ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ನವನಗರದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿದ್ಯಾನಿಕೇತನ ಮತ್ತು ರೀಚ್ ಸಂಸ್ಥೆ ಬಾಗಲಕೋಟೆ ಇವರ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ತಾಲೂಕ ಮಟ್ಟದ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಬಾಲ್ಯವಿವಾಹ ನಿಷೇಧ ಹಾಗೂ ಬಾಲ್ಯವಿವಾಹ ನಿಷೇಧ ಆಂದೋಲನಾ ಕುರಿತಾದ ಬಿತ್ತಿಪತ್ರಗಳನ್ನು ಮಾನ್ಯ ಟಿ.ಬೂಬಾಲನ್, ಮುಖ್ಯ ಕಾರ್ಯನಿರ್ವಾಹಕಾದಿಕಾರಿಗಳು,ಜಿ.ಪಂ ರವರಿಂದ ಬಿಡುಗಡೆ ಮಾಡುವ ಮುಖಾಂತರ ಉದ್ಘಾಟನೆ ಮಾಡಲಾಯಿತು.
ಉದ್ಘಾಟನಪರ ಮಾತುಗಳನ್ನಾಡಿದ ಟಿ, ಭೂಬಾಲನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಬಾಗಲಕೋಟೆ ಇವರು ರೀಚ್ ಸಂಸ್ಥೆಯವರು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸಂಬಂದಿಸಿದ ಕಾರ್ಯಕ್ರಮಗಳನ್ನು ಅಚ್ಚು ಕಟ್ಟಾಗಿ ಮಾಡುತ್ತಿದಾರೆ. ಇದೇ ರೀತಿ ಈ ದಿನ ಬಾಲ್ಯವಿವಾಹ ನಿಷೇಧ ಕುರಿತು ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ನನಗೆ ಖುಷಿ ವಿಚಾರ. ಬಾಲ್ಯವಿವಾಹ ತಡೆಯುವುದು ಇದು ಎಲ್ಲಾ ಅಧಿಕಾರಿಗಳ ಕರ್ತವ್ಯ ಅಲ್ಲದೆ ಸಮಾಜದ ಕರ್ತವ್ಯವಾಗಿದೆ. ಬಾಲ್ಯವಿವಾಹ ಅನ್ನೋದು ಮೊದಲು ಕಾಲೇಜುಗಳಿಂದ ಮತ್ತು ಪ್ರೌಢಶಾಲೆಯಲ್ಲಿ ಕಂಡುಬರುತ್ತಿವೆ ಅದಕ್ಕಾಗಿ ಶಿಕ್ಷಣ ಇಲಾಖೆಯವರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಪ್ರತಿಯೊಂದು ಶಾಲೆಯಲ್ಲಿ ಮಹಿಳಾ ಆಪ್ತ ಸಮಾಲೋಚಕರನ್ನು ನೇಮಕ ಮಾಡಲಾಗಿದೆ. ಅವರ ಮುಖಾಂತರ ಮಕ್ಕಳ ಸಮಸ್ಯೆಗಳನ್ನು ವ್ಯಕ್ತಪಡಿಸಬೇಕು ಮತ್ತು ಸಮುದಾಯದಲ್ಲಿ ಮಕ್ಕಳ, ಮಹಿಳಾ ಗ್ರಾಮ ಸಭೆಗಳಲ್ಲಿ ಬಾಲ್ಯವಿವಾಹ ನಿಷೇಧ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಮುಖ್ಯ ಅತಿಥಿಗಳಾದ ಶ್ರೀಮತಿ ಭಾರತಿ ಬಣಕಾರ್ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಗಲಕೋಟೆ ಇವರು ಬಾಲ್ಯವಿವಾಹ ಕುರಿತು ಮಾತನಾಡುತ್ತಾ ಇದು ಅನಿಷ್ಟ ಪದ್ಧತಿಯಾಗಿದ್ದು, ಮೊದಲು ಸಮುದಾಯದಲ್ಲಿ ಬಾಲ್ಯವಿವಾಹ ಆಯೋಜನೆ ಮಾಡದಂತೆ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಜನರಿಗೆ ಪಾಲಕರಿಗೆ ಅರಿವು ಮೂಡಿಸಬೇಕು. ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ತಿಳಿಸಬೇಕು ರಾಜ್ಯಮಟ್ಟದಲ್ಲಿ ೫೦ ಇಲಾಖೆಗಳಿಗೆ ಬಾಲ್ಯವಿವಾಹ ನಿಷೇಧ ಅಧಿಕಾರ ನೀಡಿದೆ. ಬಾಲ್ಯವಿವಾಹ ತಡೆಯುವುದು ಸಮುದಾಯ ಜನರ, ಬಾಲ್ಯವಿವಾಹ ನಿಷೇಧ ಅಧಿಕಾರಿ, ಸರ್ಕಾರ ಹಾಗೂ ಎಲ್ಲರ ಜವಾಬ್ದಾರಿಯಾಗಿರುತ್ತದೆ. ಬಾಲ್ಯವಿವಾಹ ಮಾಡುವುದರಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆ ಯಾಗುತ್ತದೆ. ಆರೋಗ್ಯಕ್ಕೆ ಹಾನಿಕರಕವಾಗುತ್ತದೆ, ರಕ್ತಹೀನತೆಯಿಂದ ಮಗುವಿನ ಜನನವಾಗುತ್ತದೆ. ಇದರ ಸಲುವಾಗಿ ಕೇಂದ್ರ ಸರ್ಕಾರದಲ್ಲಿ ಮದುವೆಯ ವಯಸ್ಸು ಹೆಚ್ಚಾಗುವಂತೆ ಜಾರಿಗೆ ಬಂದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಮೊದಲು ನಾವೆಲ್ಲ ಸಿಎಂಪಿಓಗಳು ಸಮುದಾಯದ ಜನರಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮಗಳ ಅರಿವನ್ನು ಮೂಡಿಸುವ ಕೆಲಸ ಮಾಡಬೇಕೆಂದು ವೇದಿಕೆಯ ಮುಖಾಂತರ ಎಲ್ಲಾ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಗಳುಬಿ ಎಮ್ ದುಂಡಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಗುಳೇದಗುಡ್ಡ ಬಾಲ್ಯವಿವಾಹ ವಿಷಯಕ್ಕೆ ಸಂಬಂಧಿಸಿದ ಪೋಕ್ಸೋ ಕಾಯ್ದೆ ಬಗ್ಗೆ ಕೌಟುಂಬಿಕ ದೌರ್ಜನ್ಯ ಕುರಿತು ಅತ್ಯಾಚಾರದ ಬಗ್ಗೆ ಹಾಗೂ ಸೆಕ್ಷನ್‌ಗಳ ಬಗ್ಗೆ ಸವಿವರವಾಗಿ ಮಾಹಿತಿಗಳನ್ನು ನೀಡಿದರು. ಮತ್ತು ಜೆಜೆಬಿ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳನ್ನು ಮಕ್ಕಳ ರಕ್ಷಣೆ ಬಗ್ಗೆ ಪೊಲೀಸ್ ಇಲಾಖೆಯವರು ಬಾಲ್ಯವಿವಾಹ ತಡೆಯುವಲ್ಲಿ ತಮ್ಮ ಪಾತ್ರ ಮತ್ತು ಕರ್ತವ್ಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿಗಳನ್ನು ತಿಳಿಸಿದರು.
ಸುಧಾ ಜಗಲಿ ಆಂದೋಲನದ ನಾಯಕರು, ಅವರ ಅನುಭವ ಹಂಚಿಕೊಳ್ಳುತ್ತಾ ನನ್ನದು ಬಾಲ್ಯ ವಿವಾಹವಾಗಿದೆ ನಾನು ಗರ್ಬೀಣಿ ಇದ್ದಾಗ ನನಗೆ ಹೇಗೆ ಇರಬೇಕು ಎಂದು ಗೊತ್ತಿರಲಿಲ್ಲ. ಹೆರಿಗೆಯ ಸಂದರ್ಭದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೇನೆ. ಸಿಜಿರಿನ ಆಯ್ತು ನನ್ನ ಬಾಲ್ಯವನ್ನು ಕಳೆದುಕೊಂಡು ಈಗ ಅನಿಸುತ್ತಿದೆ ಬಾಲ್ಯ ಹಾಗೂ ಶಿಕ್ಷಣ ಎರಡು ಕಳೆದುಕೊಂಡಿದ್ದೇನೆ, ಈಗ ೧೦ನೇ ತರಗತಿಗೆ ಪರೀಕ್ಷೆಗೆ ಹಚ್ಚಿದ್ದೇನೆ. ಇದು ನನಗೆ ಇಮೇಜ್ ಯೋಜನೆಯ ಸಹಾಯದಿಂದ ಬದಲಾವಣೆ ಹಾಗೂ ನಮ್ಮ ಮನೆಯಲ್ಲಿ ಅವಕಾಶ ನೀಡಿದ್ದಾರೆ. ನಾನು ಆಂದೋಲನದ ನಾಯಕಳಾಗಿ ನಮ್ಮ ಗ್ರಾಮದಲ್ಲಿ ಬಾಲ್ಯವಿವಾಹವಾಗದಂತೆ ನೋಡಿಕೊಳ್ಳುತ್ತೇನೆ. ಸಮುದಾಯದ ಜನರಿಗೆ ಬಾಲ್ಯವಿವಾಹದ ದುಷ್ಪರಿಣಾಮಗಳ ಅರಿವನ್ನು ಮೂಡಿಸಿ ಶಾಲೆಗೆ ಹೋಗಿ ಗಂಡು ಮಕ್ಕಳಿಗೂ ಕೂಡ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತೇನೆ. ಬಾಲ್ಯ ವಿವಾಹ ಕಂಡುಬಂದಲ್ಲಿ ೧೦೯೮ ಕರೆ ಮಾಡುತ್ತೇನೆಂದು ತಿಳಿಸಿದರು.
