ಜಿಲ್ಲಾ ಸುದ್ದಿಗಳು
ಮಸ್ಕಿ:
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಉಮಳಿ ತುಪ್ಪದೂರು ಗ್ರಾಮದ ಹೊರವಲಯದಲ್ಲಿರುವ ಮೊದಲೂಟಿ ಆದಯ್ಯ ಅಮರಯ್ಯ ದೇವಸ್ಥಾನದ ಹತ್ತಿರದ ಜಮೀನುವೊಂದರಲ್ಲಿ ಸಿಡಿಲು ಬಡಿದು ಕುರಿ, ನಾಯಿ ಸಾವನ್ನಪ್ಪಿವೆ.
ಅ.04ರ ಸಂಜೆ ಮೂರ್ನಾಲ್ಕು ಗಂಟೆ ಸುಮಾರಿಗೆ ಸಿಡಿಲು ಬಿದ್ದಿದ್ದು ಸುಮಾರು 20 ಕುರಿಗಳು, ಒಂದು ನಾಯಿ ಸಾವನ್ನಪ್ಪಿದೆ. ಕುರಿಗಳು ಉಮಳಿ ತುಪ್ಪದೂರು ಗ್ರಾಮದ ದೇಸಪ್ಪ ತಂದೆ ಚನ್ನಪ್ಪ ಹರಿಜನ ಎಂಬುವವರಿಗೆ ಸೇರಿದವುಗಳಾಗಿವೆ.
ಘಟನೆ ಸ್ಥಳಕ್ಕೆ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಮಸ್ಕಿಯ ಅಧಿಕಾರಿಗಳಿಗೆ ಬರುತ್ತದೆ ಎಂದು ಹೇಳಿ ಹೋಗಿದ್ದಾರೆ ಎನ್ನಲಾಗಿದೆ.
ಪೊಲೀಸರೊಬ್ಬರು ಕೂಡ ಸ್ಥಳಕ್ಕೆ ಭೇಟಿ ನೀಡಿ ಮಸ್ಕಿ ವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಮಸ್ಕಿಗೆ ಸಂಬಂಧಿಸಿದ ಅಧಿಕಾರಿಗಳು ನಾಳೆ ಬೆಳಗ್ಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆಂದು ಸ್ಥಳೀಯರು ಹೇಳ್ತಿದ್ದಾರೆ.
ಘಟನೆ ನಡೆದು ನಾಲ್ಕು ಘಂಟೆಗಳು ಕಳೆದರು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಕುರಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬಡ ಕುರಿಗಾಯಿಗೆ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Be the first to comment