ಜಿಲ್ಲಾನ್ಯಾಯಾಧೀಶರ ಕ್ರಮಕ್ಕಾಗಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮನವಿ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ರಾಜ್ಯ ಸುದ್ದಿಗಳು 

ಮಸ್ಕಿ

ತಾಲೂಕಿನ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಅಮೀನಗಡ ಗ್ರಾಮದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ 73 ನೇ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ರಾಯಚೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಎಂಬ ವಿಕೃತ ಮನಸಿನ ಅಪ್ಪಟ ಮನುವಾದಿ ಆಗಿರುವ ಈತನು ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರ ಇದ್ದರೆ ನಾನು ದ್ವಜಾರೋಹಣ ಮಾಡುವುದಿಲ್ಲ ಎಂದು ಹೇಳಿ ಇಡೀ ನ್ಯಾಯಾಲಯಕ್ಕೆ ಮತ್ತು ನ್ಯಾಯಾಧೀಶರ ಹುದ್ದೆಗೆ ಅಗೌರವ ತೋರಿದ್ದು ಸಂವಿಧಾನವನ್ನು ಓದಿಕೊಂಡು ವಕಾಲತ್ತು ವಹಿಸುವ ಇಂತಹ ಅದೆಷ್ಟೋ ಜನ ನ್ಯಾಯಯುತ ವಕೀಲರಿಗೆ ಡಾ. ಬಿ ಆರ್ ಅಂಬೇಡ್ಕರ್ ರವರು ದೇವರ ಸ್ಥಾನದಲ್ಲಿ ಇದ್ದರೆ ಇಲ್ಲೊಬ್ಬ ವಿಕೃತ ಮನಸಿನ್ನ ನಾಲಾಯಕ್ ನ್ಯಾಯಾಧೀಶ ಇದ್ದು ದೇಶದ ಸಮಾನತೆ ಸಾರುವ ಪವಿತ್ರ ಗ್ರಂಥ ಸಂವಿಧಾನ ಜಾರಿಯ ದಿನದಂದೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ್ದು ಈ ಕೂಡಲೇ ಈತನನ್ನು ಹುದ್ದೆಯಿಂದ ವಜಾಗೊಳಿಸಿ ದೇಶದ್ರೋಹದ ಹೆಸರಲ್ಲಿ ಕೇಸ್ ದಾಖಲಿಸಿ ಕೂಡಲೇ ಅವನನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಅಮೀನಗಡ ಗ್ರಾಮದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ಹಾಗೂ ರಸ್ತೆ ತಡೆ ಚಳುವಳಿ ನಡೆಸಿದರು.

CHETAN KENDULI

 

ಮೊದಲಿಗೆ ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು ಗ್ರಾಮದ ಗಂಗಾ ದೇವಿ ದೇವಸ್ಥಾನ ಮುಂಬಾಗ ಕನಕ ವೃತ್ತದಿಂದ ಹೋರಾಟ ಮೆರವಣಿಗೆ ಪ್ರಮುಖ ಸ್ಥಳಗಳಲ್ಲಿ ಸಂವಿಧಾನ ವಿರೋಧಿ ನ್ಯಾಯಾಧೀಶನ ವಿರುದ್ಧ ಘೋಷಣೆ ಕೂಗುತ್ತ ವಾಲ್ಮೀಕಿ ವೃತ್ತದಿಂದ ಗ್ರಾಮದ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಲ್ಲಿಕಾರ್ಜುನ ಗೌಡ ಪ್ರತಿಕೃತಿ ದಹಿಸಿ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ನಂತರ ಕಾರ್ಯಕ್ರಮ ಉದ್ದೇಶಿಸಿ ಕೆ ಆರ್ ಸಿ ಎಫ್.ವತಿಯಿಂದ ಕ್ರಾಂತಿ ಗೀತೆಗಳನ್ನು ಹಾಡಿದರು.

ನಂತರ ಮಾತನಾಡಿದ ಅಮೀನಗಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೌನೇಶ್ ದೊಡ್ಡಮನಿ ರಾಯಚೂರು ಜಿಲ್ಲಾ ನ್ಯಾಯಾಧೀಶ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿ ಇಡೀ ದಲಿತರನ್ನು ರೊಚ್ಚಿಗೆಳುವಂತೆ ಮಾಡಿದ್ದು ಈ ಕೂಡಲೇ ಅವನನ್ನು ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸಬೇಕು ,ಈತನು ಲಾ ಓದಿಕೊಂಡು ವಕೀಲ ವೃತ್ತಿ ಆರಂಭಿಸಿ ಅದರಿಂದಲೇ ಅಣ್ಣಾ ತಿನ್ನುವ ಈತನಿಗೆ ಕನಿಷ್ಟ ಪರಿಜ್ಞಾನವೂ ಇಲ್ಲದಿರುವುದು ವಿಪರ್ಯಾಸವೇ ಸರಿ ಬಾಬಾ ಸಾಹೇಬರು ಕೊಟ್ಟ ಬಿಕ್ಷೆಯಲ್ಲಿ ಬದುಕುವ ಇವನು ಅವರ ಫೋಟೋ ಹಾಕಿದರೆ ಧ್ವಜಾರೋಹಣ ಮಾಡುವದಿಲ್ಲ ಎನ್ನುವ ಅಜ್ಞಾನಿ ಇವನು ಇವನ ವಿರುದ್ಧ ದಲಿತರೆಲ್ಲರು ಸಂಘಟಿತರಾಗಿ ಗಡಿಪಾರು ಮಾಡುವವರೆಗೂ ಹೋರಾಟ ನಿಲ್ಲಿಸಬಾರದು,ದೇಶ ದೃಹದ ಹೆಸರಲ್ಲಿ ಪ್ರಕರಣ ದಾಖಲಾಗಬೇಕು ಎಂದು ರಾಜ್ಯದ ಮುಖ್ಯ ನ್ಯಾಯಾಧೀಶರಿಗೆ ಒತ್ತಾಯಿಸುತ್ತೇವೆ ಎಂದು ಹೇಳಿದರು.

