ರಾಜ್ಯ ಸುದ್ದಿಗಳು
ಮಸ್ಕಿ
ಅಕಾಲಿಕ ಮಳೆಯಿಂದ ತಾಲೂಕಿನಾದ್ಯಂತ 75 ಬಿದ್ದ ಮನೆಗಳು ಮತ್ತು ಐದು ಹೋಬಳಿ ಕೇಂದ್ರದ ರೈತರಿಗೆ ಬೆಳೆ ಪರಿಹಾರ ಸಿಗದೆ ಪರದಾಡುವಂತಾಗಿದೆ. ತಾಲೂಕಿನಾದ್ಯಂತ 43.81 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಅದರಂತೆ 16,672 ಜನ ರೈತರ ಖಾತೆಗಳಿಗೆ ಬೆಳೆ ಪರಿಹಾರ ಹಣ ಜಮಾ ಮಾಡಲಾಗಿದೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ರೈತರ ತಮ್ಮ ಬೆಳೆ ಪರಿಹಾರ ಬಂದಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .10 ಕೋಟಿ 80 ಲಕ್ಷ ರೂಪಾಯಿ ಬೆಳೆ ಪರಿಹಾರ ರೈತರ ಖಾತೆಗೆ ಜಮಾ ಆಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದರಿಂದ ಜಮಾ ಆಗದ ರೈತರು ತಾಲೂಕು ಕಾರ್ಯಾಲಯಕ್ಕೆ ಬಂದು ಮಾಹಿತಿ ಕೇಳಿದರೆ ಸರಿಯಾದ ಮಾಹಿತಿ ನೀಡದ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ನಿರ್ಲಕ್ಷದಿಂದ ಇನ್ನು ಹಲವಾರು ರೈತರಿಗೆ ಬೆಳೆ ಪರಿಹಾರ ಜಮಾ ಆಗಿರುವುದಿಲ್ಲ. ತಾವುಗಳು ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ರೈತರ ಖಾತೆಗಳಿಗೆ ತಕ್ಷಣವೇ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ರಿ) ಮಸ್ಕಿ ( ಪ್ರೋ .ಬಿ. ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಮುಖಂಡರು ಹಾಗೂ ಹಸಿರು ಸೇನೆಯು ಶುಕ್ರವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಡಾ” ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಮುಖ್ಯರಸ್ತೆಯಲ್ಲಿ ಸಂಚರಿಸಿ, ಮಳೆಯಿಂದ ಹಾನಿಗೊಳಗಾದ ರೈತರಿಗೆ, ಮನೆ ಹಾನಿಯಾದವರಿಗೆ ಪರಿಹಾರ ನೀಡದ ತಾಲೂಕ ಆಡಳಿತದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ತಹಶೀಲ್ದಾರರ ಕಾರ್ಯಾಲಯದ ಮುಂದೆ ಮನವಿ ಪತ್ರ ಸಲ್ಲಿಸಲು ಮುಂದಾದ ಹೋರಾಟಗಾರರು ಆ ಸಮಯಕ್ಕೆ ತಹಶೀಲ್ದಾರರು ಇಲ್ಲದ ಕಾರಣ ಸ್ಥಳದಲ್ಲೇ ತಹಶೀಲ್ದಾರರ ವಿರುದ್ಧ ಘೋಷಣೆ ಕೂಗಿದರು. ನಂತರ ಮನವೊಲಿಸಲು ಬಂದಂತಹ ಶಿರಸ್ತೇದಾರ್ ಹಾಗೂ ಗ್ರೇಡ್ 2 ಅಧಿಕಾರಿಗಳು ಅವರ ಮಾತಿಗೆ ಪ್ರತಿಯುತ್ತರವಾಗಿ ಹೇಳುತ್ತಾ ನಾವು ದಂಡಾಧಿಕಾರಿಯಲ್ಲದೆ ಬೇರೆ ಯಾವ ಅಧಿಕಾರಿಗೂ ನಾವು ಮನವಿ ನೀಡುವುದಿಲ್ಲ ಎಂದು ಸುಡು ಬಿಸಿಲಿನಲ್ಲಿಯೇ ಧರಣಿಗೆ ಕೂತರು.