ಸಾರಾಯಿ ಮಾರುವುದಿಲ್ಲ ಎಂದ ಅಂಗಡಿಕಾರರು; ಪ್ಯಾಕೆಟ್ ಸುಟ್ಟು ಜಾಗೃತಿ ಮೂಡಿಸಿದ ಗ್ರಾಮಸ್ಥರು! 

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿ 

CHETAN KENDULI

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮದಲ್ಲಿಯೂ ಗುರುವಾರ ರಾತ್ರಿ ಯುವಕರು ಒಂದಾಗಿ, ನಮ್ಮೂರಲ್ಲೂ ಯಾರೂ ಸಾರಾಯಿ ಮಾರಬಾರದು ಎಂದು ಅಂಗಡಿಕಾರರಿಗೆ ಮನವಿ ಮಾಡಿದ್ದಾರೆ. ಸಾರಾಯಿ ವಿರುದ್ಧ ಜನಜಾಗೃತಿ ಗ್ರಾಮೀಣ ಭಾಗದಲ್ಲಿ ನಿಧಾನವಾಗಿ ನಡೆಯುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಜನರು ಕುಡಿತಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮಹಿಳೆಯರು ಸಿಡಿದೆದ್ದು, ಗ್ರಾಮದ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡಬಾರದು ಎಂದು ಎಚ್ಚರಿಸಿದ್ದರು. ಅದಕ್ಕೆ ಗ್ರಾಮಸ್ಥರೂ ಕೈ ಜೋಡಿಸಿ, ಅನಧಿಕೃತವಾಗಿ ಸಾರಾಯಿ ಮಾರುವ ಅಂಗಡಿಗಳಿಂದ ಮದ್ಯ ಜಫ್ತಿ ಮಾಡಿ, ಇನ್ಮುಂದೆ ಮಾರದಂತೆ ಕಟ್ಟಪ್ಪಣೆ ಹೊರಡಿಸಿದ್ದರು.

ಈ ಘಟನೆಯಿಂದ ಪ್ರೇರಿತಗೊಂಡವರಂತೆ, ತಾಲೂಕಿ ಚವಡಳ್ಳಿ ಗ್ರಾಮದಲು ಮಹಿಳೆಯರು ಯುವಕರು ಯಾರೂ ಸಾರಾಯಿ ಮಾರಬಾರದು ಎಂದು ಅಂಗಡಿಕಾರರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಅಂಗಡಿಕಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಬೇರೆ ಬೇರೆ ಗ್ರಾಮದ ಕೆಲವರು, ಚವಡಳ್ಳಿ ಗ್ರಾಮಕ್ಕೆ ಬಂದು ಸಾರಾಯಿ ಖರೀದಿಸುವುದು, ಕುಡಿಯುವುದು ಮಾಡುತ್ತಿದ್ದರಂತೆ. ಇದನ್ನು ತಪ್ಪಿಸಲು ಹಾಗೂ ಗ್ರಾಮದಲ್ಲಿ ಸಾರಾಯಿ ಚಟದಿಂದ ಆಗುತ್ತಿರುವ ಅನಾಹುತಗಳನ್ನು ಕಡಿಮೆ ಮಾಡಲು, ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಗ್ರಾಮದ ಸರ್ಕಲ್ ನಲ್ಲಿ ಸಾರಾಯಿ ಪ್ಯಾಕೆಟ್ ಗಳನ್ನು ಸುಟ್ಟು, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಸಾರಾಯಿ ಮುಕ್ತ ಗ್ರಾಮ ಮಾಡುವ ಜನರ ಹೋರಾಟಕ್ಕೆ, ಯಾವ ರೀತಿ ಸ್ಪಂದನೆ ದೊರೆಯುತ್ತದೆ. ಸಾರಾಯಿ ಮುಕ್ತ ಗ್ರಾಮವಾಗಿಸಲು ಹೊರಟ ಯುವಕರಿಗೆ ಹಾಗೂ ಮಹಿಳೆಯರಿಗೆ ಅಧಿಕಾರಿಗಳು ಯಾವ ರೀತಿ ಸ್ಫಂದಿಸುತ್ತಾರೆ. ಮಾರಾಟ ಮಾಡುವವರು ಸಾರಾಯಿ ಮಾರಾಟ ಮಾಡುವುದನ್ನು ನಿಲ್ಲುಸುವವರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Be the first to comment

Leave a Reply

Your email address will not be published.


*