ಹುಟ್ಟುಹಬ್ಬವನ್ನು ಅನ್ನದಾಸೋಹದ ಮೂಲಕ ಆಚರಿಸಿ – ಚಂದ್ರಶೇಖರ್. ಡಿ ಉಪ್ಪಾರ್

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

 ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದ ಚಂದ್ರಶೇಖರ್ ಡಿ ಉಪ್ಪರ್ ರವರು ತಮ್ಮ ಹುಟ್ಟುಹಬ್ಬವನ್ನು ದರ್ಗಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸತತವಾಗಿ ನಿರ್ಗತಿಕ ಕಡುಬಡವರಿಗಾಗಿ ಮಲ್ಲೇಶ್ ನೆಡೆಸುತ್ತಿರುವ ಅನ್ನದಾಸೋಹ ಕಾರ್ಯಕ್ರಮದಲ್ಲಿ ಅನ್ನದಾಸೋಹ ಮಾಡುವುದರ ಮುಖಾಂತರ ಆಚರಿಸಿಕೊಂಡರು.

CHETAN KENDULI

 ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ ಡಿ ಉಪ್ಪಾರ್ ಪ್ರತಿಯೊಬ್ಬರಿಗೂ ತಮ್ಮ ಹುಟ್ಟುಹಬ್ಬದ ದಿನ ಸಂಭ್ರಮವೇ ಸರಿ ಆದರೆ ಹಸಿದ ಹೊಟ್ಟೆಗಳಿಗೆ ಊಟ ನೀಡುವುದು ಮಹತ್ಕಾರ್ಯವಾಗಿದೆ ದುಂದುವೆಚ್ಚದ ಆಚರಣೆ ಮುಖ್ಯವಲ್ಲ ನಮ್ಮ ಕೈಲಾದಮಟ್ಟಿಗೆ ನಿರಾಶ್ರಿತ ಕಡುಬಡವರಿಗೆ ಸಹಾಯಹಸ್ತ ನೀಡುವುದು ಮುಖ್ಯ ಕೇವಲ ಒಂದು ದಿನದ ಸಂತೋಷಕ್ಕಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಬದಲು ಹಣದಲ್ಲಿ ಹಲವಾರು ಜನರ ಹಸಿವು ನೀಗಿಸಬಹುದು ಈ ಕುರಿತು ಯುವಜನಾಂಗ ಎಚ್ಚೆತ್ತುಕೊಳ್ಳಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 ಈ ಸಂದರ್ಭದಲ್ಲಿ ಅನ್ನದಾಸೋಹ ಸಮಿತಿಯ ಮುಖ್ಯಸ್ಥ ಮಲ್ಲೇಶ್ ಮಾತನಾಡಿ ಕೇವಲ ದಾನಿಗಳು ನೀಡುವ ಸಹಾಯ ಸಹಕಾರದಿಂದ ಸಾಗುತ್ತಿರುವ ಈ ಅನ್ನದಾಸೋಹ ಕಾರ್ಯಕ್ರಮವು ಎಷ್ಟೋ ಜನರ ಹಸಿದ ಹೊಟ್ಟೆಗಳಿಗೆ ನೆರಳಾಗಿದೆ ನೊಂದವರ ನಿರ್ಗತಿಕರ ಹಸಿವನ್ನು ನೀಗಿಸುವ ಕಾರ್ಯ ಸತತವಾಗಿ ಸಾಗಿದೆ ದಾನಿಗಳ ಸಹಾಯ-ಸಹಕಾರ ಮತ್ತಷ್ಟು ಬೇಕಾಗಿದ್ದು ದಾನಿಗಳು ತಮ್ಮ ಸ್ವಇಚ್ಛೆಯಿಂದ ಮುಂದೆ ಬಂದು ಸಹಾಯ ಮಾಡಬೇಕಾಗಿದೆ ಈ ಕಾರ್ಯಕ್ರಮವು ಸತತವಾಗಿ ಸಾಗಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

Be the first to comment

Leave a Reply

Your email address will not be published.


*