ನಂತರ ಬಂದ ದಂಡಾಧಿಕಾರಿಗಳು ಬರು ಬರುತ್ತಲೇ ಧಿಕ್ಕಾರದ ಘೋಷಣೆ ಗೂಗಿದರು. ಹಿರಿಯ ಹೋರಾಟಗಾರ ಹನುಮಂತಪ್ಪ ವೆಂಕಟಾಪುರ ಮತ್ತು ಕವಿತಾ . ಆರ್ ದಂಡಾಧಿಕಾರಿಗಳ ನೇರಾ ನೇರ ಮಾತಿನ ಚಕಮಕಿ ನಡೆಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿ ಸಂ ಸಂಚಾಲಕರಾದ ಹನುಮಂತಪ್ಪ ವೆಂಕಟಾಪುರ ಮಾತನಾಡಿ, ತಾಲ್ಲೂಕಿನಲ್ಲಿ ಮಳೆಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನೆಲ ಕಚ್ಚಿದೆ. ರೈತ ಕುಟುಂಬ ಸಂಕಷ್ಟದಲ್ಲಿ ಇದೆ. ಇದುವರೆಗೂ ತಾಲ್ಲೂಕು ಆಡಳಿತ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೆಲವು ರೈತರು ಖಾತೆಗೆ ಬೆಳೆಪರಿಹಾರ ಜಮಾ ಆಗಿದ್ದು, ಇನ್ನೂ ಅನೇಕ ಗ್ರಾಮಗಳ ಇತರ ಖಾತೆಗಳಿಗೆ ಬೆಳೆ ಪರಿಹಾರ ಮೊತ್ತ ಅಧಿಕಾರಿಗಳ ನಿರ್ಲಕ್ಷದಿಂದ ಜಮಾ ಆಗದೆ ಇದ್ದು.ರೈತರು ತಾಲೂಕು ಕಚೇರಿಗೆ ಬಂದು ಅಧಿಕಾರಿಗಳನ್ನು ವಿಚಾರಿಸಿದರೆ ಸರಿಯಾದ ಮಾಹಿತಿ ಕೊಡದೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಅಂತ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಮತ್ತು ಬೆಳೆ ನಷ್ಟವಾದ ರೈತರ ಖಾತೆಗೆ ತಕ್ಷಣವೇ ಹಣ ಜಮಾ ಮಾಡಬೇಕು ನಿರ್ಲಕ್ಷ ಧೋರಣೆ ತೋರಿದ್ದಾರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಾಗೂ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ಕವಿತಾ. ಆರ್ ಇವರಲ್ಲಿ ಮನವಿ ಪತ್ರ ಕೊಡುವುದರ ಮುಖಾಂತರ ಎಚ್ಚರಿಸಿದ್ದಾರೆ. ನಂತರ ಮಾತನಾಡಿದ ತಾಲೂಕಾ ದಂಡಾಧಿಕಾರಿಯೂ ಇನ್ನುಳಿದ ರೈತರಿಗೆ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಲ್ಲಯ್ಯ ಬಳ್ಳಾ ಮಸ್ಕಿ, ಸುರೇಶ್ ಅಂತರಗಂಗಿ , ಮೌನೇಶ್ ಸುಲ್ತಾನಪುರ ತಾಲೂಕ ಸಂಚಾಲಕರು, ಸೋಮನಾಥ್ ಗೋನಾಳ, ನಾಗರಾಜ ಕುಣಿಕೆಲ್ಲೂರ್ ತಾಲೂಕ ಸಂಚಾಲಕರು, ಕುಪ್ಪಣ್ಣ ಗ್ರಾ.ಪಂ ಸದಸ್ಯರು ಮೆದಿಕಿನಾಳ,ಸಂಪತ್ ನಂಜಲದಿನ್ನಿ, ಶೇಖರಪ್ಪ ಅಮೀನಗಡ, ಬಸಣ್ಣ ಕಾರಲಕುಂಟೆ ಮೆದಿಕಿನಾಳ, ಹನುಮಂತ ಹಂಪನಾಳ, ಜಯಪ್ಪ ಮೆದಿಕಿನಾಳ, ಹನುಮಂತ ಮೆದಿಕಿನಾಳ, ದಾನಪ್ಪ ಮೆದಿಕಿನಾಳ, ಶಿವ ಬಸನಗೌಡ ಪರೆಡ್ಡಿ ಮೆದಿಕಿನಾಳ, ಬೆಂಜಪ್ಪ ಅಂತರಗಂಗಿ, ಶೇಖರಪ್ಪ ಭಜಂತ್ರಿ ಮೆದಿಕಿನಾಳ, ಮದರ್ ಸಾಬ್ ಚೌದ್ರಿ, ಪೋಲೀಸ್ ಇಲಾಖೆ ಸೇರಿದಂತೆ ಇನ್ನಿತರ ರೈತರು ಭಾಗಿಯಾಗಿದ್ದರು.
Be the first to comment