ರಾಜ್ಯ ಸುದ್ದಿಗಳು
ದೇವನಹಳ್ಳಿ
ಗ್ರಾಮೀಣ ಭಾಗದಲ್ಲಿ ಗ್ರಾಮ ದೇವರುಗಳಿಗೆ ತಮ್ಮದೇ ಆದ ಇತಿಹಾಸವಿದೆ. ಗ್ರಾಮ ದೇವರುಗಳಿಗೆ ಪ್ರತಿ ದಸರಾ ಹಬ್ಬದ ದಿನಗಳಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಸಂಪ್ರದಾಯವಿದೆ ಎಂದು ಕಾರಹಳ್ಳಿ ಗ್ರಾಪಂ ಸದಸ್ಯ ಆರ್.ಜಯರಾಮು ತಿಳಿಸಿದರು.ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಸರ್ಕಲ್‌ನಲ್ಲಿ ಗ್ರಾಮ ದೇವರುಗಳಾದ ಆಂಜಿನೇಯಸ್ವಾಮಿ, ದಿಬ್ಬಗಿರೀಶ್ವರ ಸ್ವಾಮಿ, ಚೌಡೇಶ್ವರಮ್ಮ, ಶನಿಶ್ವರ ಸ್ವಾಮಿ, ದೇವರುಗಳನ್ನು ಪಲ್ಲಿಕಿಯಲ್ಲಿ ಕೂರಿಸಿ ಮೆರವಣಿಗೆ ಅಂಬೆಸೆಯುವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ನಮ್ಮ ಪೂರ್ವಜರು ಆಗಿನ ಕಾಲದಿಂದಲೂ ದೇವರುಗಳಿಗೆ ಪೂಜೆ ಸಲ್ಲಿಸಿ, ಅಲಂಕಾರ ಮಾಡಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರೆತಂದು ಗ್ರಾಮಸ್ಥರಿಂದ ಪೂಜಿಸಲ್ಪಡುತ್ತಾರೆ. ಸುಖ, ಸಂತೋಷ, ನೆಮ್ಮದಿಯ ಬದುಕು ನಡೆಸಲು ಗ್ರಾಮ ದೇವತೆಗಳನ್ನು ಆರಾಧಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಪೂರ್ವಿಕರ ಮಾರ್ಗದರ್ಶನದಲ್ಲಿ ನಾವು ಸಹ ನಡೆದುಕೊಂಡು ಬರುತ್ತಿದ್ದೇವೆ ಎಂದರು.
ಗ್ರಾಪಂ ಸದಸ್ಯೆ ಕೃಷ್ಣವೇಣಿ ಲಕ್ಷ್ಮೇಗೌಡ ಮಾತನಾಡಿ, ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸರಳ ಹಾಗೂ ಸಾಂಪ್ರದಾಯಿಕವಾಗಿ ಗ್ರಾಮ ದೇವರುಗಳನ್ನು ಪೂಜಿಸುವುದರ ಜತೆಗೆ ಗ್ರಾಮದಲ್ಲಿ ತಮಟೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಗುತ್ತಿದೆ ಎಂದರು. ದೇವರುಗಳಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಿರುವುದು ಗಮನಸೆಳೆಯಿತು. ಈ ವೇಳೆಯಲ್ಲಿ ಕಾರಹಳ್ಳಿ ಗ್ರಾಪಂಯ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ವಿಎಸ್ಸೆಸ್ಸೆನ್ ಅಧ್ಯಕ್ಷರು, ನಿರ್ದೇಶಕರು, ಮಾಜಿ ನಿರ್ದೇಶಕರು, ಡೇರಿ ಅಧ್ಯಕ್ಷರು, ನಿರ್ದೇಶಕರು, ಮಾಜಿ ನಿರ್ದೇಶಕರು, ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳು, ಕಾರಹಳ್ಳಿ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಇದ್ದರು.
Be the first to comment