ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ಚಿಲ್ಡ್ರನ್ ಇಂಡಿಯಾ ಫೌಂಡೇಶನ್ ಬೆಂಗಳೂರು ಮತ್ತು ರೀಚ್ ಸಂಸ್ಥೆ, ಬಾಗಲಕೋಟೆ ಹಾಗೂ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಕೋವಿಡ್ ಲಸಿಕಾ ಅಬಿಯಾನಕ್ಕೆ ಚಾಲನೆ ನೀಡಿ ಚಿಲ್ಡ್ರನ್ ಇಂಡಿಯಾ ಫೌಂಡೇಶನ್ ಬೆಂಗಳೂರು ಮತ್ತು ರೀಚ್ ಸಂಸ್ಥೆಯಿಂದ ಆರೋಗ್ಯ ಕೀಟ್ ಹಾಗೂ ಅರಿವಿನ ಸಾಮಗ್ರಿ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಜಿ.ಆರ್.ತಳವಾರ್, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಇವರು ಮಾತನಾಡುತ್ತಾ ಚಿಲ್ಡ್ರನ್ ಇಂಡಿಯಾ ಫೌಂಡೇಶನ್ ಮತ್ತು ರೀಚ್ ಸಂಸ್ಥೆ ಬಾಗಲಕೋಟೆ ತಾಲೂಕಿನ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 100% ಕೋವೀಡ್ ವ್ಯಾಕ್ಸಿನೇಷನ್ ಮಾಡುವ ಉದ್ದೇಶದಲ್ಲಿ ಕಾರ್ಯವನ್ನು ಹಮ್ಮಿಕೊಂಡಿದ್ದು ಅದರ ಪ್ರಯುಕ್ತ ರೀಚ್ ಸಂಸ್ಥೆಯೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಮಾಡುತ್ತಿದೆ. ಅಲ್ಲದೆ ಕರೋನಾ ವಾರಿಯರ್ ಗಳಾದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಮತ್ತು ಸಮುದಾಯದ ಎಲ್ಲ ಜನರಿಗೆ ವ್ಯಾಕ್ಸಿನ್ ದೊರೆಯಲಿ ಎಂಬ ಉದ್ದೇಶದಿಂದ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿ ಸಂಸ್ಥೆಗಳ ಮೂಲಕ ನೀಡಿದ ಆರೋಗ್ಯ ಸಾಮಾಗ್ರಿಗಳನ್ನು ಸರಿಯಾದ ರೀತಿಯಲ್ಲಿ ಬಳಸಿ ಜನರಿಗೆ ಅನುಕೂಲವಾಗಲಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಚಿಲ್ಡ್ರನ್ ಇಂಡಿಯಾ ಫೌಂಡೇಶನ್ ಬೆಂಗಳೂರು ಮತ್ತು ರೀಚ್ ಸಂಸ್ಥೆ ಬಾಗಲಕೋಟೆ ಇವರ ಸಹಯೋಗದ ಮೂಲಕ ಲಸಿಕಾ ಅಭಿಯಾನಕ್ಕೆ ಅನುಕೂಲವಾಗುವ ಆರೋಗ್ಯ ಕೀಟ್‌ಗಳನ್ನು ಸಮುದಾಯ ಆರೋಗ್ಯ ಅಧಿಕಾರಿಗಳಾದ ಜಯಶ್ರಿ ಎನ್ ಇವರಿಗೆ ಅರಿವಿನ ಬ್ಯಾನರ್ 10, ಮುಖ ಕವಚ 7, ಪ್ಯಾರಾಸಿಟಮಲ್ ಮಾತ್ರೆಗಳು 700, ಕೈ ಕವಚ 200, ಹ್ಯಾಂಡ್ ಸ್ಯಾನಿಟೇಜರ್ 18, ಮಾಹಿತಿ ಪೋಸ್ಟರ್ 09, ಸ್ಯಾನಿಟೇಜರ್ 5 ಲೀಟರ್, ಪಲ್ಸ ಆಕ್ಸಿಮೀಟರ್ 1, ಥರ್ಮೋ ಮೀಟರ್ 1, ಬ್ಲಡ್ ಪ್ರಶರ್ ಮಾನಿಟರ್ 1 ಮತ್ತು ಅಭಿಯಾನದಲ್ಲಿ ಭಾಗಿಯಾದ ಫಲಾನುಭವಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೇಜರ್‌ಗಳನು ರೀಚ್ ಸಂಸ್ಥೆಯ ಸ್ವಯಂ ಸೇವಕರಾದ ರಾಜೇಶ್ವರಿ ಧನ್ನೂರ, ಹಾಗೂ ಶಾರದಾ ಭಜಂತ್ರಿ ಇವರು ವಿತರಿಸಿದರು.ಮೊದಲ ಲಸಿಕೆ – 24 ಹಾಗೂ ಎರಡನೇ ಲಸಿಕೆ – 20 ಇಂದಿನ ಪ್ರಗತಿ ಆಗಿದೆ. ಈ ಕಾರ್ಯಕ್ರಮದಲ್ಲಿ ಪದ್ಮಾ ಬಂಡಿವಡ್ಡರ್, ಆಶಾ ಕಾರ್ಯಕರ್ತೆ, ರೇಖಾ ಎಸ್, ಗ್ರಾಮ ಲೆಕ್ಕಾಧಿಕಾರಿ, ಅಂಗನವಾಡಿ ಕಾರ್ಯಕರ್ತೆರಾದ ಸವಿತಾ, ಅಕ್ಕಮ್ಮ, ಸುಜಾತ ಇತರರು ಹಾಜರಿದ್ದರು.
Be the first to comment