ಹುನಗುಂದ ತಾಲೂಕಾ ಬಿಸಿಎಂ ಕಚೇರಿ ಸ್ಥಳಾಂತರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :

CHETAN KENDULI

ಜಿಲ್ಲೆಯ ಹುನಗುಂದ ಪಟ್ಟಣದ ಸರಕಾರಿ ಆಸ್ಪತ್ರೆ ವಸತಿ ಗೃಹಗಳ ಎದುರುಗಡೆ ರಸ್ತೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಹುನಗುಂದ ವಾರ್ಡ ನಂ.10 ಮೇಗಲಪೇಟೆ ರಾಜೀವ್‍ಗಾಂಧಿ ಶಾಲೆಯ ಹಿಂಬಾಗ ಬಿಸಿಎಂ ಇಲಾಖೆಯ ನೂತನವಾಗಿ ನಿರ್ಮಾಣಗೊಂಡ ದಿ.ಡಿ.ದೇವರಾಜ ಅರಸು ಭವನಕ್ಕೆ ಮೇ 19 ರಿಂದ ಸ್ಥಳಾಂತರಿಸಲಾಗಿದೆ. ಆದ್ದರಿಂದ ಇನ್ನು ಮುಂದೆ ಈ ಕಚೇರಿಗೆ ಸಂಬಂಧಪಟ್ಟ ಪತ್ರ ವ್ಯವಹಾರಗಳನ್ನು ಬದಲಾದ ವಿಳಾಸಕ್ಕೆ ವ್ಯವಹರಿಸುವಂತೆ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*