ಕುಮಾರ್ ರವರು ಬಾಲ್ಯವಿವಾಹ ನಿಷೇಧ ಮಾಡಲು ಬಾಲ್ಯವಿವಾಹ ನಿಷೇಧ ಅಧಿಕಾರಿಗಳ ಪಾತ್ರ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತಾಗಿ ಹಾಗೂ ಇಲಾಖೆಯ ಸೌಲಬ್ಯ ಮತ್ತು ೧೭ ಸುಸ್ಥಿರ ಅಭಿವೃದ್ದಿ ಗುರಿಗಳು ಜೊಡಣೆ ಮಾಡಿ ೨೦೩೦ಕ್ಕೆ ಬಾಲ್ಯವಿವಾಹ ಇಲ್ಲದಂತೆ ಮಾಡಲು ಎಲ್ಲರೂ ಶ್ರಮಿಸಬೇಕು. ಮಾನ್ಯ ಟಿ.ಬೂಬಾಲನ್, ಮುಖ್ಯ ಕಾರ್ಯನಿರ್ವಾಹಕಾದಿಕಾರಿಗಳು, ಜಿ.ಪಂ ರವರು ಸುರಕ್ಷಿಣಿ ಎನ್ನುವ ಜಾಲತಾಣ ಮೂಲಕ ಬಾಲ್ಯವಿವಾಹದಿಂದ ರಕ್ಷಿಸಲ್ಪಟ್ಟ ಮಕ್ಕಳ ಹಾಗೂ ಬಾಲ್ಯವಿವಾಹವಾದ ಮಕ್ಕಳ ಅನುಸರಣೆ ಮಾಡುವ ತಂತ್ರಾಂಶ ಅವಿಷ್ಕಾರ ಮಾಡಿದ್ದಾರೆ ಇದು ನಮ್ಮ ಬಾಗಲಕೋಟೆಗೆ ಹೆಮ್ಮೆಯ ವಿಚಾರ. ಇದು ರಾಜ್ಯ ವ್ಯಾಪ್ರಿ ಎಲ್ಲಾ ಜಿಲ್ಲೆಗಳಿಗೆ ಪರಿಚಯಿಸುವ ಪ್ರಯತ್ನ ಇಲಾಖೆಯಿಂದ ಆಗುತ್ತಿದೆ. ಇನ್ನೂ ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಇಳಿಕೆಯಾಗಲು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ಉಪನ್ಯಾಸದಲ್ಲಿ ತಿಳಿಸದರು.
ಮ.ಮ.ಅ.ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ನಗರಸಭೆ, ಪಂಚಾಯತ್ ರಾಜ್ ಇಲಾಖೆಗಳಿಂದ ೬೦ ಅಧಿಕಾರಿಗಳು ಬಾಗವಹಿಸಿದ್ದರು.
ಪ್ರಾರ್ಥನೆ ಶ್ರೀಮತಿ ಶಾರದಾ ಬಜಂತ್ರಿ, ಸ್ವಾಗತ ಶ್ರೀಮತಿ ರೇಖಾ ಬಡಿಗೇರ್, ನಿರೂಪಣೆ ಶ್ರೀಮತಿ ಮಹಾನಂದ ಟಕ್ಕಳಕಿ ವಂದನಾರ್ಪಣೆ ಶ್ರೀಮತಿ ಶೈಲಾ ಮೆಣಸಗಿ ನಡೆಸಿಕೊಟ್ಟರು.
Be the first to comment