ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಯಶಸ್ವಿ 155 ವರ್ಷಗಳನ್ನು ಪೂರೈಸಿದ ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭ ಜನವರಿಯಲ್ಲಿ ಜರುಗಲಿದ್ದು ಈಗಿನಿಂದಲೆ ಶಾಲಾ ಸ್ವಚ್ಚತಾ ಕಾರ್ಯ ಗ್ರಾಮ ಪಂಚಾಯತಿಯಿಂದ ಪ್ರಾರಂಭಿಸಲಾಗಿದೆ.
ಕೆಲೂರ ಶಾಲೆಯು ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿದ್ದು ಇಲ್ಲಿ ಕಲಿತ ಹಲವರು ರಾಜ್ಯ,ಹೊರ ರಾಜ್ಯ,ವಿದೇಶಗಳಲ್ಲೂ ಉನ್ನತ ಹುದ್ದಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಶಾಲೆಯ ಕೀರ್ತಿ ಹೆಚ್ವಿಸಿದ್ದಾರೆ.ಈ ಶಾಲೆಯ 155 ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿರುವುದು ನಿಜಕ್ಕೂ ಸಂತಸದ ಸಂಗತಿ.ಈಗಾಲೆ ಈ ಕಾರ್ಯಕ್ರಮಕ್ಕೆ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶಿವಗಂಗಾ ಹಾಗೂ ಕೆಲೂರ, ಗ್ರಾಮದ ಸಮಸ್ತ ಹಿರಿಯರು, ಕೆಲೂರ ಗೆಳೆಯರ ಬಳಗದವರು, ಗ್ರಾಮದ ಯುವಕರು, ಸಹೋದರ ಸಹೋದರಿಯರು, ಶಾಲೆಯ ಎಲ್ಲ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮ ಕುರಿತು ಸಭೆ ನಡೆಸಲಾಗಿದೆ ಎಂದು ಗ್ರಾ.ಪಂ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಮಾಹಿತಿ ಹಂಚಿಕೊಂಡರು.
Be the first to comment