ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ತಾಲ್ಲೂಕಿನ ಗೌಡನಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲವಾಡಗಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಶಾಸಕ ಆರ್.ಬಸನಗೌಡ ತುರುವಿಹಾಳ ಹಾಗೂತಹಸೀಲ್ದಾರ್ ಕವಿತಾ.ಆರ್. ಜ್ಯೋತಿ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿದರು. ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ  “ಅಧಿಕಾರಿಗಳೇ ನೀವು ಕಷ್ಟನಷ್ಟಗಳನ್ನು ಅನುಭವಿಸಿಯೇ ಅಧಿಕಾರಕ್ಕೆ ಬಂದಿರುತ್ತೀರಿ,

CHETAN KENDULI

ನಿಮ್ಮ ಬಳಿ ಸಮಸ್ಯೆಗಳನ್ನು ಕೇಳಿಕೊಂಡು ಬರುವ ಸಾರ್ವಜನಿಕರನ್ನು ಸತಾಯಿಸಬೇಡಿ ಅವರ ಸಮಸ್ಯೆಗಳನ್ನು ಬೇಗನೆ ಬಗೆಹರಿಸಿ ಸಂತೃಪ್ತಿ ಪಡಿಸಿ” ಎಂದು ರೈತನ ಬಂಧು ಮಸ್ಕಿ ಕ್ಷೇತ್ರದ ಶಾಸಕರಾದ ಆರ್. ಬಸನಗೌಡ ತುರುವಿಹಾಳ ಅಧಿಕಾರಿಗಳಿಗೆ ಮರು ನೆನಪು ಮಾಡಿ ಅಲ್ಲಿ ನೆರೆದಿರುವ ಎಲ್ಲಾ ಅಧಿಕಾರಿಗಳ ಮನಮುಟ್ಟುವಂತೆ ಸರಳತೆಯ ಸಲಹೆ ನೀಡಿದರು. ಹಾಗೆಯೇ ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗಿದ್ದಂತಹ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಎಂಬ ಪರಿಕ್ಪನೆಯನ್ನು ತಮ್ಮ ಆಡಳಿತದಲ್ಲಿ ಕೆಲವೊಂದು ಗ್ರಾಮಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಸರಳತೆಯನ್ನು ಮೆರೆದಿದ್ದರು. ಇದರ ಪ್ರತಿಫಲವೇ ಇಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂದು ಗ್ರಾಮ ವಾಸ್ತವ್ಯವನ್ನಾಗಿ ಪರಿವರ್ತಿಸಲಾಗಿದೆ. ಈ ಕಾರ್ಯಕ್ರಮದ ಉದ್ದೇಶ ಇಷ್ಟೇ ಪ್ರತಿ ಮನೆ ಮನೆಗೆ ಮತ್ತು ಗ್ರಾಮಕ್ಕೆ ತೆರಳಿ ಅಧಿಕಾರಿಗಳೂ ಸಾರ್ವಜನಿಕರ ಕುಂದು ಕೊರತೆಗನ್ನು ಆಲಿಸಿ ಸ್ಥಳದಲ್ಲಿಯೇ ಪರಿಹರಿಸುವ ಒಂದು ಮಹತ್ವದ ಕಾರ್ಯಕ್ರಮವಾಗಿದೆ.ಇಲ್ಲಿ ನೆರೆದ ಎಲ್ಲರು ನಿಮ್ಮ ನಿಮ್ಮ ಸಮಸ್ಯೆಗಲಾದ ಆಶ್ರಯ ಮನೆ, ಸ್ಮಶಾನ, ಸರಕಾರಿ ಜಮೀನು, ಆಧಾರ್ ಕಾರ್ಡ್ ಲೋಪದೋಷ, ಜಾತಿ ಆದಾಯ ಪ್ರಮಾಣ ಪತ್ರ ಸೇರಿದಂತೆ ಸಾರ್ವಜನಿಕವಾದ ಎಲ್ಲಾ ರೀತಿಯ ಕುಂದು ಕೊರತೆಗಳ ನಿವಾರಣೆಗೆ ಈ ವೇದಿಕೆ ತುಂಬಾ ಸಹಾಯಕವಾಗಿದೆ. ನಿಮ್ಮೆಲ್ಲಾ ಸಮಸ್ಯೆ ಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಈ ಕ್ಷಣವೇ ಪರಿಹರಿಸಿಕೊಳ್ಳಿ ಎಂದು ತಹಶೀಲ್ದಾರ್ ಕವಿತಾ.ಆರ್ ಸಾರ್ವಜನಿಕರಿಗೆ ಸಲಹೆ ನೀಡಿದರು.

 

ಈ ಸಂದರ್ಭದಲ್ಲಿ ಗೌಡನಭಾವಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದುರ್ಗಮ್ಮ, ಉಪಾಧ್ಯಕ್ಷರಾದ ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಮಹಾಂತೇಶ ಜಾಲವಾಡಗಿ, ಎಸ್.ವಿ ಪಾಟೀಲ್ ಸಾರಿಗೆ ವ್ಯವಸ್ಥಾಪಕರು ಮಸ್ಕಿ,ಭೂ ದಾಖಲೆಗಳ ಇಲಾಖೆ ಅಧಿಕಾರಿ ಶಿವಕುಮಾರ್, ಹನುಮಂತಪ್ಪ ಶಿಕ್ಷಣ ಇಲಾಖೆ, ಕೃಷಿ ಅಧಿಕಾರಿ ಶಿವದತ್ತ, ಪುರಸಭೆ ಮುಖ್ಯ ಅಧಿಕಾರಿ ಹನುಮಂತಮ್ಮ ನಾಯಕ್, ಬಳಗಾನೂರು ಉಪತಹಸೀಲ್ದಾರ  ನಾಗಲಿಂಗಪ್ಪ ಪತ್ತಾರ್, ಕಂದಾಯ ನಿರೀಕ್ಷಕ ಕರಿಬಸವ, ಗೌಡನಬಾವಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಲಕ್ಷ್ಮಿಕಾಂತ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*