟೇಶ್ವರ ನಿವಾಸಿಯಾಗಿರುವ ಮುಸ್ತಫಾ ಎನ್ನುವವರು ದೂರು ನೀಡಿದ್ದು, ಸೆಪ್ಟೆಂಬರ್ 27 ರಂದು ಅವರ ಪತ್ನಿ ಅಮ್ರೀನ್ ಎನ್ನುವವರು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ 14ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲಾಗಿದ್ದು ಸಿಬ್ಬಂದಿಗಳು ಹೆಣ್ಣು ಮಗು ಆಗಿರುವ ಬಗ್ಗೆ ನಮಗೆ ದಾಖಲೆಗಳ ಮೂಲಕ ತಿಳಿಸಿದ್ದರು. ಹೆರಿಗೆ ಬಳಿಕ ಮಗುವನ್ನು ರಾತ್ರಿ ಏನ್ ಐಸಿಯು ಗೆ ದಾಖಲಿಸಲಾಗಿತ್ತು. ಈ ವೇಳೆ ಗಂಡು ಮಗುವಾಗಿತ್ತು ಎಂದು ದೂರಿನಲ್ಲಿ ಹೇಳಿಕೊಳ್ಳಲಾಗಿದೆ.
ಇದು ಪ್ರಮಾದ, ಕಣ್ತಪ್ಪಿನಿಂದ ಗಂಡು ಮಗು ಎಂದು ನಮೂದಿಸುವ ಬದಲು ಹೆಣ್ಣು ಮಗು ಎಂದು ವೈದ್ಯರು ಬರೆದಿದ್ದರು, ಅಷ್ಟೇ ಹೊರತು ಮಗು ಬದಲಾಗಿಲ್ಲ. ಈ ಬಗ್ಗೆ ಕ್ಷಮೆ ಯಾಚಿಸುತ್ತೇವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ನಗರದ ಲೇಡಿ ಗೋಶನ್ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಬದಲಾಗಿ ಗಂಡು ಮಗು ನೀಡಿರುವ ಕುರಿತು ಶುಕ್ರವಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment