ಜಿಲ್ಲಾ ಸುದ್ದಿಗಳು
ಕುಂದಾಪುರ
‘ಧೈರ್ಯಂ ಸರ್ವತ್ರ ಸಾಧನಂ”‘ ಪರೀಕ್ಷೆ ಮಾತ್ರವಲ್ಲ ಬದುಕನ್ನು ಎದುರಿಸಲು ಧೈರ್ಯವೇ ಸಾಧನ ನಿಮ್ಮ ತಂದೆತಾಯಿ ನಿಮ್ಮ ಮೇಲಿಟ್ಟಿರುವ ಕನಸು ನನಸಾಗಿಸಲಾದರೂ ಚೆನ್ನಾಗಿ ಓದಿ ಸೋಲಿನ ಬಿಸಿ ಅನುಭದಿಸಿದಾಗಲೇ ಗೆಲುವಿನ ಆನಂದ ಹಿತವೆನಿಸುತ್ತದೆ. ಯಾವುದೇ ಯಶಸ್ಸು ಅಂತಿಮವಲ್ಲಾ ಸೋಲು ಕೊನೆಯಲ್ಲಾ ಇವೆರಡನ್ನು ಸರಿದೂಗಿಸಿಕೊಂಡು ಸಾಗುವ ಧೈರ್ಯವೇ ಬದುಕು “ಎಂದು ದಿನಾಂಕ 12 ರಂದು ಬುಧವಾರ ಸರಕಾರಿ ಪದವಿ ಪೂರ್ವ ಕಾಲೇಜ್ ಕುಂದಾಪುರ ಇಲ್ಲಿನ ಪ್ರೌಢಶಾಲಾ ವಿಭಾಗದ ಎನ್‌ಎಸ್‌ಎಸ್ ಘಟಕ ಹಾಗೂ ಜೇಸಿಐ ಕುಂದಾಪುರ ಸಿಟಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯೂತ್ ಡೇ . – ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನಡೆದ ಸೋಲು ಅಂತಿಮವಲ್ಲ” ಮಾಹಿತಿ ಕಾರ್ಯಗಾರದಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ ಇಲ್ಲಿನ ಸಾಹಿತಿ ಶಿಕ್ಷಕ ನರೇಂದ್ರಕುಮಾರ್ ಕೋಟ ಇವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮಾಹಿತಿ ಕಾರ್ಯಾಗಾರವನ್ನು ಮೂಡುಗೋಪಾಡಿ ಉದ್ಯಮಿಗಳಾದ ಅಬ್ದುಲ್ ಖಾದರ್ ಇವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿ ಸಂಸ್ಥೆಯ ಪ್ರಾಂಶುಪಾಲರಾದ ರಾಮಕೃಷ್ಣ ಬಿ ಜಿ ಮಾತನಾಡಿ ಶೈಕ್ಷಣಿಕ ಜೀವನದಲ್ಲಿ ಆಕರ್ಷಣಿ ಸಹಜ ಈ ಅವಧಿಯಲ್ಲಿ ನೀವು ದಾರಿ ತಪ್ಪಬಹುದು ಆದರೆ ದಿಕ್ಕು ತಪ್ಪಬಾರದು. ಗೆಲುವು ಅಂತಿಮವಲ್ಲ ಸೋಲು ಅವಮಾನವಲ್ಲ ಬದುಕಿನಲ್ಲಿ ಹೋರಾಟ ಮುಖ್ಯ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮಾಧಿಕಾರಿ ಉದಯ ಮಡಿವಾಳ ಎಂ ಪ್ರಾಸ್ತಾವಿಕ ಮಾತುಗಳನ್ನಾಡಿದರು ಸಂಸ್ಥೆಯ ಉಪ ಪ್ರಾಂಶುಪಾಲರಾದ ವಿನುತಾ ಗಾಂವಕರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದದ್ದರು. ಎನ್‌ಎಸ್‌ಎಸ್ ಘಟಕದ ನಾಯಕಿ ಆಮೂಲ್ಯ ವ್ಯಕ್ತಿ ಪರಿಚಯ ಮಾಡಿದರು.ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿ ಇದರ ಅಧ್ಯಕ್ಷರಾದ ಅಭಿಲಾಷ್ ಬಿ. ಎ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎನ್‌ಎಸ್‌ಎಸ್ ಘಟಕದ ಸ್ವಯಂ ಸೇವಕ ಪೃಥ್ವಿರಾಜ್ ನಿರೂಪಿಸಿದರು. ಐಶ್ವರ್ಯ ಸ್ವಾಗತಿಸಿ, ಸುಶ್ಮಿತಾ ವಂದಿಸಿದರು.
Be the first to comment