ಜಿಲ್ಲಾ ಸುದ್ದಿಗಳು
ಮಸ್ಕಿ
ತಾಲೂಕಿನ ಗುಡದೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಾಲಯದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಕುರಿತು ಈ ಹಿಂದೆ ದಿನಾಂಕ:- 18-11-2021 ರಂದು ಮನವಿ ಪತ್ರ ನೀಡಿದರು ಯಾವುದೇ ರೀತಿಯ ಸ್ಪಂದನೆ ದೊರೆತಿರುವುದಿಲ್ಲ. ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾರ್ಯಾಲಯದ ಮುಂದೆ ಕರಡಿ ನಡೆಸುವುದರ ಮೂಲಕ ಮತ್ತೊಮ್ಮೆ ಮನೆ ಪತ್ರವನ್ನು ನೀಡಲಾಯಿತು.
ಗುಡುದೂರು ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಗಳು ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ನೀಡಲು ಹೋದರೆ ಸ್ವೀಕರಿಸುವುದಿಲ್ಲ, ಬ್ಯಾಂಕಿನಲ್ಲಿ ಸಾಲ ಪಡೆದ ಸಾಲಗಾರರು ತಮ್ಮ ಕುಂದುಕೊರತೆ ಅರ್ಜಿ ನೀಡಿದರೆ ಸ್ವೀಕರಿಸುವುದಿಲ್ಲ, ಈ ಎಲ್ಲಾ ಸಮಸ್ಯೆಗಳ ವಿಷಯವಾಗಿ ಕರ್ನಾಟಕ ರೈತ ಸಂಘದ ಮುಂದಾಳತ್ವದೊಂದಿಗೆ ದಿನಾಂಕ 15-11-2021ರಂದು ಬ್ಯಾಂಕಿಗೆ ಹೋದಾಗ ಕಾರ್ಯಾಲಯಕ್ಕೆ ಬೀಗ ಹಾಕಿ ಖಾಸಗಿ ಮದುವೆಗೆ ಹೋಗಿದ್ದರು ನಿಯಮಗಳ ಪ್ರಕಾರ ಕಾರ್ಯಾಲಯವನ್ನು ತೆರೆಯುವುದಿಲ್ಲ ಈ ಮೂಲಕ ಇವರು ರೈತರನ್ನು ರೈತ ಸಂಘದ ಮುಖಂಡರನ್ನು ಸತಾಯಿಸುತ್ತಿದ್ದಾರೆ. ಅಲ್ಲದೆ ಸದರಿ ಬ್ಯಾಂಕಿನಲ್ಲಿ ಸದಸ್ಯರಾದ ಸಾಲ ಪಡೆದ ಹಾಗೂ ಸಾಲಮನ್ನಾ ಗೊಂಡ ಸದಸ್ಯರ ವಿಷಯದಲ್ಲಿ ಗೋಲ್ ಮಾಲ್ ಇರುತ್ತದೆ ಇದನ್ನು ಪಾರದರ್ಷಕವಾಗಿ ಇಡಬೇಕೆಂಬ ಉದ್ದೇಶದಿಂದ ನಾವು ಸಂಪರ್ಕಿಸಿದರೆ ಸದರಿ ಕಾರ್ಯದರ್ಶಿಯವರು ನಮಗೆ ಸ್ಪಂದಿಸದೆ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆ ಆರ್ ಎಸ್ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸಹಕಾರಿ ಬ್ಯಾಂಕ್ ನ ಸಿಬ್ಬಂದಿಯ ಮೂಲಕ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆರ್ ಡಿ ಸಿ ಸಿ ಬ್ಯಾಂಕ್ ಪ್ರಧಾನ ಕಾರ್ಯಾಲಯ ರಾಯಚೂರು ಇವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂತೋಷ ಹಿರೇದಿನ್ನಿ, ಮಾರುತಿ ಜಿನ್ನಾಪುರು, ತಿರುಪತಿ ಮಸ್ಕಿ, ಅಮರೇಶ ಪಾಮನ ಕಲ್ಲೂರು, ಕೆ ಆರ್ ಎಸ್ ಸಂಘದ ಸರ್ವ ಸದಸ್ಯರು ಸೇರಿದಂತೆ ಇನ್ನತರರು ಭಾಗಿಯಾಗಿದ್ದರು.
Be the first to comment