ಸ್ಯಾಲರಿ ಹೈಕ್ ಆಗಿಲ್ಲ, ಕಡಿಮೆ ಸಂಬಳದಲ್ಲಿ  ಮನೆ ಸಂಭಾಳಿಸೊದು ಕಷ್ಟಕರ, ಕಂಪನಿ ಮ್ಯಾನೆಜ್ಮೆಟ್ ಕಿರುಕುಳಕ್ಕೆ ಮನನೊಂದು ಕಾರ್ಮಿಕ ನೇಣಿಗೆ ಶರಣು.

ವರದಿ ಆಕಾಶ್ ಚಲವಾದಿ

ರಾಜ್ಯ ಸುದ್ದಿ 

CHETAN KENDULI

 

ಆ್ಯಂಕರ್ :  ಸ್ಯಾಲರಿ  ಹೈಕ್  ಆಗಿಲ್ಲದೆ, ಕಡಿಮೆ ಸಂಬಳದಲ್ಲಿ  ಮನೆ ಸಂಭಾಳಿಸುವುದು ಕಷ್ಟವಾಗಿದೆ, ಇದರ ಜೊತೆ ಕಂಪನಿ ಮ್ಯಾನೆಜ್ಮೆಟ್  ಕಿರುಕುಳಕ್ಕೆ ಬೇಸತ್ತು  ಡೆತ್  ನೋಟ್ ಬರೆದು  ನೇಣಿಗೆ ಶರಣಾಗಿದ್ದಾನೆ.

ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ  ಶಿವರಾಜ್ (28) ಆತ್ಮಹತ್ಯೆಗೆ ಶರಣಾದ  ಕಾರ್ಮಿಕ,  ಮೃತ ಕಾರ್ಮಿಕ ದಾವಣಗೆರೆಯ ಮೂಲದವನಾಗಿದ್ದು,ಬೆಂಗಳೂರು  ಉತ್ತರ ತಾಲೂಕಿನ ಅದ್ದಿಗಾನಹಳ್ಳಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ,  ಡೆತ್ ನೋಟ್  ಬರೆದು ಸಾವಿಗೆ ಶರಣಾಗಿರುವ  ಮೃತ ಕಾರ್ಮಿಕ  ತನ್ನ ನಿಜವಾದ ಸಂಬಳ ಕೇವಲ 18,000 ರೂ.ಗಳಾಗಿದ್ದು, ಅದರಲ್ಲಿ ಮನೆ ಸಂಭಾಳಿಸಲು ಸಾಧ್ಯವಾಗುತ್ತಿಲ್ಲ. ಸಂಬಳ ಹೆಚ್ಚಿಸಿ ಎಂಬ ಬೇಡಿಕೆಯನ್ನು ಕಾರ್ಖಾನೆಯವರು ಈಡೇರಿಸುತ್ತಿಲ್ಲ.

ಜೊತೆಗೆ  ಕಂಪನಿಯ ವೆಂಕಟರಾಮು, ಬಾಲು ಮತ್ತು ರಾಮು ಎಂಬುವರು ಮಾನಸಿಕ ಕಿರುಕುಳ  ನೀಡುತ್ತಿರುವ ಬಗ್ಗೆ  ಬರೆದಿದ್ದಾನೆ, ಇದರ ಜೊತೆಗೆ ತನ್ನ ಕುಟುಂಬ  ಬಗ್ಗೆ  ಬರೆದಿರುವ ಆತ ಕಂಪನಿಯಲ್ಲಿ ಸಿಗುವ ಇನ್ಷೂರೆನ್ಸ್​ ಹಣವನ್ನು ತನ್ನ ಮನೆಯವರಿಗೆ ನೀಡಿ. ಅಡ ಇಟ್ಟಿರುವ ತನ್ನ ತಾಯಿ ಮತ್ತು ಅಕ್ಕನ ಒಡವೆಯನ್ನು ಯಾರಾದರೂ ಬಿಡಿಸಿಕೊಡಿ ಎಂದು ಕೇಳಿಕೊಂಡಿದ್ದಾನೆ. ಸಾಯುತ್ತಿರುವುದಕ್ಕೆ ಮನೆಯವರಿಗೆಲ್ಲ ಸಾರಿ ಎಂದು ಪತ್ರದಲ್ಲಿ ಬರೆದಿದ್ದಾನೆ. ರಾಜಾನುಕುಂಟೆ  ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*