ರಾಜ್ಯ ಸುದ್ದಿಗಳು
ದೇವನಹಳ್ಳಿ
ಸ್ವಾಮಿ ವಿವೇಕಾನಂದರ ಆದರ್ಶಗಳು ಪ್ರತಿ ಯುವ ಪೀಳಿಗೆಗೆ ಸ್ಪೂರ್ತಿ ತರುವಂತಹದ್ದು ಎಂದು ಮಾತೃ ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಮೋಹನ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಇಲ್ಲತೊರೆ ಬಳಿಯ ಐವಿಸಿ ರಸ್ತೆಯಲ್ಲಿರುವ ಮಾತೃ ವಿದ್ಯಾನಿಕೇತನ ಶಾಲೆಯಲ್ಲಿ ಸರಳವಾಗಿ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗಬೇಕಾದರೆ ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ ಎಂದು ತಿಳಿಸುವುದರ ಮೂಲಕ ತಮ್ಮನ್ನು ತಾವೇ ಅತ್ಯುತ್ತಮ ವ್ಯಕ್ತಿಯೆಂದು ತೋರಿಸಿಕೊಟ್ಟಿದ್ದಾರೆ. ಮಾನವೀಯತೆಯ ವಿಕಾಸವಾಗುವುದೇ ನಿಜವಾದ ಶಿಕ್ಷಣವಾಗಿದೆ. ನಾವು ಬಲಿಷ್ಟರಾಗಬೇಕಾದರೆ ಕಷ್ಟಗಳನ್ನು ಎದುರಿಸಬೇಕು. ಅವರ ಒಂದೊಂದು ನುಡಿಗಳು ಯುವ ಪೀಳಿಗೆಗೆ ದಾರಿ ದೀಪವಾಗಿದೆ. ಪ್ರತಿಯೊಬ್ಬರು ಇಂತಹ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವುದರ ಮೂಲಕ ಅವರ ಆದರ್ಶ ತತ್ವಗಳನ್ನು ಪಾಲಿಸಬೇಕು. ಶಾಲಾ ಹಂತದಲ್ಲಿ ಶಿಕ್ಷಕರು ಮಕ್ಕಳಿಗೆ ಮಹಾನ್ ಪುರುಷರ ಬಗ್ಗೆ ಹೆಚ್ಚು ಮಾಹಿತಿ ನೀಡಿದರೆ ಮುಂದೊಂದು ದಿನ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತವರಾಗುತ್ತಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಸ್ವಾಮಿ ವಿವೇಕಾನಂದರ ಸಮವಸ್ತ್ರ ಧರಿಸಿರುವುದು ಗಮನಸೆಳೆಯಿತು. ಆಡಳಿತ ಮಂಡಳಿಯ ರಾಮ, ಶಾಲಾ ಪ್ರಾಂಶುಪಾಲ ಸುರೇಶ್, ಮುಖ್ಯಶಿಕ್ಷಕಿ ಸೌಮ್ಯ, ಶಾಲಾ ಸಿಬ್ಬಂದಿಗಳಾದ ಸೌಮ್ಯ, ಮಮತಾ, ನಿರ್ಮಲ ಮತ್ತಿತರರು ಇದ್ದರು.
Be the first to comment