ಮಸ್ಕಿ: ಪರಿಸರ ದಿನಾಚರಣೆ ಹಾಗೂ ಬೀಜದುಂಡೆ ತಯಾರಿಕೆ ಕಾರ್ಯಕ್ರಮ…!!!

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು

 ಮಸ್ಕಿ:

CHETAN KENDULI

ಪಟ್ಟಣದ ಎಸ್ಸಿ ಹಾಗೂ ಬಿಸಿಎಂ ಮೊರಾರ್ಜಿ ದೇಸಾಯಿ ವಸತಿ ನಿಲಯ ಶಾಲಾ ಆವರಣದಲ್ಲಿ ಪರಿಸರ ದಿನಾಚರಣೆ ಹಾಗೂ ಬೀಜದುಂಡೆ ತಯಾರಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ರಾಯಚೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಸ್ಕಿ, ಅರಣ್ಯ ಇಲಾಖೆ ಪ್ರಾದೇಶಿಕ ಅರಣ್ಯ ವಲಯ ಲಿಂಗಸುಗೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರುಣಿಸುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಬೀಜದುಂಡೆ ತಯಾರಿಕೆ ಮತ್ತು ಬೀಜ ಬಿತ್ತನೆ ಕಾರ್ಯಕ್ರಮವನ್ನು ಶ್ರೀ ಯಮನೂರಪ್ಪ ಪ್ರಾಚಾರ್ಯರು ಮುರಾರ್ಜಿ ದೇಸಾಯಿ ವಸತಿ ಶಾಲೆ ಪರಿಶಿಷ್ಟ ಜಾತಿ ಇವರ ಅಧ್ಯಕ್ಷತೆಯಲ್ಲಿ ಆಯೋಜನೆ ಮಾಡಲಾಗಿತ್ತು. ಮುಖ್ಯ ಅತಿಥಿಗಳಾಗಿ ನಾಗೇಶ್ ಪ್ರಾಚಾರ್ಯರು ಮುರಾರ್ಜಿ ದೇಸಾಯಿ ವಸತಿ ಶಾಲೆ ಬಿ.ಸಿ.ಎಂ ಇಲಾಖೆ, ಶರಣಪ್ಪ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಸ್ಕೌಟ್ಸ್ ಮಾಸ್ಟರ್, ಕಲ್ಪಾ ಶ್ರೀ ಗೈಡ್ ಕ್ಯಾಪ್ಟನ್, ಹುಸೇನ್ ಬಾಷಾ ಉಪವಲಯ ಅರಣ್ಯಧಿಕಾರಿಗಳು ಮಸ್ಕಿ ಹಾಗೂ ಮುದುಗಲ್ ವಲಯ, ಅತಿಥಿಗಳಾಗಿ ಶ್ರೀ ಡಾ. ಮಲ್ಲಿಕಾರ್ಜುನ ಇತ್ಲಿ ಅಧ್ಯಕ್ಷರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಸ್ಕಿ,

ಶಿಕ್ಷಣ ಸಂಯೋಜಕರಾದ ಶ್ರೀ ರಾಮಸ್ವಾಮಿ ಆಗಮಿಸಿದ್ದರು.ಪ್ರತಿ ವಿದ್ಯಾರ್ಥಿಯು 50 ರಂತೆ ಬೀಜ ದುಂಡೆಯನ್ನು ತಯಾರಿಕೆ ಮಾಡಿದರು. ನಂತರ ಆ ಬೀಜದ ಉಂಡೆಗಳಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಸ್ಸಿ ಮತ್ತು ಬಿಸಿಎಂ ಹೆಸರು ಮೂಡುವಂತೆ ಆಂಗ್ಲ ಭಾಷೆಯಲ್ಲಿ ಬಿಡಿಸಿದ್ದು ನೋಡುಗರಿಗೆ ಅತೀ ಸುಂದರವಾಗಿ ಕಂಗೊಳಿಸುವಂತಿತ್ತು.

 ಇದೇ ಸಂದರ್ಭದಲ್ಲಿ ಲಕ್ಷ್ಮೀ ದೇವಿ ಅಂಜನಪ್ಪ , ಪ್ರಶಾಂತ್, ಚನ್ನಪ್ಪ, ನಾಗೇಶ್, ಸುಭಾಷ್ ಚಂದ್ರ, ಇಬ್ರಾಹೀಂಪಾಷ, ಶರೀಫ್ ಬೇಗಂ, ಶ್ರೀನಿವಾಸ ರಾವ್ ಸುಂಗದಿ, ಮಮತಾ ದೊಡ್ಡಮನಿ, ಮೋಹನ್ ಭಾವಿಮನಿ, ನಾಗೇಶ್ ಗಡ್ಡಿಮಠ,ಚನ್ನಬಸವ, ಅಂಕಡಯ್ಯಸ್ವಾಮಿ, ಚನ್ನಪ್ಪ, ಶಿವಪ್ಪ ಹಸಮಕಲ್ ಕಾರ್ಯದರ್ಶಿಗಳು ಸ್ಥಳೀಯ ಸಂಸ್ಥೆ ಮಸ್ಕಿ , ಸ್ಕೌಟ್ ಮಾಸ್ಟರ್ ಗೈಡ್ ಕ್ಯಾಪ್ಟನ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*