ಉಣಕಲ್ ಚಂದ್ರಮೌಳೀಶ್ವರ ದೇವಾಲಯಕ್ಕೆ ಪ್ರವಾಸಿಗರು ದಂಡು ಹರಿದು ಬರುತ್ತಿದೆ.

ವರದಿ-ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು 

ಹುಬ್ಬಳ್ಳಿ: ಹುಬ್ಬಳ್ಳಿಯಿಂದ 4 ಕಿ.ಮೀ ದೂರದಲ್ಲಿರುವ ಉಣಕಲ್ ಎಂಬಲ್ಲಿ ಚಂದ್ರಮೌಳೀಶ್ವರ ದೇವಾಲಯವಿದೆ.ಹಳೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಮಧ್ಯೆ ಉಣಕಲ್ ಇದೆ. ಉಣಕಲ್ಲಿನಲ್ಲಿ ಪ್ರಖ್ಯಾತವಾದ ಉಣಕಲ್ ಕೆರೆ ಇದೆ. ಅಲ್ಲಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಚಂದ್ರಮೌಳೀಶ್ವರ ದೇವಾಲಯವಿದೆ.

CHETAN KENDULI

ಇದನ್ನು ಹುಡುಕಲು ಸ್ವಲ್ಪ ಕಷ್ಟ ಪಡಬೇಕು. ಇದು ಚಾಲುಕ್ಯ ಶೈಲಿಯಲ್ಲಿ ಕಟ್ಟಿದ ಕಲ್ಲಿನ ದೇವಾಲಯ. ಇದು ಸುಮಾರು ೯೦೦ ವರ್ಷ ಪುರಾತನವಾದುದ್ದು. ಹುಬ್ಬಳ್ಳಿಯಿಂದ ಪುಣೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 4ಕಿಮೀ ಸಾಗಿದಾಗ ಸಿಗುವ ಉಣಕಲ್ ಕೆರೆಯ ಪಕ್ಕ ಬಲಕ್ಕೆ ತಿರುಗಿ ಸುಮಾರು ಒಂದು ಕಿಮೀ ಸಾಗಿದರೆ ಈ ದೇವಸ್ಥಾನ ಸಿಗುತ್ತದೆ. ಇದರ ಗರ್ಭಗುಡಿಯಲ್ಲಿ ಚಂದ್ರಮೌಳೀಶ್ವರ ದೇವರ ಲಿಂಗವಿದೆ. ಈ ದೇವಸ್ಥಾನ ಶಿಲ್ಪಕಲೆಗೆ ಖ್ಯಾತವಾಗಿದೆ.ಚಂದ್ರಮೌಳೀಶ್ವರ ದೇವಾಲಯವು ಸುಮಾರು ೯೦೦ ವರ್ಷಗಷ್ಟು ಹಳೆಯದು. ಇದು ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ಇದನ್ನು ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ದೇವಾಲಯಗಳ ಮಾದರಿ ಯಲ್ಲಿ ಕಟ್ಟಲಾಗಿದೆ. ಇದೊಂದು ರಾಷ್ಟ್ರೀಯ ಪ್ರಾಮುಖ್ಯ ಹೊಂದಿರುವ ಸ್ಮಾರಕವಾಗಿದ್ದು ಇದನ್ನು ಭಾರತೀಯ ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ.ಇದು ಚಾಲುಕ್ಯ ಶೈಲಿಯ ದೇವಾಲಯವಾಗಿದೆ.

ಚಂದ್ರಮೌಳೀಶ್ವರ ದೇವಾಲಯವು ಉತ್ತರ ಕರ್ನಾಟಕದ ಇತರೆ ಶಿವ ದೇವಾಲಯಗಳಿಗಿಂತ ಭಿನ್ನವಾಗಿದೆ. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿವೆ. ಒಟ್ಟು ಹನ್ನೆರಡು ಬಾಗಿಲುಗಳಿವೆ. ಎರಡು ಶಿವಲಿಂಗಗಳಿದ್ದು ದ್ವಾರದಲ್ಲಿ ಎಲ್ಲ ಶಿವ ದೇವಾಲಯಗಳಲ್ಲಿರುವಂತೆ ಇಲ್ಲಿಯೂ ನಂದಿಯ ವಿಗ್ರಹ ಇದೆ. ಒಂದು ಶಿವಲಿಂಗವು ಚತುರ್ಮುಖ ಲಿಂಗವಾಗಿದ್ದು ಅದು ಈ ದೇವಾಲಯದ ವಿಶೇಷವಾಗಿದೆ. ಆದುದರಿಂದ ಇದನ್ನು ಚತುರ್ಲಿಂಗೇಶ್ವರ ದೇವಾಲಯ ಎಂದೂ ಕರೆಯುತ್ತಾರೆ.

