ಜಿಲ್ಲಾ ಸುದ್ದಿಗಳು
ಮಸ್ಕಿ
ಸುಕ್ಷೇತ್ರ ಹಳ್ಳಿ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವೂ ವಿವಿಧ ಹಳ್ಳಿಗಳಿಂದ ಆಗಮಿಸಿದ ಜನತೆಯೊಂದಿಗೆ ಮಿಟ್ಟೆ ಕೆಲ್ಲೂರು – ಕುಣೆ ಕೆಲ್ಲೂರು ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿತು.ಶ್ರೀ ಮ.ನಿ.ಪ್ರ ಗುರು ಬಸವ ಮಹಾಸ್ವಾಮಿಗಳು ಹಾಗೂ ಶ್ರೀ ಘನಮಠೆಶ್ವರ ಮಠ ಸಂತೇಕೆಲ್ಲೂರು ಶ್ರೀಗಳ ಮತ್ತು ವೇದಿಕೆಯಲ್ಲಿ ನೆರೆದ ಸಕಲ ಗಣ್ಯರುಗಳ ನೇತೃತ್ವದಲ್ಲಿ ಅಕ್ಷತೆ ಹಾಕುವ ಮೂಲಕ ೧೯ ಜೋಡಿಗಳನ್ನು ಆಶೀರ್ವದಿಸಿದರು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಪ್ರಸನ್ನ ಪಾಟೀಲ್, ಎಚ್. ಬಿ ಮುರಾರಿ ಮಾಜಿ ಕೆಪಿಸಿಸಿ ಕಾರ್ಯದರ್ಶಿ, ಆರ್. ಬಸನಗೌಡ ತುರುವಿಹಾಳ ಶಾಸಕರು ಮಸ್ಕಿ ಇನ್ನಿತರ ಗಣ್ಯರು ಮಾತನಾಡಿದರು.ವೇದಿಕೆಯಲ್ಲಿ ನೆರೆದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಕ್ಕೆ ಸಹಾಯ ಹಸ್ತ ನೀಡಿದ ಸರ್ವರಿಗೂ ಶ್ರೀಗಳು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿಶ್ರೀ ಪೂಜ್ಯ ಷ.ಬ್ರ.ಮರಿ ಮಹಾಂತ ದೇವರು ಸಂತೇಕೆಲ್ಲೂರು,ಸಿದ್ದಯ್ಯ ಸ್ವಾಮಿ ಶ್ರೀ ಜ್ಞಾನೇಶ್ವರ ಮಠ ಮೇಗಳ ಪೇಟೆ ಮುದುಗಲ್, ಶ್ರೀ ಚಿದಾನಂದಯ್ಯ ಸ್ವಾಮಿ ಸಾ// ಹುನಕುಂಟೆ, ಶ್ರೀ ವೇದಮೂರ್ತಿ ಬಾಲಯ್ಯ ತಾತಾ , ಶ್ರೀ ಶರಣಯ್ಯ ತಾತಾ ಹುನಕುಂಟೆ, ಗವಿಸಿದ್ದಪ್ಪ ಸಾಹುಕಾರ ಸಂತೇಕೆಲ್ಲುರೂ, ಹನುಮಂತಪ್ಪ ಮುದ್ದಾಪೂರ, ರಾಘವೇಂದ್ರ ಬಳಗಾನೂರ, ಆದನಗೌಡ ದಳಪತಿ ಸಂತೇಕೆಲ್ಲೂರೂ, ಶರಣಗೌಡ, ಸಿದ್ದನಗೌಡ ಹಾಗೂ ವಿವಿಧ ಗ್ರಾಮದ ಜನತೆ ನೆರೆದಿದ್ದರು.
Be the first to comment