ಮುದ್ದೇಬಿಹಾಳ ತಾಲೂಕಿನಲ್ಲಿ ಕೋವಿಡ್-ಶೀಲ್ಡ್ ಚುಚ್ಚುಮದ್ದು ಸಂಪೂರ್ಣ ಯಶಸ್ವಿ…!!! ತಾಲೂಕಿನ ಕಾಳಗಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಮೊದಲ ಚುಚ್ಚುಮದ್ದು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಮುದ್ದೇಬಿಹಾಳ ತಾಲೂಕಿನ ಕಾಳಗಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಕೋವಿಡ್ ಶೀಲ್ಡ್ ಚುಚ್ಚುಮದ್ದು ನೀಡುತ್ತಿರುವ ವೈದ್ಯರು.

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಯಶಸ್ವಿಯಾಗಿದ್ದು ಮೊದಲ ಹಂತವಾಗಿ ಸೋಮವಾರ ಆಸ್ಪತ್ರೆಯ ವೈದ್ಯರಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್-ಶೀಲ್ಡ್ ಚುಚ್ಚುಮದ್ದು ನೀಡಲಾಗಿದ್ದು ಸಿಬ್ಬಂದಿ ವರ್ಗದವರ ಆರೋಗ್ಯದಲ್ಲಿ ಯಾವುದೇ ಪರಿಣಾಮ ಕಂಡು ಬರಲಿಲ್ಲ.


ಮುದ್ದೇಬಿಹಾಳ ತಾಲೂಕಿನ ಕಾಳಗಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಕೋವಿಡ್ ಶೀಲ್ಡ್ ಚುಚ್ಚುಮದ್ದು ನೀಡುತ್ತಿರುವ ವೈದ್ಯರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯರಾದ ಡಾ.ರಂಗನಾಥ ವೈದ್ಯ, ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ, ಬಿ.ಎಚ್.ಇ.ಓ ಡಾ.ಸಿ.ಎಸ್.ಜಾರಡ್ಡಿ, ಆರೋಗ್ಯ ಸಹಾಯಕ ಎಂ.ಬಿ.ಮಾಶಟ್ಟಿ, ನಾಗೇಶ ಹಳ್ಳದ, ಗಿರೀಶ ಪೂಜಾರ, ಅವಿನಾಶ ಅರಬಳ್ಳಿ, ರಶೀದ ಕೊಡಗಾನೂರ, ಮುಸ್ತಾಕ ತುರಕಂಗೊರಿ ಇದ್ದರು.

Be the first to comment

Leave a Reply

Your email address will not be published.


*