ಜಿಲ್ಲಾ ಸುದ್ದಿಗಳು
ಭಟ್ಕಳ್
ಭಟ್ಕಳ ತಾಲೂಕಿನ ಮಾವಿನಕುರ್ವೆಯು ಕರಿಕಲ್‌ನಲ್ಲಿ ನೂತನವಾಗಿ ಆರಂಭಿಸಲಾದ ಶ್ರೀಸೀತಾರಾಮ ಸೌಹಾರ್ದ ಸಹಕಾರಿಯನ್ನು ಉಜಿರೆಯ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.ನಂತರ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಹೊಸದಾಗಿ ಆರಂಭಿಸಲಾದ ಸೌಹಾರ್ದ ಸಹಕಾರಿ ಉತ್ತಮ ಸೇವೆ ನೀಡುವುದರೊಂದಿಗೆ, ಬಡವರಿಗೆ ಅನುಕೂಲ ಮಾಡಿಕೊಡಬೇಕು. ಸಹಕಾರಿ ಸಂಘದಲ್ಲಿ ತರಿತ ಗುಣಮಟ್ಟದ ಸೇವೆ ಮತ್ತು ಪಾರದರ್ಶಕತೆ ಮುಖ್ಯ ಸಾರ್ವಜನಿಕರ ಠೇವಣಿಯ ರಕ್ಷಣೆ ಆಡಳಿತ ಸಿಬ್ಬಂದಿಗಳದ್ದಾಗಿದೆ. ಸಾಲ ಮಂಡಳಿ ಮತ್ತು ಪಡೆದವರೂ ಸಕಾಲಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಸಹಕಾರಿ ಉತ್ತಮವಾಗಿ ಬೆಳೆಯಲು ಅನುಕೂಲವಾಗುತ್ತದೆ, ಜಾತಿ, ಮತ ಬೇಧ ಯಾವುದೇ ತಾರತಮ್ಯ ಮಾಡಬಾರದು, ಸೀತಾರಾಮ ಸೌಹಾರ್ದ ಸಹಕಾರಿ ಹೆಮ್ಮೆರವಾಗಿ ಬೆಳೆದು ತರಿತ ಮತ್ತು ಉತ್ತಮಸೇವೆನೀಡಿ ನೂರಾರು ಶಾಖೆ ಸ್ಥಾಪಿಸುವಂತಾಗ ಬೇಕು ಪ್ರಸ್ತುತ ಸರಕಾರ ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎನಿಸುತ್ತಿದ್ದು, ಭಯ ಹುಟ್ಟಿಸುವಂತಾಗಿದೆ ಎಂದರು.
ಮಾಜಿ ಶಾಸಕ ಜೆ.ಡಿ. ನಾಯ್ಕ ಸಂಸ್ಥೆಯನ್ನು ಕಟ್ಟುವುದು ಸುಲಭ, ಆದರೆ, ನಡೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸ, ಸೀತಾರಾಮ ಸೌಹಾರ್ದ ಸಹಕಾರಿ ಉತ್ತಮ ಆಡಳಿತ ಮಂಡಳಿ ಹೊಂದಿದ್ದು, ಉತ್ತಮ ಬೆಳವಣಿಗೆ ಹೊಂದಲಿದೆ ಎನ್ನುವ ವಿಶ್ವಾಸ ಇದೆ ಎಂದರು.ಈ ಸಂದರ್ಭದಲ್ಲಿ ಕರಿಕಲ್ ಚರ್ಚಿನ ಫಾದರ್ ಲೊರೆನ್ಸ್, ಹಿರಿಯ ಸಹಕಾರಿ ಧುರೀಣ ಡಿ.ಬಿ. ನಾಯ್ಕ, ಭಟ್ಕಳ ಅರ್ಬನ್ ಕೋಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷ ಎಂ.ಆರ್.ನಾಯ್ಕ ಮಾತನಾಡಿದರು. ಸಹಕಾರಿ ಅಧ್ಯಕ್ಷ ವಿಠಲ್ ನಾಯ್ಕ ಸ್ವಾಗತಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ,ಮಾಜಿ ಶಾಸಕ ಮಂಕಾಳ ವೈದ್ಯ, ನಾಮಧಾರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಾ ನಾಯ್ಕ, ಎಂ.ಜಿ.ಎA. ಸೌಹಾರ್ದ ಸಹಕಾರಿಯ ಅಧ್ಯಕ್ಷ ಈರಪ್ಪಗರ್ಡಿಕರ್, ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗೋವಿಂದ ನಾಯ್ಕ, ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಗ್ರಾಪಂ ಉಪಾಧ್ಯಕ್ಷ ದಾಸಾ ನಾಯ್ಕ, ಜಾಲಿ ಸೊಸೈಟಿ ಅಧ್ಯಕ್ಷ ಮಂಜಪ್ಪ ನಾಯ್ಕ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
Be the first to comment