ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಇತ್ತಿಚಿಗಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ ಠಾಕ್ರೆ ಅವರು ನೀಡಿದ್ದ ಹೇಳಿಕೆಗೆ ರಾಜ್ಯ ರಕ್ಷಣಾ ವೇಧಿಕೆ ಯುವ ಸೇನೆ ಪದಾಧಿಕಾರಿಗಳು ಶುಕ್ರವಾರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಬೆಳಗಾವಿಯ ಕಿತ್ತೂರರಾಣಿ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇಧಿಕೆ ಯುವ ಸೇನೆ ಪದಾಧಿಕಾರಿಗಳ ಪ್ರತಿಭಟನೆ ಮುಂದಾಗುತ್ತಿದ್ದಂತೆ ದಿಡೀರ್ ಪ್ರತ್ಯಕ್ಷರಾದ ಪೊಲೀಸ ಸಿಬ್ಬಂದಿಗಳು ಹೋರಾಟದಲ್ಲಿ ಪಾಲ್ಗೊಂಡ ಪದಾಧಿಕಾರಿಗಳನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಫ.1ಕ್ಕೆ ಸೋಲಾಪೂರದಲ್ಲಿ ಕರ್ನಾಟಕ ಧ್ವಜಾರೋಹನ:
ಮಹಾರಾಷ್ಟ್ರದ ಉದ್ದವ ಠಾಕ್ರೆ ಅವರು ಗಡಿ ಜಿಲ್ಲೆ ಬೆಳಗಾವಿ ವಿಷಯದಲ್ಲಿ ಇದೇ ರೀತಿಯಾಗಿ ಮುಂದುವರೆದರೆ ಬರುವ ಫೆ.1ಕ್ಕೆ ಸೋಲಾಪೂರದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇಧಿಕೆ ಯುವ ಸೇನೆ ವತಿಯಿಂದ ಕರ್ನಾಟಕ ನಾಡಿದ ಧ್ವಜಾರೋಹನವನ್ನು ಮಾಡಲಾಗುತ್ತದೆ. ಇದಕ್ಕೆ ನೀವೇನೂ ನಮ್ಮಿಂದ ಕಿತ್ತಿಕೊಳ್ಳಲು ಸಾದ್ಯವಿಲ್ಲ ಎಂದು ಯುವ ಸೇನೆಯವರು ತಿಳಿಸಿದ್ದಾರೆ.
Be the first to comment