ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ವಿಜ್ಞಾನದ ಹತ್ತಿರ ಬಂದಾಗ ಪ್ರತಿಯೊಬ್ಬರಿಗೂ ವೈಜ್ಞಾನಿಕ ತಂತ್ರಜ್ಞಾನದ ತಿಳುವಳಿಕೆ ಮತ್ತು ವೈಜ್ಞಾನಿಕ ಅರಿವು ಮೂಡಿ ನಮ್ಮ ದಿನ ನಿತ್ಯದ ಜೀವನದಲ್ಲಿ ವಿಜ್ಞಾನವು ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದೆ ಅದರಂತೆ ಮಕ್ಕಳು ವೈಜ್ಞಾನಿಕ ಅರಿವಿನಿಂದ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಹುದು ಎಂದು ತೋ.ವಿ.ವಿ ಕುಲಪತಿಗಳು ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಡಾ.ಕೆ.ಎಮ್.ಇಂದಿರೇಶ ಹೇಳಿದರು.
ತೋವಿವಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನೂತನ ತರಬೇತಿ ಸಭಾಂಗಣದಲ್ಲಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟದ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ ಚಿಂತನಾ ಕಾರ್ಯಕ್ರಮ ಹಾಗೂ ಹೊರಾಂಗಣ ವೈಜ್ಞಾನಿಕ ಪ್ರಾತ್ಯಕ್ಷಿಕೆಗಳ ಭೇಟಿ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೋ.ವಿ.ವಿಯ ಕುಲಸಚಿವರು ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿಗಳಾದ ಡಾ.ಟಿ.ಬಿ ಅಳ್ಳೊಳ್ಳಿ ಮಾತನಾಡಿ ಮೂಡ ನಂಬಿಕೆ, ಅಂಧಕಾರ ಹಾಗೂ ಅನಾಚಾರವು ಮಾನವನ ಅಭಿವೃದ್ಧಿಯ ಕಂಟಕಗಳಾಗಿದ್ದು, ಮಕ್ಕಳಲ್ಲಿ ಸಂಪೂರ್ಣ ಧನಾತ್ಮಕ ವೈಜ್ಞಾನಿಕ ಚಿಂತನೆಗಳ ಸವಿಚಾರಗಳನ್ನು ಇಂದಿನ ಪಾಠಮಾಲಿಕೆಗಳಲ್ಲಿ ಮೂಡಿಬಂದಾಗ ಮಕ್ಕಳು ಸಂಪೂರ್ಣ ವಿಕಸನ ಹೊಂದಿ, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲು ಸಾಧ್ಯವೆಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮಕ್ಕಳಲ್ಲಿ ಆಹಾರ ಪೋಷಕಾಂಷಗಳ ಅರಿವಿನ ಮಹತ್ವವನ್ನು ತಿಳಿಸಿ ಮಕ್ಕಳ ಸರ್ವತೋಮುಖ ಬೆಳªಣಿಗೆಗೆ ಪೌಷ್ಠಿಕಾಂಷಯುಕ್ತ ಆಹಾರ ಬಹುಮುಖ್ಯವೆಂದರು.
ತೋವಿವಿಯ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ.ವಸಂತ ಗಾಣಿಗೇರ ಮಾತನಾಡಿ ತೋ.ವಿ.ವಿಯ ಆವರಣದಲ್ಲಿ ನೂತನವಾಗಿ ಸ್ಥಾಪಿಸಿದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹೊರ ವಿಜ್ಞಾನ ಪರಿಕರಗಳನ್ನು ಸ್ಥಾಪನೆ ಮಾಡಲಾಗಿದ್ದು ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ವಿಜ್ಞಾನದ ಅನೇಕ ವಿಷಯಗಳನ್ನು ಅರಿಯಬಹುದು ಹಾಗೂ ಅನೇಕ ವಿಜ್ಞಾನ ಚಿಂತನ-ಮಂಥನ ಕಾರ್ಯಗಾರವನ್ನು ಹೆಚ್ಚು ಹೆಚ್ಚು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟದ ಸಹ ಪ್ರಾಧ್ಯಾಪಕರಾದ ಡಾ.ಎಸ್.ಎಸ್.ಭೂಮನ್ನನವರ ಅವರು ತೋ.ವಿ.ವಿ. ಅನೇಕ ವಿಭಾಗಗಳಲ್ಲಿ ನಡೆದ ಅನೇಕ ಸಂಶೋಧನಾ ಫಲಿತಾಂಶಗಳನ್ನು ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯಗಳನ್ನು ಅಧ್ಯಶಿಸಲು ತೋ.ವಿ.ವಿ ಅವಕಾಶ ನೀಡಬೇಕೆಂದು ಹೇಳಿದರು.
ಡಾ.ವಿ.ಡಿ ಹೂಲಗೇರಿ ಮಾತನಾಡಿ ವಿಜ್ಞಾನ ವೆಂದರೆ ಕೇವಲ ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಾಗಬಾರದು, ಅದು ಮಕ್ಕಳ ದಿನ ನಿತ್ಯದ ಜೀವನದಲ್ಲಿ ವೈಜ್ಞಾನಿಕವಾಗಿ ಹಾಗೂ ಪ್ರಾಯೋಗಿಕವಾಗಿ ಬೇರೂರಬೇಕು ಎಂದರು. ಕುಮಾರಿ ದೀಪಾ ಅಂಗಡಿ ಹಾಗೂ ಶಿವಾನಿ ಗೌಡರ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ವೇದಿಕೆಯಲ್ಲಿ ಡಾ.ಶೃತಿ.ಪಿ.ಗೊಂದಿ ಕ್ಯುರೇಟರ್, ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕುಮಾರಿ ಸ್ವಾತಿ ಮೋದಿ ವಂದಣಾರ್ಪಣೆಯನ್ನು ಮಾಡಿದರು. ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
Be the first to comment