ರಾಜ್ಯ ಸುದ್ದಿಗಳು
ಉಡುಪಿ:
ನಕಲಿ ಅಲೋಪತಿ ವೈದ್ಯಕೀಯದ ಬೆನ್ನು ಮುರಿದು ಜನರನ್ನ ನಿಜವಾದ ಆರೋಗ್ಯದ ಕಡೆಗೆ ಕೊಂಡೊಯ್ಯುವ ಹೋರಾಟದ ಮುನ್ನೆಲೆಯಾಗಿ ಹೋದ ಸ್ಟಿಂಗ್ ಪತ್ರಕರ್ತ, ಸಾಮಾಜಿಕ ಕಾಳಜಿಯ ಪರ ಹೋರಾಟಗಾರ ಕಿರಣ್ ಪೂಜಾರಿಯವರು ನೀಡಿದ ದಾಖಲೆಯನ್ನು ಪರಿಶೀಲಿಸಿ ನಕಲಿ ಅಲೋಪತಿ ವೈದ್ಯರುಗಳಾದ ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಸುರೇಶ್ ಕುಮಾರ್ ಶೆಟ್ಟಿ, ಡಾ. ಪ್ರವೀಣ್ ಶೆಟ್ಟಿ, ಡಾ. ಪ್ರವೀಣ್ ಶೆಟ್ಟಿ ಎಚ್., ಡಾ. ಅಮ್ಮಾಜಿ, ಡಾ. ರಶ್ಮಿ ಶೆಟ್ಟಿ, ಡಾ. ಜಗದೀಶ್ ಶೆಟ್ಟಿ, ಇವರ ವಿರುದ್ಧ ಜಿಲ್ಲಾ ಆರೋಗ್ಯ ಅಧಿಕಾರಿ ಡಾಕ್ಟರ್ ನಾಗಭೂಷಣ್ ಉಡುಪ ಸಲ್ಲಿಸಿದ ಮಾಹಿತಿಯ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ FIR ದಾಖಲಿಸಿ 5 ಮೆಂಬರ್ ಕಮಿಟಿಯನ್ನು ಮುಂದಿನ ತನಿಖೆಗೆ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನಾದರೂ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ ಇಂತಹ ನಕಲಿ ಅಲೋಪತಿ ವೈದ್ಯರ ವಿರುದ್ಧ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳುವುದೇ ಎನ್ನುವುದು ಸಾರ್ವಜನಿಕರ ಆಶಯ. ಮೂಲಗಳ ಪ್ರಕಾರ ಇನ್ನು ಸರಿಸುಮಾರು 25 ನಕಲಿ ಅಲೋಪತಿ ವೈದ್ಯರ ವಿರುದ್ಧ ಶೀಘ್ರದಲ್ಲೇ ಅಕ್ರಮದ ಬಗ್ಗೆ ದಾಖಲೆಗಳು ಜಿಲ್ಲಾ ಆಡಳಿತದ ಕೈಸೇರಲಿದೆ.
ಆದಷ್ಟು ಬೇಗ ಈ ನಕಲಿ ಅಲೋಪತಿ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಇವರ ಪರವಾನಿಗೆಯನ್ನು ರದ್ದು ಮಾಡಿ. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಇಂತಹ ಹೇಯ ಕೃತ್ಯಕ್ಕೆ ಮುಂದಾದ ನಕಲಿ ಅಲೋಪತಿ ವೈದ್ಯರಿಗೆ ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯಕ್ಕೆ ಮಾದರಿಯಾಗಬೇಕಾಗಿದೆ. ನಿಷ್ಠಾವಂತ ಪತ್ರಕರ್ತರ ಮೇಲೆ ರಾಜಕೀಯ ಪ್ರಭಾವ ಬಳಸಿ ಸುಳ್ಳು ಕೇಸ್ ದಾಖಲಿಸಿ ಮೆರೆದವರ ವಿರುದ್ಧವೇ ಜಿಲ್ಲಾಧಿಕಾರಿ ಕೂರ್ಮಾರಾವ್ FIR ಮಾಡಿ 5 ಮೆಂಬರ್ ತನಿಖೆ ತಂಡವನ್ನು ನೇಮಿಸಿದ್ದು ಶ್ಲಾಘನೀಯ.
ಅಲ್ಲದೇ ಡ್ರಗ್ ಕಂಟ್ರೋಲರ್ (ADC) ಕೆ. ವಿ. ನಾಗರಾಜ್ ತಿಳಿಸಿದಂತೆ ಈಗಾಗಲೇ ನಕಲಿ ಅಲೋಪತಿ ವೈದ್ಯರಿಗೆ ಅಲೋಪತಿ ಔಷಧವನ್ನು ನೀಡುತ್ತಿದ್ದ ಕೆಲವು ಔಷಧಿ ಡಿಸ್ಟ್ರಿಬ್ಯೂಟರ್ ಪರವಾನಿಗೆಯನ್ನು ಅಮಾನತು ಮಾಡಿಲಾಗಿದೆ ಎನ್ನಲಾಗಿದೆ. ಈಗ ನಕಲಿ ಅಲೋಪತಿ ವೈದ್ಯರ ಪಾಡು ಹರೋಹರ. ಇನ್ನಾದರೂ ಜಿಲ್ಲಾಡಳಿತ ಕೂಡಲೇ ಅವರು ಕಲಿತ ವಿದ್ಯೆಯಲ್ಲಿ ಕೆಲಸ ಮಾಡಿಕೊಂಡು ಕೆಪಿಎಂಇ ಆಕ್ಟ್ ಅಡಿಯಲ್ಲಿ ಬರುವ ನಿಯಮಾವಳಿಗಳನ್ನು ಚಾಚುತಪ್ಪದೇ ಪಾಲಿಸಬೇಕೆಂದು ಅಧಿಕೃತವಾಗಿ ಘೋಷಿಸ ಬೇಕೆಂಬುದು ಸಾರ್ವಜನಿಕರ ಅಹವಾಲಾಗಿದೆ.
Be the first to comment