ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕೊಯಿರ ಗ್ರಾಪಂ ವ್ಯಾಪ್ತಿಯ ಕೆ.ಹೊಸೂರು ಗ್ರಾಮದಲ್ಲಿ ತ್ಯಾಜ್ಯವಿಲೇವಾರಿ ಘಟಕ ನಿರ್ಮಾಣ ಮಾಡಲು ಗ್ರಾಪಂ ವತಿಯಿಂದ ಭೂಮಿ ಪೂಜೆ ನೆರವೇರಿಸಲಾಯಿತು.ಗ್ರಾಪಂ ಅಧ್ಯಕ್ಷೆ ವಿ.ರಮ್ಯಶ್ರೀನಿವಾಸ್ ಮಾತನಾಡಿ, ಸ್ವಚ್ಛತೆ ಕಡೆ ನಮ್ಮ ನಡೆ ಘೋಷವಾಕ್ಯದಡಿ ಪ್ರತಿ ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆ.ಹೊಸೂರು ಗ್ರಾಮದಲ್ಲಿ 20ಗುಂಟೆ ಸರಕಾರಿ ಜಾಗದಲ್ಲಿ ತ್ಯಾಜ್ಯವಿಲೇವಾರಿ ಘಟಕ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣಕಸ ಮತ್ತು ಹಸಿ ಕಸ ವಿಂಗಡಣೆ ಮಾಡಿ, ಸಂಸ್ಕರಣೆ ಮಾಡಲಾಗುತ್ತದೆ. ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಪಂಚಾಯಿತಿಯಿಂದ ಬರುವ ಕಸದ ವಾಹನಕ್ಕೆ ಕಸವನ್ನು ಸಕಾಲದಲ್ಲಿ ವಿತರಿಸಬೇಕು. ಎಲ್ಲೆಂದರಲ್ಲಿ ಕಸ ಹಾಕಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆಯಲ್ಲಿ ಗ್ರಾಪಂ ಉಪಾಧ್ಯಕ್ಷ ವಿಜಯಕುಮಾರ್, ಸದಸ್ಯರಾದ ಶೇಖರ್, ಶಿಲ್ಪ ಪ್ರಭಾಕರ್, ಮಮತಾ ಶಿವಾಜಿ, ಆನಂದ್, ನಯನ, ರಾಜಾರಾವ್, ಮುನೀಂದ್ರ, ಬಿಂದು, ರಾಮಚಂದ್ರಪ್ಪ, ಸದಸ್ಯರು, ಮುಖಂಡರಾದ ಶ್ರೀನಿವಾಸ್ (ಎಚ್‌ವಿಎಸ್), ಎಚ್‌ಎಂಎಸ್ ಶ್ರೀನಿವಾಸ್, ಹೊಸೂರು ಗೌಡಪ್ಪ, ಪ್ರಭಾರ ಪಿಡಿಒ ಪದ್ಮಮ್ಮ, ಕಾರ್ಯದರ್ಶಿ ಆದೇಪ್ಪ, ಗ್ರಾಪಂ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.
Be the first to comment