ಕೆನರಾ ಬ್ಯಾಂಕ್‍ನಿಂದ ಬಡವರಿಗೆ ಫುಡ್ ವಿತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಒಂದಾದ ಕೆನರಾ ಬ್ಯಾಂಕ್‍ನ ಬಾಗಲಕೋಟೆ ಕ್ಷೇತ್ರೀಯ ಕಚೇರಿಯಿಂದ ಕಿರಸೂರ ಕೋವಿಡ್ ಮಹಾಮಾರಿಯಿಂದ ಸಂಕಷ್ಟಕ್ಕೆ ಒಳಗಾದ ಕಿರಸೂರ ಗ್ರಾಮದ ಜನರಿಗೆ ಬೆಳಗಿನ ಉಪಹಾರದ ಪೊಟ್ಟಣವನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾನಾಡಿದ ಕೆನರಾ ಬ್ಯಾಂಕ್‍ನ ಕ್ಷೇತ್ರಿಯ ಪ್ರಬಂಧಕರಾದ ಸತೀಶ ಬಾಬು ಮಾತನಾಡಿ ಲಾಕ್‍ಡೌನ್‍ದಿಂದ ಕೆಲಸವಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಮಯದಲ್ಲಿ ಜನರ ನೆರವಿಗೆ ನಿಲ್ಲಬೇಕಾಗಿರುವುದು ಮಾನವೀಯ ಧರ್ಮವಾಗಿದ್ದು, ಕೆನರಾ ಬ್ಯಾಂಕ್‍ನಿಂದ ಸಾಮಾಜಮುಖಿ ಕಾರ್ಯವನ್ನು ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗಳಿಗೆ ಸ್ಯಾನಿಟೈಜರ್ ಬಾಟಲ್‍ಗಳನ್ನು ಸಹ ವಿತರಿಸಲಾಗಿದೆ. ಅಲ್ಲದೇ ಕೆಲವೊಂದು ಕಚೇರಿಗಳಿಗೆ ಸ್ಯಾನಿಟೈಜರ್ ಆಟೋಮೆಟಿಕ್ ಮಷೀನ್ ಸಹ ನೀಡಲಾಗಿದೆ ಎಂದು ತಿಳಿಸಿದರು. ಲೀಡ್ ಬ್ಯಾಂಕ್‍ನ ಮುಖ್ಯ ಪ್ರಬಂಧಕ ಗೋಪಾಲ ರೆಡ್ಡಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*