ಜಿಲ್ಲಾ ಸುದ್ದಿಗಳು
ಕೊಪ್ಪಳ:
ಜಿಲ್ಲೆಯ ಎರೇ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತಿದ ಸೂರ್ಯಕಾಂತಿ ಬೆಳೆಗಳೆಲ್ಲ ಕಿಟ ಬಾದೆಯಿಂದ ಸೂರ್ಯಕಾಂತಿ ಬೆಳೆ ನಾಶವಾಗಿದೆ ಸರ್ಕಾರ ರೈತರಿಗೆ ಸೂಕ್ತವಾದ ಪರಿಹಾರವನ್ನು ಕೊಡಬೇಕೆಂದು ಪ್ರೊ.ನಂಜುಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. ವಿ.ಆರ್.ನಾರಾಯಣರೆಡ್ಡಿ ಯವರ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಎರೇ ಭಾಗದ ಕುಕನೂರು ತಾಲೂಕಿನ ಯರೇಹಂಚಿನಾಳ ಬಿನ್ನಾಳ ಸಿದ್ನಕೊಪ್ಪ ಚಿಕ್ಕೆನಕೊಪ್ಪ ಸೋಂಪೂರ ಮಳ್ಳೆಕೊಪ್ಪ ಮನ್ನಾಪೂರ ಬನ್ನಿಕೊಪ್ಪ ಹಳ್ಳಿಗುಡಿ ಮಂಡಲಗೇರಿ ಕುಕನೂರು ಸೇರಿದಂತೆ ಎರೇ ಭಾಗದಲ್ಲಿ ರೈತರು ಅಲ್ಲ ಸಲ್ಪ ಮಳೆಗೆ ರೈತರು ಸಾಲ ಸೂಲ ಮಾಡಿ ಸೂರ್ಯಕಾಂತಿ ಬಿತ್ತಿನೆ ಮಾಡಿದ್ದಾರೆ ಸೂರ್ಯಕಾಂತಿ ಎಲೇಯ ಮೇಲೆ ಹಸಿರು ಕಿಡೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ರೈತರಿಗೆ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ರೈತರು ಸಾಲ ಸೂಲ ಮಾಡಿ ಬಿತ್ತಿದ ಬೆಳೆಗಳು ಕೀಟಬಾಧೆಯಿಂದ ಹಾಳಾದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಹಳ್ಳಿ ಕಡೆಗೆ ಗಮನಹರಿಸಿಲ್ಲ ರೈತರು ಕಷ್ಟಪಟ್ಟು ಬೆಳೆದ ಸೂರ್ಯಕಾಂತಿ ಬೆಳೆ ಅಲ್ಲದೆ ಈರುಳ್ಳಿ ಬೆಳೆ ಮುಂತಾದ ಬೆಳೆಗಳು ಕೀಟಬಾಧೆಯಿಂದ ವಿಪರೀತ ನಾಶವಾಗಿದೆ ಸರ್ಕಾರ ರೈತರಿಗೆ ಹಾಳಾದ ಬೆಳೆಗಳಿಗೆ ಪರಿಹಾರವನ್ನು ಕೊಡಬೇಕು ರೈತರು ತಮ್ಮ ಬೆಳೆಗಳಿಗೆ ಇನ್ಯೂರೇಸೆನ್ ತುಂಬಿದ್ದನ್ನು ಒಂದು ಎಕರೆಗೆ ಐವತ್ತು ಸಾವಿರ ರೂಪಾಯಿ ಬಿಡುಗಡೆ ಮಾಡಿಕೊಡಬೇಕೆಂದು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಜಿರಸಾಬ ತಳಕಲ್ಲ್. ಕುಕನೂರು ತಾಲೂಕಾಧ್ಯಕ್ಷ ಅಂದಪ್ಪ ಹುರಳಿ. ಯಲಬುರ್ಗಾ ತಾಲೂಕಾಧ್ಯಕ್ಷ ಹೆಮಣ್ಣ ಸೋಂಪುರ , ಕುಷ್ಟಗಿ ತಾಲೂಕಾಧ್ಯಕ್ಷ ಬಸವರಾಜ ಮುಗನೂರು. ಗದಗ ಸಮಿತಿ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ. ಸುಬಾಷ್ ನವಲಗುಂದ ಮಲ್ಲಪ್ಪ ಹನಸಿ.ಹುಚ್ಚೀರಪ್ಪ ಜೋಗಿನ , ಶರಣಪ್ಪ ಜೋಗಿನ ಇತರರು ಸರ್ಕಾರಕ್ಕೆ ಆಗ್ರಹಿಸಿದರು.
Be the first to comment