ನಂತರ ಮಾತನಾಡಿದ ದಲಿತ ಮುಖಂಡ ಹಾಗೂ ಪತ್ರಕರ್ತ ಬಿ ಎಡ್ ರಾಮಣ್ಣ ಕವಿತಾಳ ಇವನು ಒಬ್ಬ ನ್ಯಾಯಾಧೀಶ ಅಲ್ಲಾ ಪಕ್ಕ ಮನುವಾದಿ ಇಂತವನಿಂದ ಜನಸಾಮಾನ್ಯರಿಗೆ ಅದ್ಯಾವಾಗ ನ್ಯಾಯ ಸಿಗುವುದು ಹೇಳಿ ಇವನು ಜಿಲ್ಲಾ ನ್ಯಾಯಾಧೀಶ ಆಗಿ ಬಂದು ಒಂದು ವರ್ಷವಾಗಿದೆ ಈ ಒಂದು ವರ್ಷದಲ್ಲಿ ದಲಿತರನ್ನು ಹೇಗೆ ನೋಡಿಕೊಂಡಿರಬೇಕು ದಲಿತರಿಗೆ ಅದ್ಯಾವ ಬಾಗೆ ನ್ಯಾಯ ಕೊಡಿಸಿರಬಹುದು ಊಹಿಸಿ , ಇಂತವನನ್ನು ಸುಮ್ಮನೆ ಬಿಡಬಾರದು ಮಹಿಳೆಯರೇ ಇವನನ್ನು ಅಟ್ಟಾಡಿಸಿ ಹೊಡೆದು ಹಾಕುತ್ತಾರೆ ನಮಗೂ ಕಾನೂನಿನ ಅರಿವಿದೆ ಅದಕ್ಕಾಗಿ ಅವನು ಇನ್ನೂ ಜೀವಂತವಾಗಿ ಇದ್ದಾನೆ ನೆನಪಿರಲಿ ವಿನಾಕಾರಣ ನಮ್ಮ ವಿರುದ್ಧ ಬಂದರೆ ನಮ್ಮ ಪಾಲಿನ ದೇವರು ಬಾಬಾ ಸಾಹೇಬ ಅಂಬೇಡ್ಕರ್ ರವರ ವಿಷಯದಲ್ಲಿ ಅನ್ಯಾಯ ಆದರೆ ಸಹಿಸುವುದಿಲ್ಲ ಅವನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಎರಡು ಕೋಟಿ ದಲಿತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

” ” ನ್ಯಾಯಾಧೀಶನಾಗಿ ಸಂವಿಧಾನ ದಿನದಂದೇ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಅಗೌರವ ತೋರಿದ್ದು ವಕೀಲ ವೃತ್ತಿಗೆ ನಾಚಿಕೆಗೇಡು ಅವರು ಕೊಟ್ಟ ದಾರಿಯಲ್ಲೇ ದೇಶ ನಡೆಸುವ ಮತ್ತು ನ್ಯಾಯಾಂಗ ಕಾರ್ಯಾಂಗ ಮತ್ತು ಶಾಸಕಾಂಗ ನಡೆಯುತ್ತಿದ್ದು ಅಷ್ಟು ಅರಿವಿಲ್ಲದೆ ನಡೆದುಕೊಂಡ ನ್ಯಾಯಾಧೀಶ ರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಅಲ್ಲದೆ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಸ್ವಯಂ ಪ್ರೇರಿತರಾಗಿ HIGH COURT SUMOTO POWER ಬಳಸಿ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ವೃತ್ತಿಯಿಂದ ವಾಜಾಮಾಡಬೇಕು ಎಂದು ಉಪ ತಹಶೀಲ್ದಾರರು ದೇವರಾಜ ರವರಿಗೆ ಮನವಿ ನೀಡಿ ಒತ್ತಾಯಿಸಿವೆ.

ಈ ವೇಳೆ ಅಮೀನಗಡ ಗ್ರಾಮದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಶ್ರೀನಿವಾಸ ಛಲವಾದಿ ಅಧ್ಯಕ್ಷರು,ಮೌನೇಶ ದೊಡ್ಡಮನಿ ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಚಿನ್ನಪ್ಪ ಕೊಟ್ರಿಕಿ, ಆದೇಶ ನಗನೂರು,ಬಸವರಾಜ ಗೌಡನಬಾವಿ ದೇವರಾಜ,ಹಂಪಯ್ಯ ತುಗ್ಗಲ ದಿನ್ನಿ,ವೆಂಕಟೇಶ್ ಗುತ್ತೆದಾರರು, ಪ್ರಭೂರಾಯ,ಜಂಬಣ್ಣ ಹೂಗಾರ್, ಮೌಲಸಾಬಾ ಬಂಕದ್,ದಾವುದ ಸಾಬ್, ಹನುಮಂತ ಚೌದ್ರಿ,ಮಲ್ಲಪ್ಪ ನೆಳ ಕೊಳ,ಅಯ್ಯಣ್ಣ ಮಲ್ಲಿಕಾರ್ಜುನ ಗ್ಯಾಂಗ್ಮನ್, ಸೇರಿ ಅನೇಕರು ಮುಖಂಡರು ಭಾಗವಹಿಸಿದ್ದರು ಕವಿತಾಳ ಪೊಲೀಸ್ ಠಾಣೆಯ PSI ಸೇರಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*