ಜಿಲ್ಲಾ ಸುದ್ದಿಗಳು
ಹೊನ್ನಾವರ
ಹೊನ್ನಾವರ ತಾಲೂಕಿನ ಜನ್ನಕಡ್ಕಲ್ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಿಸುವ ಮತ್ತು ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಯನ್ನು ಸರಿಪಡಿಸುವ ಕುರಿತು ಕರವೇ ಹೊನ್ನಾವರ ಘಟಕದಿಂದ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಹಾಗೂ ಬಿ.ಎಸ್.ಎನ್‌ಎಲ್ ಕಾರವಾರ ಕಛೇರಿಗೆ ಮನವಿ ಸಲ್ಲಿಸಿದರು.
ಜನ್ನಕಡ್ಕಲ್ ಗ್ರಾಮದಲ್ಲಿ ಸಾವಿರಾರು ಕುಟುಂಬಗಳು ವಾಸವಾಗಿದ್ದು ಈಗ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಸರ್ಕಾರಿ ಸೌಲಭ್ಯಗಳು ಆನ್ ಲೈನ್ ಆಗಿರುವುದರಿಂದ ಅಲ್ಲಿರುವಂತಹ ಗ್ರಾಮಸ್ಥರಿಗೆ ನೆಟ್ವರ್ಕ ಸಮಸ್ಯೆಯಿಂದ ತುಂಬಾ ತೊಂದರೆ ಆಗುತ್ತಿದೆ. ಅಲ್ಲಿನ ಜನತೆ ನೆಟ್ವರ್ಕ್ ಸಂಪರ್ಕಕ್ಕಾಗಿ ೫ರಿಂದ ೬ ಕಿಲೋಮಿಟರ್ ದೂರ ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಅಲ್ಲಿನ ಗ್ರಾಮದಲ್ಲಿಯೇ ಒಂದು ಟವರ್ ನಿರ್ಮಾಣ ಮಾಡಿದರೆ, ಹಳ್ಳಿಯ ಜನರಿಗೆ ತುಂಬಾ ಅನೂಕುಲವಾಗುತ್ತದೆ. ಅದರ ಜೊತೆಗೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಇರುವಂತ ಟವರ್‌ಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲಾ. ಕೇವಲ ವಿದ್ಯುತ್ ಸಂಪರ್ಕ ಇದ್ದಾಗ ಮಾತ್ರ ಕಾರ್ಯನಿರ್ವಹಿಸುತ್ತಿದೆ. ತದನಂತರ ಸ್ಥಗಿತಗೊಳ್ಳುತ್ತಿದೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವರ್ಕ್ ಪ್ರಾಂ ಹೋಮ್ ಕೆಲಸ ಮಾಡವವರಿಗೆ ತುಂಬಾ ತೊಂದರೆಯಾಗುತ್ತಿದೆ. ಹಳ್ಳಿಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗವನ್ನು ಕಲ್ಪಿಸಿ ಹಳ್ಳಿಯ ಜನರಿಗೆ ಅನೂಕುಲ ಮಾಡಿ ಸರಿಯಾದ ರೀತಿಯಲ್ಲಿ ನೆಟ್ವರ್ಕ್ ಸೌಲಭ್ಯ ಒದಗಿಸಿ ಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಉಪವಿಭಾಗಾಧಿಕಾರಿ ಮಮತಾ ದೇವಿ ಜಿ.ಎಸ್ ಮನವಿ ಸ್ವೀಕರಿಸಿದರು.ಈ ಕುರಿತು ಕರವೇ ತಾಲೂಕಾಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಗ್ರಾಮಾಭಿವೃದ್ದಿಯಾದರೆ ದೇಶ ಅಭಿವೃದ್ಧಿ ಹೊಂದಿದAತೆ ಎಂದು ಎಲ್ಲರು ವೇದಿಕೆಯಲ್ಲಿ ಭಾಷಣ ಬಿಗಿಯುತ್ತಾರೆ. ವಾಸ್ತವವಾಗಿ ಹಳ್ಳಿಗಳ ಸಮಸ್ಯೆ ಆಲಿಸುವವರಿಲ್ಲವಾಗಿದೆ ಎಂದರು. ನೆಟ್ವರ್ಕ ಸಮಸ್ಯೆ ಹಾಗೂ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದುಂಟು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾ ಪಂ ಸದಸ್ಯ ತುಕಾರಾಮ ನಾಯ್ಕ, ಕರವೇ ಯುವ ಘಟಕದ ಕಾರ್ಯದರ್ಶಿ ರವಿ ನಾಯ್ಕ, ವಿದ್ಯಾರ್ಥಿ ಘಟಕಾಧ್ಯಕ್ಷ ನಿಖಿಲ್ ನಾಯ್ಕ, ಕರವೇ ಸದಸ್ಯರಾದ ಶಿವಪ್ರಸಾದ್ ಗೌಡ ಪುನೀತ್ ನಾಯ್ಕ ಪ್ರವೀಣ ನಾಯ್ಕ ಧನುಷ್ ಗೌಡ, ಗಂಗಾಧರ ಗೌಡ, ನಾಗರಾಜ ನಾಯ್ಕ,ತರುಣ್ ನಾಯ್ಕ ತೇಜಸ್ ನಾಯ್ಕ,ಶ್ರೀಧರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
Be the first to comment