ಜಿಲ್ಲಾ ಸುದ್ದಿಗಳು
ಹೊನ್ನಾವರ
ವಸತಿ ಮತ್ತು ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿ ಬದುಕನ್ನು ಕಟ್ಟಿಕೊಂಡವರಿಗೆ ಅರಣ್ಯ ಹಕ್ಕು ನಿಯಮಗಳನ್ನು ಸರಳೀಕರಣಗೊಳಿಸಿ ಹಕ್ಕು ಪತ್ರ ನೀಡಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹೊನ್ನಾವರ ಅರಣ್ಯ ಭೂಮಿ ಸಾಗುವಳಿದಾರರು ಹೋರಾಟ ಸಮಿತಿಯು ಶುಕ್ರವಾರ ತಹಶೀಲ್ದಾರ್ ರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಅಧ್ಯಕ್ಷ ಚಂದ್ರಕಾಂತ್ ಕೊಚಡೇಕರ್, ಸಮಿತಿಯ ಉಪಾಧ್ಯಕ್ಷ ಯೋಗೇಶ್ ರಾಯ್ಕರ್ , ಜಿ ಎನ್ ಗೌಡ, ಹರಿಯಪ್ಪ ನಾಯ್ಕ ಹಡಿನಬಾಳ, ಬಾಬು ನಾಯ್ಕ ಚಿಕ್ಕನಕೋಡಿ, ಸುರೇಶ್ ಮೇಸ್ತ ಹೊನ್ನಾವರ, ರಾಮ ಮರಾಠಿ, ಅನಂತ ನಾಯ್ಕ ಹೆಗ್ಗಾರ, ಮಂಥ್ ಪರ್ನಾಂಡಿಸ್, ಗಣೇಶ ನಾಯ್ಕ ಬೈಲಗದ್ದೆ, ಮಾಗೋಡು ಕೇಶವ ನಾಯ್ಕ ಇತರರು ಉಪಸ್ತಿತರಿದ್ದರು. ತಹಶೀಲ್ದಾರ್ ನಾಗರಾಜ್ ನಾಯ್ಕಡ್ ರವರು ಮನವಿ ಸ್ವೀಕರಿಸಿ ಈ ಮನವಿಯನ್ನು ಮುಖ್ಯಮಂತ್ರಿ ಯವರಿಗೆ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ.
Be the first to comment