ರಾಜ್ಯ ಸುದ್ದಿಗಳು
ದೇವನಹಳ್ಳಿ
ಡಿ.12 ರಂದು ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಡಾ.ಟಿ.ಎಚ್ ಆಂಜನಪ್ಪ ಹಾಗು ಡಾ.ಕೆ.ನಾರಾಯಣಗೌಡರ ಬಣವನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದು ದೇವನಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಎ.ವಿ.ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ಸಮೀಪದ ಆವತಿ ಗ್ರಾಮದಲ್ಲಿ ಒಕ್ಕಲಿಗರ ಸಂಘದ ಚುನಾವಣಾ ಪ್ರಚಾರದವೇಳೆ ಮಾತನಾಡಿದ ಅವರು. ಡಾ.ಟಿ.ಎಚ್ ಆಂಜನಪ್ಪ ಹಾಗು ಡಾ.ಕೆ.ನಾರಾಯಣಗೌಡರ ಬಣದಲ್ಲಿ ಎಲ್ಲಾ ಹೊಸಬರಿದ್ದು ಅವರನ್ನು ಆಯ್ಕೆ ಮಾಡಿದರೆ ಸಮುದಾಯದ ಏಳ್ಗೆಗಾಗಿ ಎಲ್ಲರು ಶ್ರಮಿಸಲಿದ್ದಾರೆ. ಪ್ರಣಾಳಿಕೆಯಲ್ಲಿ ನುಡಿದಂತೆ ನಡೆದುಕೊಳ್ಳಲಿದ್ದಾರೆ ಆಗಾಗಿ ಒಕ್ಕಲಿಗ ಸಮುದಾಯದವರು ಹೊಸಬರಿಗೆ ಅವಕಾಶ ನೀಡಿ ಅವರನ್ನು ಆಯ್ಕೆ ಮಾಡಬೇಕು ಒಂದೇ ಬಣ ಆಯ್ಕೆಯಾದರೆ ತಾಲ್ಲೂಕಿನಲ್ಲಿ ಅನೇಕ ಅಭಿವೃದ್ದಿ ಕೆಲಸಗಳು ಸಹ ಆಗಲಿವೆ ಆಗಾಗಿ 15 ಜನರರಿರುವ ತಂಡವನ್ನು ಆಯ್ಕೆ ಮಾಡಬೇಕು ಎಂದರು.
ರಾಜ್ಯ ಒಕ್ಕಲಿಗರ ಸಂಘದ ಅಭ್ಯರ್ಥಿ ಎಂ.ಎಸ್.ಉಮಾಪತಿ ಮಾತನಾಡಿ ಒಕ್ಕಲಿಗ ಸಮುದಾಯ ಆರ್ಥಿಕ ಹಾಗು ಶೈಕ್ಷಣಿಕವಾಗಿ ಮೇಲೆಬರಬೇಕಾದರೆ ಮತದಾರರು ಮತ ಚಲಾಯಿಸಿ. ನಮ್ಮಸಮುದಾಯ ಕೊಡುವುದೇ ಹೊರತು ಯಾವುದನ್ನು ತೆಗೆದುಕೊಂಡಿಲ್ಲ. ಎಲ್ಲರ ಅನುಕೂಲವಾಗುವ ದೃಷ್ಠಿಯಿಂದ ಕೆಲಸ ಮಾಡಲು ಮತದಾರರು ಅವಕಾಶ ಕಲ್ಪಿಸಿಕೊಡಬೇಕು. ಉತ್ತಮ ಯೋಗ್ಯರನ್ನು ಗುರುತಿಸಿ ಮತ ಹಾಕಿ ಯಾವುದೇ ಹಣ ಉಡುಗೊರೆಗಳಂತಹ ಆಮಿಷಗಳಿಗೆ ಬಲಿಯಾಗಬೇಡಿ ಅದು ಕೇವಲ ಕಾಲ್ಪನಿಕ ಮಾತ್ರ. ಗ್ರಾಮಾಂತರ ಜಿಲ್ಲೆಯಲ್ಲಿ 12 ಹೋಬಳಿಗಳಲ್ಲಿ ವೆಟರ್ನರಿ ಆಸ್ಪತ್ರೆಗಳನ್ನು ಪ್ರಾರಂಭಿಸುತ್ತೇನೆ. ಎಲ್ಲರನ್ನು ಸಂತೋಷಪಡಿಸಲು ಸಾದ್ಯವಿಲ್ಲ ಆದರೆ ನಮ್ಮ ಕೈಲಾದ ಮಟ್ಟಿಗೆ ಪ್ರಯತ್ನಿಸುತ್ತೇನೆ. ಮತದಾರರು ಅನೇಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ನಮ್ಮ ತಂಡ ಆಯ್ಕೆಯಾದರೆ ಹಂತಹಂತವಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಲಾಗುವುದು.
ಇದೆ ವೇಳೆ ಒಕ್ಕಲಿಗ ಸಮುದಾಯದ ಮುಖಂಡರಾದ ಭುವನಹಳ್ಳಿ ಮುನಿರಾಜು, ವಕೀಲರಾದ ಬೈರೇಗೌಡ, ಎಚ್.ಎಂ.ರವಿಕುಮಾರ್, ನಿಲೇರಿ ಅಂಬರೀಶ್, ಮಂಜುನಾಥ್, ಲಕ್ಷಿನಾರಾಯಣಪ್ಪ, ಬಸವರಾಜು, ಮುನೇಗೌಡ ಮುಂತಾದವರು ಇದ್ದರು.
Be the first to comment