ದೇವಾಲಯದ ಪ್ರವೇಶದ್ವಾರ ಪಂಚ ಶಾಖೆಗಳನ್ನು ಒಳಗೊಂಡ ದ್ವಾರಪಾಲಕರನ್ನು ಹೊಂದಿದೆ. ಇನ್ನುಳಿದ ಭಾಗದಲ್ಲಿ ಚಾಮರಧಾರಿಗಳು ರತಿ- ಮನ್ಮಥರ ಶಿಲ್ಪಗಳು ಕಂಡುಬರುತ್ತದೆ. ಮುಖಮಂಟಪದ ಪೂರ್ವ ಪ್ರವೇಶ ದ್ವಾರದ ಎರಡು ಭಾಗಗಳಲ್ಲಿ ಸಂಗೀತಗಾರರ, ನರ್ತಕಿಯರ ಹಾಗೂ ಬಳ್ಳಿಯಾಕಾರದ ಕೆತ್ತನೆಗಳನ್ನೊಳಗೊಂಡ ಎರಡು ಜಾಲಂಧರಗಳು ಇವೆ. ಕಟ್ಟಿಗೆಯ ಮೇಲೆ ಕೆತ್ತಲು ಪಡುವ ಕಲಾಕೃತಿ ಮಾದರಿಯಂತೆ ಕಲ್ಲಿನಲ್ಲಿ ಕೆತ್ತಲಾದ ಕಲಾಕೃತಿಗಳಿಗೆ ಇವು ಉತ್ಕೃಷ್ಟ ಉದಾಹರಣೆಯಾಗಿದೆ. ಅಧಿಷ್ಠಾನ ಭಾಗವು ಅಶ್ವದಳ ಹಾಗೂ ಆನೆಗಳ ಕೆತ್ತನೆಯು ಸುಂದರ ಕಲಾಕೃತಿ ಕಂಡುಬಂದಿದೆ.

ದೇವಾಲಯದ ಹೊರ ಭಿತ್ತಿಯಲ್ಲಿ ಬ್ರಹ್ಮ, ವಿಷ್ಣು ವಿಭಿನ್ನ ಅವತಾರಗಳಲ್ಲಿ ಹಾಗೂ ಶಿವನ ರೂಪಗಳೊಂದಿಗೆ ಮತ್ತು ಬೇರೆ ಬೇರೆ ದೇವತೆಗಳನ್ನು ಕೆತ್ತಲಾಗಿದೆ ದೇವಾಲಯದ ಹೊರಬಿತ್ತಿಯಲ್ಲಿ ಶಿಖರಗಳಿಂದ ಅಲಂಕೃತವಾದ ಚಿಕ್ಕಪ್ರಮಾಣದದೇವಕೋಷ್ಠಗಳಿವೆ.ದೇವಾಲಯದಲ್ಲಿ ನಂದಿಯ ಎರಡು ವಿಗ್ರಹಗಳಿವೆ.

ದೇವಾಲಯದ ನಡುವೆ ಗರ್ಭಗುಡಿಯಿದ್ದು ಈ ಗರ್ಭಗುಡಿಗೆ ನಾಲ್ಕು ಬಾಗಿಲುಗಳಿವೆ. ಈ ಬಾಗಿಲುಗಳ ಮೇಲೆ ಮತ್ತು ಕೆಳಗೆ ಸುಂದರ ಕೆತ್ತನೆಗಳಿವೆ. ದೇವಾಲಯದ ಜಾಲಂಧರಗಳಲ್ಲಿ, ಗೋಡೆಗಳಲ್ಲಿ, ಹೊರಭಾಗದಲ್ಲಿ ಎಲ್ಲ ಕಡೆ ಸುಂದರ ಕೆತ್ತನೆಗಳಿವೆ.ಈ ದೇವಾಲಯದಲ್ಲಿ ಈಗಲೂ ಪೂಜೆ ನಡೆಯುತ್ತಿದ್ದು ,ಭಕ್ತಾದಿಗಳು ಬೇರೆ ಬೇರೆ ಜಿಲ್ಲೆಗಳಿಂದ ಪ್ರವಾಸಿ ತಾಣವಾದ ಚಂದ್ರಮೌಳೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

Be the first to comment

Leave a Reply

Your email address will not be published.


*