ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಬಿದರಕುಂದಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಥಳೀಯ ಕೆಲ ಕುತಂತ್ರ ರಾಜಕಾರಣಿಗಳಿಂದ ಮತಕ್ಷೇತ್ರದ ನಂಬರ್‌ಗಳನ್ನು ಅದಲು ಬದಲು ಮಾಡಿದ್ದು ಚುನಾವಣಾ ನಿಯಮ ಉಲ್ಲಂಘನೆಯ ಸ್ಪಷ್ಠವಾಗಿದ್ದು ಕೂಡಲೇ ಬಿದರಕುಂದಿ ಪಂಚಾಯತಿಯಲ್ಲಿ ಮರು ಚುನಾವಣೆ ಮಾಡಬೇಕು ಎಂದು ಮುಖಂಡ ಲಕ್ಷ್ಮಣ ವಡ್ಡರ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದಿನಾಂಕ 07-08-2020ರಂದು ಜಿಲ್ಲಾ ಚುನಾವಣಾಧಿಕಾರಿಗಳು ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಸ್ಥಳೀಯ ಅಧಿಕಾರಿಗಳು ಚುನಾವಣೆಯನ್ನು ನಡೆಸದೇ ಸ್ಥಳೀಯ ಕೆಲ ರಾಜಕಾರಣಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಿದರಕುಂದಿ ಪಂಚಾಯತಿಯ ಕ್ಷೇತ್ರ-1ಕ್ಕೆ ಕ್ಷೇತ್ರ-3 ಎಂದು ಹಾಗೂ ಕ್ಷೇತ್ರ 3ಕ್ಕೆ ಕ್ಷೇತ್ರ-1 ಎಂದು ಕ್ಷೇತ್ರಗಳ ನಂಬರಗಳನ್ನು ಬದಲಾವಣೆ ಮಾಡಿ 2015ರಲ್ಲಿ ನಡೆದ ಚುನಾವಣೆಯ ಪ್ರಕಾರವೇ ಮೀಸಲಾತಿ ಬರುವಂತೆ ಮಾಡಿ ಜಿಲ್ಲಾ ಚುನಾವಣಾ ಅಧೀಕಾರಿಗಳು ಹೊರಡಿಸಿದ್ದ ಅಧಿಸೂಚನೆಯನ್ನು ಉದ್ದೇಶಪೂರ್ವಕವಾಗಿ ಇನ್ನೊಬ್ಬರ ಅನುಕೂಲಕ್ಕಾಗಿ ಚುನಾವನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
2015ರ ಮೀಸಲಾತಿಯೇ 2020ರ ಚುನವಣೆಗೆ:
2015ರಲ್ಲಿ ನಡೆದ ಗ್ರಾಮ ಪಂಚಾಯತತಿ ಚುನಾವಣೆಯ ಮೀಸಲಾತಿಗಳನ್ನು ಮರಳಿ ಅದೇ ಕ್ಷೇತ್ರಕ್ಕೆ ತರುವ ಹುನ್ನಾರು ಮಾಡಿದ ಸ್ಥಳೀಯ ಅಧಿಕಾರಿಗಳು ಪಂಚಾಯತಿ ಕ್ಷೇತ್ರಗಳ ಸಂಖ್ಯೆ ಬದಲಾವಣೆ ಮಾಡಿದ್ದಾರೆ. ಇದರಿಂದ 2015ರಲ್ಲಿ ಬಿದರಕುಂದಿ ಪಂಚಾಯತಿಯ ಕ್ಷೇತ್ರ-1 ಇದ್ದ ಅನುಸೂಚಿತ ಮಹಿಳೆ, ಹಿಂದುಳಿದ ವರ್ಗ ಅ ಹಾಗೂ ಸಾಮಾನ್ಯ ಮಹಿಳೆ ಮೀಸಲಾತಿಯು 2020ರಲ್ಲಿ ಅಧಿಕಾರಿಗಳು ಬದಲಾವಣೆ ಮಾಡಿದ ಕ್ಷೇತ್ರ-3ಕ್ಕೆ ಬಂದಿವೆ. ಅಲ್ಲದೇ 2015ರ ಬಿದರಕುಂದಿ ಪಂಚಾಯತಿಯ ಕ್ಷೇತ್ರ-3ಕ್ಕೆ ಇದ್ದ ಅನುಸೂಚಿ ಜಾತಿ, ಸಾಮಾನ್ಯ ಹಾಗೂ ಸಾಮಾನ್ಯ ಮಹಿಳಾ ಮೀಸಲಾತಿಯು 2020ರಲ್ಲಿ ಅಧಿಕಾರಿಗಳು ಬದಲಾವಣೆ ಮಾಡಿದ ಕ್ಷೇತ್ರ-1ಕ್ಕೆ ಬಂದಿವೆ.
ಕೂಡಲೇ ಬಿದರಕುಂದಿ ಪಂಚಾಯತಿಯ ಕ್ಷೇತ್ರದ ಸಂಖ್ಯೆ 1 ಮತ್ತು 3ರಕ್ಕೆ ನಡೆದ ಚುನಾವಣೆಯನ್ನು ರದ್ದುಗಿಳಿಸಿ ಎರಡೂ ಕ್ಷೇತ್ರಗಳಿಗೆ ಮರು ಚುನಾವಣೆ ಮಾಡಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು ಕೂಡಲೇ ಬೇಡಿಕೆಗೆ ಸ್ಪಂಧಿಸಬೇಕೆಂದು ಗ್ರಾಮದ ಮುಖಂಡರಾದ ಗಿರೀಶ ಬಿಜ್ಜೂರ(ವಕೀಲರು), ಕೆ.ಕೆ.ಬನ್ನೆಟ್ಟಿ, ಚನ್ನಮಲ್ಲಪ್ಪ ಕಡೂರ, ಸಂತೋಷ ಬಾದರಬಂಡಿ ಆಗ್ರಹಿಸಿದ್ದಾರೆ.
Be the first to comment