ಸುರಕ್ಷಿತ ಹಮ್ ಸುರಕ್ಷಿತ್ ತುಮ್” ಅಭಿಯಾನ ಕಾರ್ಯಕ್ರಮ ಯಶಸ್ವಿ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಸಿಂಧನೂರು

ಇಂದು ನಗರದ ತಾಲೂಕ ನ್ಯಾಯಾಲಯದಲ್ಲಿ “ಸುರಕ್ಷಿತ ಹಮ್ ಸುರಕ್ಷಿತ್ ತುಮ್” ಅಭಿಯಾನದೊಂದಿಗೆ ತಾಲೂಕ ಕಾನೂನು ಸೇವಾ ಪ್ರಾಧಿಕಾರ ಸಿಂಧನೂರು ತಾಲೂಕು ವಕೀಲರ ಸಂಘ ತಾಲೂಕ ಆರೋಗ್ಯ ಇಲಾಖೆ ಸಿಂಧನೂರು ಹಾಗೂ ಎಚ್ ಮರಿಯಪ್ಪ ವಕೀಲರು ಹೆಡಗಿಬಾಳ ಚಾರಿಟೇಬಲ್ ಟ್ರಸ್ಟ್ ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ಲಸಿಕಾ ಮಹಾ ಮೇಳವನ್ನು ಸಿಂಧನೂರು ತಾಲೂಕ ನ್ಯಾಯಾಲಯದಲ್ಲಿ ಆಯೋಜಿಸಲಾಗಿತ್ತು. ಟ್ರಸ್ಟಿನ ಅಧ್ಯಕ್ಷರಾದ ಮರಿಯಪ್ಪ ವಕೀಲರು ಮತ್ತು ಅವರ ಶ್ರೀಮತಿ ಮಹದೇವ್ ಅಮ್ಮನವರು ಲಸಿಕೆ ಹಾಕಿಕೊಳ್ಳುವುದರ ಮೂಲಕ ತಮ್ಮ ಜೊತೆಗೆ ಸುಮಾರು ಇನ್ನೂರಕ್ಕೂ ಹೆಚ್ಚು ಜನಕ್ಕೆ ಸಿಕ್ಕಿಸಿಕೊಳ್ಳಲು ಪ್ರೇರಣೆ ನೀಡಿದರು. ನಿನ್ನಂತೆಯೇ ನಿನ್ನ ಪರರನ್ನು ಪ್ರೀತಿಸು ಎನ್ನುವ ಹಾಗೆ ಇತರರಿಗೆ ಮಾದರಿಯಾದರು. ಅಧ್ಯಕ್ಷರು ತಾವು ಲಸಿಕೆ ಹಾಕಿಕೊಳ್ಳುವುದರ ಮೂಲಕ ಇತರರಿಗೂ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ಸಂದೇಶವನ್ನು ತಿಳಿಸಿದರು. ಸದರಿ ಕಾರ್ಯಕ್ರಮದಲ್ಲಿ ವಕೀಲರು ಹಾಗೂ ಕಕ್ಷಿದಾರರು ಮತ್ತು ಮರಿಯಪ್ಪ ವಕೀಲರ ಅಭಿಮಾನಿ ಬಳಗದ ಬಹು ಜನರು ಭಾಗವಹಿಸಿದ್ದರು.

CHETAN KENDULLI

ಇದೇ ಸಂದರ್ಭದಲ್ಲಿ ಶ್ರೇಯಾಂಕ ಎನ್ ದೊಡ್ಡಮನಿ ನ್ಯಾಯಾಧೀಶರು, ಶ್ರೀ ಆನಂದಪ್ಪ ಎಂ. ಎರಡನೇ ನ್ಯಾಯಾಧೀಶರು, ಶ್ರೀ ಅಯ್ಯನಗೌಡ ಟಿ.ಎಚ್.ಒ ಸಿಂಧನೂರು, ಶ್ರೀ ಡಾಕ್ಟರ್ ಸುರೇಂದ್ರಬಾಬು ಜಿಲ್ಲಾ ನೋಡಲ್ ಅಧಿಕಾರಿ ರಾಯಚೂರು, ಶ್ರೀ ಅಮರೇಗೌಡ ಎಂ. ಹಿರಿಯ ವಕೀಲರು,ಚೈತನ್ಯ “ಸುರಕ್ಷಿತ ಹಮ್ ಸುರಕ್ಷಿತ್ ತುಮ್”ಅಭಿಯಾನದ ಸಂಯೋಜಕರು ಬೆಂಗಳೂರು, ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.ರಾಯಚೂರು ಜಿಲ್ಲಾ ವರದಿ

Be the first to comment

Leave a Reply

Your email address will not be published.


*