ಜಿಲ್ಲಾ ಸುದ್ದಿಗಳು
ಭಟ್ಕಳ
ಭಟ್ಕಳ ತಾಲೂಕಿನ ಭಾರತ ವಿಕಾಸ ಪರಿಷತ್ ಘಟಕದ ವತಿಯಿಂದ ಮೂಡ ಭಟ್ಕಳ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಸಂಘಟನೆಯ ಅಧ್ಯಕ್ಷ ಪ್ರಕಾಶ ನಾಯ್ಕ ಅವರ ಸಾರಥ್ಯದಲ್ಲಿ ಮಾತೃವಂದಾನಾ ಗುರುವಂದಾ ಹಾಗು ಚಾತ್ರವಂದನಾ ಕಾರ್ಯಕ್ರಮವನ್ನು ನಡೆಸಲಾಯಿತುಸಂಘಟನೆಯ ನಿಕಟ ಪೂರ್ವ ಅಧ್ಯಕ್ಷರಾದ ವಿರೇಂದ್ರ ಶಾನಬಾಗ್ ಅವರು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ಇಂದು ನಡೆಯಲಿರು ಕಾರ್ಯಕ್ರಮ ನಮ್ಮ ಸಂಸ್ಕ್ರತಿಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮವಾಗಿದೆ ನಮ್ಮ ಸಂಘಟನೆ ಇತರೆ ಸಂಘಟನೆಯಂತಲ್ಲಾ ನಮ್ಮ ಸಂಘಟನೆ ದೇಶಾಬಿಮಾನ ಪರಂಪರೆ ಸಂಸ್ಕ್ರತಿಗಳನ್ನು ಉಳಿಸಿಕೊಂಡುಹೊಗುವ ಸಂಘಟನೆಯಾಗಿದೆ ಇನ್ನು ಮುಂದು ಕೂಡ ನಾವು ಇಂತಹ ಅರ್ಥಪೂರ್ಣ ಕಾಯಕ್ರಮವನ್ನು ಮಾಡುವವರಿದ್ದೆವೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘಟನೆಯ ಅಧ್ಯಕ್ಷರಾದ ಪ್ರಕಾಶ ನಾಯ್ಕ ಮಾತನಾಡಿ ಇತ್ತಿಚೆಗೆ ನಮ್ಮ ಯುವ ಸಮಾಜ ದೇಶಾಭಿಮಾನ ನಮ್ಮ ಪರಂಪರೆ ಸಂಸ್ಕ್ರತಿಯನ್ನು ಮರೆಯುತ್ತಾ ಬರುತ್ತಿರುವದು ತುಂಬಾ ವಿಶಾದನಿಯ ಸಂಗತಿಯಾಗಿದೆ ಇದನ್ನು ಮನಗಂಡ ನಾವು ನಮ್ಮ ಸಂಘಟನೆಯ ಮೂಲಕ ಮಾತೃವಂದನಾ ಗುರುವಂದನಾ ಛಾತೃ ವಂದನಾಗಳಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೆವೆ ಇದು ನಮ್ಮ ಪ್ರಾರಂಭ ಅಷ್ಟೆ ಇನ್ನು ಮುಂದೆ ಇಂತಹ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವವರಿದ್ದೆವೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು
ಕಾರ್ಯಕ್ರಮದ ಮೊದಲು ಭಾರತ ಮಾತೆ ಹಾಗು ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು ,ಕಾರ್ಯಕ್ರಮದಲ್ಲಿ ಮಾತೆಯರಿಗೆ ಅವರ ಮಕ್ಕಳು ವಂದಿಸಿದ್ದು ನಮ್ಮ ಸಂಸ್ಕ್ರತಿಯ ಘನತೆಯನ್ನು ಎತ್ತಿ ತೋರಿಸುತ್ತಿತ್ತು. ಗುರುಗಳಾ ಶ್ರೀಮತಿ ರಾಜೇಶ್ವರಿ ಹೆಗಡೆ, ಶ್ರೀಮತಿ ಪ್ರತಿಭಾ ಕರ್ಕಿಕರ್ , ಶ್ರೀಮತಿ ರೇಶ್ಮಾ ನಾಯ್ಕ ಶ್ರೀಮತಿ ಗೀತಾ ಶೀರೂರ ಇವರಿಗೆ ಭಾರ್ತ ವಿಕಾಸ ಪರೀಷತ್ ವತಿಯಿಂದ ವಿಧ್ಯಾರ್ಥಿಗಳು ಗುರುನಮನವನ್ನು ಸಲ್ಲಿಸಿದರು ನಂತರ ವಿಧ್ಯಾರ್ಥಿಗಳಿಗೆ ಶಿಷ್ಯ ಪುರಸ್ಕಾರವನ್ನು ನಿಡಲಾಯಿತುಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು ಪ್ರಾರ್ಥನೆ ಮತ್ತು ಸ್ವಾಗತ ಗೀತೆಯನ್ನು ಹಾಡಿದರು, ಹಾಗು ಸಂಘಟನೆಯ ಪ್ರಭು ಅವರು ನಿರೂಪಣೆ ಮಾಡಿದರು ಹಾಗು ಸಂಘಟನೆಯ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಅವರು ಗಣ್ಯಾತಿಗಣ್ಯರನ್ನು ಸ್ವಾಗತಿಸಿದರೆ ಸಂಘಟನೆಯ ಉಪಾಧ್ಯಕ್ಷರಾದ ಶೈಲೆಂದ್ರ ಗೌಡಾ ಅವರು ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು
ಕಾರ್ಯಕ್ರಮದ ಕೊನೆಯಲ್ಲಿ ಮಾತೆಯರಿಗೆ ವಿಧ್ಯಾರ್ಥಿಗಳು ಮಾತೃವಂದನೆಯನ್ನು ಮಾಡಿದರು ಮುಖ್ಯವಾಗಿ ಈ ಕಾರ್ಯಕ್ರಮ ನಮ್ಮ ದೇಶದ ಘನತೆ ಪರಂಪರೆಯನ್ನು ಎತ್ತಿ ತೋರಿಸುತ್ತಿತ್ತು ಇಂತಹ ಕಾರ್ಯಕ್ರಮ ಪ್ರತಿಯೋಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯ ಬೇಕು ಈ ಕಾರ್ಯಕ್ರಮಕ್ಕೆ ಸ್ಥಳಿಯ ಪಂಚಾಯತ್ ಸಹಕಾರವನ್ನು ನೀಡಬೇಕು ಗಣ್ಯ ವ್ಯಕ್ತಿಗಳಿ ತಮ್ಮತನು ಮನ ಧನ ಸಹಕಾರವನ್ನು ಒದಗಿಸುವಂತಾಗ ಬೇಕು ಎಂದು ಭಟ್ಕಳ ತಾಲೂಕ ಭಾರತ ವಿಕಾಸ ಪರಿಷತ್ ಘಟಕ ಆಶಿಸುತ್ತಿದೆಕಾರ್ಯಕ್ರಮದಲ್ಲಿ ಖ್ಯಾತ ಕಣ್ಣಿನ ತಜ್ಞರಾದ ಡಾ ವಿಶ್ವನಾಥ ನಾಯ್ಕ , ಖ್ಯಾತ ಹಲ್ಲಿನ ತಜ್ಞರಾದ ರವಿ ನಾಯ್ಕ, ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ , ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಹೆಗಡೆ , ಸಂಪನ್ಮಾಲ ಅಧಿಕಾರಿ ರಾಘವೇಂದ್ರ ಅಡಿಗ ಗ್ರಾಮ ಪಂಚಾಯತ್ ಸದಸ್ಯೆ ಲಕ್ಷ್ಮಿ ನಾಯ್ಕ, ಸಂಘಟನೆಯ ಭಾರತ ವಿಕಾಸ ಪರಿಷತ್ತಿನ ಖಜಾಂಚಿ ಮಹೇಶ ನಾಯ್ಕ, ನಾಗೇಶ ನಾಯ್ಕ , ದೇವಯ್ಯ ನಾಯ್ಕ ರಾಮನಾಥ ಬಳೆಗಾರ ಹರ್ಷ ಅಡಿಗ , ವಸಂತ ನಾಯ್ಕ ಅರ್ಜುನ್ ಮಲ್ಯ ಮುಂತಾದವರು ಉಪಸ್ಥಿತರಿದ್ದರು.
Be the first to comment