ಜಿ.ಎಸ್.ಟಿ. ಜಾಲತಾಣದಲ್ಲಾಗುತ್ತಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ತೆರಿಗೆ ಸಲಹೆಗಾರರ ಮನವಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಕೇಂದ್ರ ಸರಕಾರದ ಆದೇಶದಂತೆ ತೆರೆಗೆ ಸಲಹೆಗಾರರು ಜಾಲತಾಣದಲ್ಲಿ ಮಾಸಿಕ, ತ್ರೆöÊಮಾಸಿ ವರದಿ ಹಾಗೂ ತೆರಿಗೆಗಳ ಸಂದಾಯ ಮಾಡುವಲ್ಲಿ ಸಾಕಷ್ಟು ತಾಂತ್ರಿಕ ದೋಷಗಳು ಹಾಗೂ ನ್ಯೂನತೆಗಳೆ ಎದುರಾಗುತ್ತಿದ್ದು ಕೂಡಲೇ ನ್ಯೂನತೆಗಳನ್ನು ಸರಿಪಡಿಸಿ ಸರಳಿಕರಣಗೊಳಿಸಬೇಕೆಂದು ತಾಲೂಕಾ ತೆರಿಗೆ ಸಲಹೆಗಾರರ ಸಂಘದ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

 ಜಿಎಸ್‌ಟಿ ಜಾಲತಾಣದಲ್ಲಾಗುತ್ತಿರುವ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಶುಕ್ರವಾರ ತಾಲುಕಾ ತೆರಿಗೆ ಸಲಹೆಗಾರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ಎಸ್.ಬಿ.ಪಾಟೀಲ, ವ್ಯಾಪಾರಸ್ಥರಿಗೆ ಹಾಗೂ ತೆರಿಗೆ ಅವರ ಜಿಎಸ್‌ಟಿ ಖ್ಯಾತೆಯನ್ನು ನಿಭಾಯಿಸುವ ಹಂತದಲ್ಲಿ ಜಾಲತಾಣದಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ. ಕೆಲ ವ್ಯಾಪಾರಸ್ಥರು ರಾತ್ರಿವೇಳೆಯಲ್ಲಿ ತೆರಿಗೆ ಅಥವಾ ಅವರ ವ್ಯಾಪಾರದ ಬಗ್ಗೆ ಜಿಎಸ್‌ಟಿಯ ಜಾಲತಾಣದಲ್ಲಿ ಸಂದಾಯ ಮಾಡಲು ಹೋದರೆ ತಾಂತ್ರಿಕ ದೋಷಗಳು ಎದುರಾಗುತ್ತಿವೆ. ಇದರಿಂದ ತೆರಿಗೆ ಸಲಹೆಗಾರರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಜಾಲತಾಣದಲ್ಲಿ ಆಗುತ್ತಿರುವ ನ್ಯೂನತೆಗಳನ್ನು ಸರಿಪಡಿಸಿ ತೆರಿಗೆ ಸಲಹೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.





ಗ್ರೇಡ-2 ತಹಸೀಲ್ದಾರರು ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾ ತೆರಿಗೆ ಸಲಹೆಗಾರರ ಸಂಘದ ಪದಾಧಿಕಾರಿಗಳಾದ ಸಿ.ಬಿ.ಕುಲಕರ್ಣಿ, ವ್ಹಿ.ವ್ಹಿ.ನಾಗಠಾಣ, ಪಿ.ಎನ್.ಹೂಗಾರ, ಬಿ.ಎನ್.ಹೂಗಾರ, ಪಿ.ಆರ್.ಹಿರೇಮಠ, ಗಣ್ಯ ಉದ್ಯಮಿದಾರರಾದ ಮಾಣಿಕಚಂದ್ ದಂಡಾವತಿ, ಬಸವರಾಜ ಗೋನಾಳ, ಬಸವರಾಜ ಪಾಟೀಲ, ಜಗದೀಶ ಕಂಠಿ, ಬಿ.ಎಸ್.ಮೇಟಿ, ಅಶೋಕ ಚಟ್ಟರ, ಬಸವರಾಜ ಮೋಟಗಿ, ಉದಯಸಿಂಗ್ ರಾಯಚೂರ ಇದ್ದರು.

 

Be the first to comment

Leave a Reply

Your email address will not be published.


*