ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರಿಂದ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ….!

ವರದಿ: ಕುಮಾರ ನಾಯ್ಕ, ಭಟ್ಕಳ

ಜಿಲ್ಲಾ ಸುದ್ದಿಗಳು

CHETAN KENDULI

ಭಟ್ಕಳ:

ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಅಗತ್ಯದ ಕೆಲಸಗಳು ಶೀಘ್ರದಲ್ಲಿ ಆಗುವುದಲ್ಲದೇ ಸೂಕ್ತ ಮಾರ್ಗದರ್ಶನ ಕೂಡಾ ದೊರೆಯುತ್ತಿದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.
ಅವರು ಭಟ್ಕಳ ಹುರುಳಿಸಾಲಿನಲ್ಲಿನ ಕಟ್ಟಡ ಹಾಗೂ ಇತರೇ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರಿಗೆ ಕೊರೊನಾ ಫುಡ್ ಕಿಟ್ ವಿತರಿಸಿ ಮಾತನಾಡುತ್ತಿದ್ದರು.
ಕಳೆದ ಹಲವಾರು ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಕಾರ್ಮಿಕ ಇಲಾಖೆಯು ನಮ್ಮ ಸರಕಾರ ಬಂದ ನಂತರ ಚುರುಕುಗೊಂಡಿದೆ. ಶಿವರಾಮ ಹೆಬ್ಬಾರ್ ಅವರು ಕಾರ್ಮಿಕ ಸಚಿವರಾದ ನಂತರ ಇನ್ನಷ್ಟು ಸೌಲಭ್ಯಗಳು ದೊರೆಯಲು ಆರಂಭವಾಗಿದ್ದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೂಡಾ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದ ಅವರು ಇಲಾಖೆಯ ಸೌಲಭ್ಯದ ಕುರಿತು ಒಂದು ಕಾರ್ಯಾಗಾರವನ್ನು ಏರ್ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಾರ್ಮಿಕ ಮಂಡಳಿಯ ರಾಜ್ಯ ಸಮಿತಿ ಸದಸ್ಯೆ ಶಿವಾನಿ ಶಾಂತಾರಾಮ ಅವರು ಮಾತನಾಡಿ ಹಿಂದೆ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳುವಲ್ಲಿ ಮುಂದೆ ಬರುತ್ತಿರಲಿಲ್ಲ, ಆದರೆ ಇಂದು ಎಲ್ಲಾ ಕೂಲಿ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಉತ್ತಮ ಧನ ಸಹಾಯ ದೊರೆಯುತ್ತಿದೆ, ಉನ್ನತ ಶಿಕ್ಷಣಕ್ಕೂ ಧನ ಸಹಾಯ ಇದೆ ಅಲ್ಲದೇ ರಾಜ್ಯದಲ್ಲಿ ಕಾರ್ಮಿಕರ ೧೦ ಮಕ್ಕಳಿಗೆ ಉಚಿತವಾಗಿ ಪೈಲೆಟ್ ತರಬೇತಿಯನ್ನು ನೀಡಲು ಮಂಡಳಿ ತೀರ್ಮಾನಿಸಿದ್ದು ಓರ್ವರಿಗೆ ೧೫ ಲಕ್ಷ ಮಂಡಳಿ ವ್ಯಯಿಸಲಿದೆ ಎಂದ ಅವರು ಜಿಲ್ಲೆಯಿಂದ ಕನಿಷ್ಟ ಎರಡು ಜನರಿಗೆ ಅವಕಾಶ ದೊರೆಯುವಂತಾಗಬೇಕು ಎಂದರು. ಈ ಕುರಿತು ಶಾಸಕರು ಪ್ರಯತ್ನ ಮಾಡಬೇಕು ಎಂದ ಅವರು ಶಾಸಕರ ಪ್ರಯತ್ನದಿಂದ ಕಾರ್ಮಿಕ ಇಲಾಖೆಗೆ ಸಿಬ್ಬಂದಿಗಳು ಭರ್ತಿಯಾಗಿದ್ದು ಯಾವುದೇ ಕೆಲಸ ಸುಲಭದಲ್ಲಿ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಒಟ್ಟು ೫೦೦ ಕ್ಕೂ ಅಧಿಕ ನೋಂದಾಯಿತ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಅಕ್ಬರ್ ಮುಲ್ಲಾ, ತಾಲೂಕಾ ಪ್ರಭಾರ ಕಾರ್ಮಿಕ ನೀರಿಕ್ಷಕ ಗುರು, ಕಟ್ಟಡ ಮತ್ತು ಇತರೇ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಉಪಧ್ಯಕ್ಷ ಕೃಷ್ಣಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.ಕುಮಾರಿ ರತ್ನಾ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಜಟ್ಟಪ್ಪ ನಾಯ್ಕ ಸ್ವಾಗತಿಸಿದರು, ವಂದಿಸಿದರು.

Be the first to comment

Leave a Reply

Your email address will not be published.


*