ಪಿಎಸ್ಐ ಜಗದೀಶ್ ವೃತ ಸ್ಥಾಪನೆಯೊಂದಿಗೆ 6ನೇ ವರ್ಷದ ಪುಣ್ಯಸ್ಮರಣೆ

ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ

 ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ಪಿಎಸ್ಐ ಜಗದೀಶ್ ರವರ ಪುಣ್ಯಸ್ಮರಣಾ ಕಾರ್ಯಕ್ರಮವನ್ನು ತಾಲ್ಲೂಕಿನ ಕನ್ನಡ ಪರ ಸಂಘಟನೆಗಳು ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕರು ನಡೆಸಿಕೊಂಡು ಬರುತ್ತಿದ್ದು ಇಂದು ಆರನೇ ವರ್ಷದ ಪುಣ್ಯ ಸ್ಮರಣೆಯನ್ನು ತಾಲೂಕಿನ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಹಮ್ಮಿಕೊಂಡಿದ್ದರು ಈ ಸುಸಂದರ್ಭವನ್ನು ಪಿಎಸ್ಐ ಜಗದೀಶ್ ವೃತ್ತ ದ ಸ್ಥಾಪನೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಲವರಿಗೆ ಸನ್ಮಾನಿಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

CHETAN KENDULI

 ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ನಗರಸಭಾ ಸದಸ್ಯ ಮಲ್ಲೇಶ್ ರವರು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪಿಎಸ್ಐ ಜಗದೀಶ್ ರವರ ಸೇವಾ ಸಮಯವನ್ನು ಎಂದಿಗೂ ಮರೆಯಲಾಗದು ಅವರಿಗೆ ಸಾರ್ವಜನಿಕರೊಂದಿಗೆ ಇದ್ದ ಬಾಂಧವ್ಯ ಕನ್ನಡಪರ ಸಂಘಟನೆಗಳ ಬಗ್ಗೆ ಅವರಿಗಿದ್ದ ಒಲವು ಹೇಳಲಾಗದು ಮುಂದಿನ ದಿನಗಳಲ್ಲಿ ಜಗದೀಶ್ ಅವರ ಪುತ್ಥಳಿಯನ್ನು ಸ್ಥಾಪಿಸುವ ಯೋಜನೆ ಇದೆ ಅವರು ನಮ್ಮೊಂದಿಗೆ ಸದಾ ಅಜರಾಮರ ಎಂದು ತಿಳಿಸಿದರು

 ಈ ಕಾರ್ಯಕ್ರಮದಲ್ಲಿ ಕನ್ನಡಪರ ಸಂಘಟನಾ ಹೋರಾಟಗಾರರಾದ ರಾಜಘಟ್ಟ ರವಿ, ಪೋಲಿಸ್ ಸಿಬ್ಬಂದಿಗಳಾದ ನವೀನ್ ಕುಮಾರ್ ಗೋವಿಂದ್ ಹಾಗೂ ತಾಲೂಕಿನ ಸಾರ್ವಜನಿಕರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*