ರಾಜ್ಯ ಸುದ್ದಿ
ಶಾಸಕ ಎಲ್.ಎನ್.ನಾರಾಯಣಸ್ವಾಮಿ ವಿರುದ್ಧ ಹೇಳಿಗೆ ಸತ್ಯಕ್ಕೆ ದೂರವಾದದ್ದುಎಕೆಪಿ ನಾಗೇಶ್ ರವರೇ, ಸರಕಾರ ನಿಮ್ಮದೇ ಇದೆ, ಕ್ಷೇತ್ರಕ್ಕೆ ನೀಡಿದ್ದ ಅನುದಾನ ತಡೆಹಿಡಿದಿದ್ದನ್ನು ತರುವ ಕೆಲಸ ಮಾಡಿ೨ಲಕ್ಷದ ೫೦ಸಾವಿರ ಜನರ ಮನೆ ಮಗನಾಗಿ ಕೆಲಸ ಮಾಡುತ್ತಿದ್ದೇನೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿರುಗೇಟುನನ್ನ ಜನ್ಮಭೂಮಿ ಹೊಸಕೋಟೆ, ಕರ್ಮ ಭೂಮಿ ದೇವನಹಳ್ಳಿ
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಶಾಸಕರ ವಿರುದ್ಧ ಕಾಂಗ್ರೆಸ್-ಬಿಜೆಪಿ ಮುಖಂಡರ ಆರೋಪಕ್ಕೆ ಸಂಬಂಧಿಸಿದಂತ ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿರುಗೇಟು ನೀಡುವುದರ ಮೂಲಕ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ನನ್ನ ಜನ್ಮಭೂಮಿ ಹೊಸಕೋಟೆಯಾಗಿದೆ. ಕರ್ಮ ಭೂಮಿ ದೇವನಹಳ್ಳಿಯಾಗಿದೆ. ನನ್ನ ಪ್ರಾಣ ಇರುವವರೆಗೂ ನಾನು ದೇವನಹಳ್ಳಿಯ ಪ್ರತಿ ಮನೆ ಮನೆಯ ಮಗನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಇದುವರೆಗೂ ಯಾವ ಪಕ್ಷದ ವಿರುದ್ಧ ಧ್ವನಿಯೆತ್ತಿಲ್ಲ. ಇಲ್ಲ ಸಲ್ಲದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದದ್ದು, ಕ್ಷೇತ್ರಕ್ಕೆ ನನ್ನ ಕೊಡುಗೆ ಏನು ಎಂದು ಪ್ರಶ್ನಿಸಿದವರಿಗೆ ನಿಮ್ಮ ಆತ್ಮ ಅವಲೋಕನ ಮಾಡಿಕೊಳ್ಳಬೇಕು. ಕ್ಷೇತ್ರಕ್ಕೆ ನಾನು ಸಾಕಷ್ಟು ಅಭಿವೃದ್ಧಿಯ ಕಾರ್ಯಗಳನ್ನು ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ವಿವರಿಸಿದ್ರು.
ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿರುವವರೆಲ್ಲಾ ಒಂದು ಕುಟುಂಬವಿದ್ದಂತೆ, ನಮ್ಮ ಶಾಸಕರ ವಿರುದ್ಧ ಸುಖ ಸುಮ್ಮನೆ ಆರೋಪ ಮಾಡಿದರೆ, ಸಹಿಸುವುದಿಲ್ಲ. ಎಕೆಪಿ ನಾಗೇಶ್ ಅವರಿಗೆ ಗೊತ್ತಿರಬಹುದು ಕಳ್ಳಿ ಹಾಲು ಯಾವುದು, ಹಸು ಹಾಲು ಯಾವುದು ಎಂದು ನಿಮಗೆ ತಿಳಿಯುತ್ತದೆ. ನಮ್ಮ ಶಾಸಕರು ಕ್ಷೇತ್ರದ ಅಭಿವೃದ್ಧಿ ಎಲ್ಲಾ ರೀತಿಯ ಒತ್ತು ನೀಡುತ್ತಿದ್ದಾರೆ. ೧೦೦ ಕಿಟ್ ಕೊಟ್ಟು, ಸಾವಿರ ಕಿಟ್ ಎಂದು ಹೇಳುವುದಲ್ಲ. ಈ ಹಿಂದೆ ಶಾಸಕರು ಕೊರೊನಾ ಸಂದರ್ಭದಲ್ಲಿ ೪೦ ಸಾವಿರ ಕಿಟ್ ಎಂದು ಹೇಳಿ, ೬೦ ಸಾವಿರ ಕಿಟ್ ವಿತರಿಸಿದ್ದಾರೆ. ಕಾಂಗ್ರೆಸ್‌ನ ಶಾಂತಕುಮಾರ್, ಪ್ರಸನ್ನಕುಮಾರ್, ಬಿಜೆಪಿ ಎಕೆಪಿ ನಾಗೇಶ್ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿರುತ್ತದೆ ಎಂದು ಗುಡುಗಿದರು.
ಈ ವೇಳೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಮುಖಂಡರಾದ ಪಟಾಲಪ್ಪ, ಹನುಮಂತಪ್ಪ, ಯುವ ಜೆಡಿಎಸ್ ಅಧ್ಯಕ್ಷ ಭರತ್, ಆಸೀಫ್, ಮಂಡಿಬೆಲೆ ರಾಜಣ್ಣ, ಮುನಿರಾಜು, ಜೆಡಿಎಸ್ ಮುಖಂಡರು ಮತ್ತಿತರರು ಇದ್ದರು.
Be the first to comment